ಪೊಲೀಸರ ಪ್ರತಿಭಟನೆ : ಶಶಿಧರ್ ವೇಣುಗೋಪಾಲ್‌ಗೆ ಜಾಮೀನು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25 : ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪೊಲೀಸರ ಪ್ರತಿಭಟನೆಗೆ ಕರೆ ನೀಡಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

ಸರ್ಕಾರದ ವಿರುದ್ಧ ಸಮರ, ಒಳಸಂಚು ರೂಪಿಸಿದ ಆರೋಪದಡಿ ಜೂನ್ 1ರ ಮಧ್ಯರಾತ್ರಿ ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಎರಡು ತಿಂಗಳ ಬಳಿಕ ಜಾಮೀನು ಸಿಕ್ಕಿದೆ.[ಶಶಿಧರ್ ವೇಣುಗೋಪಾಲ್ ಬಂಧನ]

Karnataka high court grants bail to Shashidhar Venugopal

ಶಶಿಧರ್ ವೇಣುಗೋಪಾಲ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂ. ಬಾಂಡ್, ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ.[ಪೊಲೀಸರ ಪ್ರತಿಭಟನೆ, 31 ಬೇಡಿಕೆಗಳು]

ಷರತ್ತುಗಳು

* ಪೊಲೀಸರ ಸಭೆ ನಡೆಸಬಾರದು
* ಪೊಲೀಸರ ಮುಷ್ಕರಕ್ಕೆ ಕರೆ ನೀಡಬಾರದು
* ಸಾಕ್ಷಿ ನಾಶ ಮಾಡಬಾರದು [ಮರೆಯಲಾದಿತೇ ಪೊಲೀಸಪ್ಪನವರ ಜೊತೆಗಿನ ನನ್ನ ಒಡನಾಟ?]

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊಲೀಸರು ಸಾಮೂಹಿಕವಾಗಿ ರಜೆ ಹಾಕಿ ಜೂನ್ 4ರಂದು ಪ್ರತಿಭಟನೆ ನಡೆಸುವಂತೆ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಕರೆ ನೀಡಿತ್ತು. ಸರ್ಕಾರದ ಕ್ರಮದ ಬಳಿಕ ಪ್ರತಿಭಟನೆ ನಡೆದಿರಲಿಲ್ಲ.

ಪೊಲೀಸರ ಪ್ರತಿಭಟನೆಯನ್ನು ತಡೆಯಲು ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ಜೂನ್ 1ರ ಮಧ್ಯರಾತ್ರಿ ಬಂಧಿಸಲಾಗಿತ್ತು. ಬೆಂಗಳೂರಿನ ಯಲಹಂಕ ನ್ಯೂಟೌನ್ ಆರ್‌ಟಿಓ ಕಚೇರಿ ಹಿಂಭಾಗದಲ್ಲಿರುವ ಶಶಿಧರ್ ಅವರ ಮನೆಗೆ ಆಗಮಿಸಿದ್ದ 30ಕ್ಕೂ ಹೆಚ್ಚು ಪೊಲೀಸರು ಅವರನ್ನು ಬಂಧಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka high court on August 25, 2016 granted bail to The Akhila Karnataka Police Mahasabha president Shashidhar Venugopal. Shashidhar arrested on June 2, 2016.
Please Wait while comments are loading...