ಪಂಚಾಯಿತಿ ಫೈಟ್ : 2ನೇ ಹಂತದ ಮತದಾನದ ವಿವರಗಳು

ಬೆಂಗಳೂರು, ಜೂ. 02 : ಗ್ರಾಮ ಪಂಚಾಯತಿ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ಬೆಳಗ್ಗೆ ಆರಂಭವಾಗಿದೆ. ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೇ 29ರಂದು ಮೊದಲ ಹಂತದ ಮತದಾನ ನಡೆದಿದ್ದು ಶೇ 80ರಷ್ಟು ಮತ ಚಲಾವಣೆಯಾಗಿತ್ತು.

15 ಜಿಲ್ಲೆಗಳಲ್ಲಿ ಮಂಗಳವಾರ ಮತದಾನ ನಡೆಯುತ್ತಿದೆ. ಒಟ್ಟು 2,681 ಗ್ರಾಮ ಪಂಚಾಯತಿಯ 45,755 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,13,843 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೀದರ್ ಜಿಲ್ಲೆಯಲ್ಲಿ ವಿದ್ಯುನ್ಯಾನ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. [ಪಂಚಾಯಿತಿ ಚುನಾವಣೆ : 202 ಮತಗಟ್ಟೆಗಳು ಅತಿಸೂಕ್ಷ್ಮ]

gram panchayat

ಎರಡನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. ಚುಣಾವಣಾ ಫಲಿತಾಂಶ ಜೂನ್ 5ರ ಶುಕ್ರವಾರ ಪ್ರಕಟಗೊಳ್ಳಲಿದೆ. ಮತದಾನದ ಕ್ಷಣ-ಕ್ಷಣದ ಮಾಹಿತಿಗಳು ಇಲ್ಲಿವೆ [ಮೊದಲ ಹಂತದ ಮತದಾನದ ವರದಿಗಳು]

ಸಮಯ 1 ಗಂಟೆ : ಕೋಲಾರದಲ್ಲಿ ಚುನಾವಣೆ ವೇಳೆ ಮತದಾರರ ಹೆಸರು ನಾಪತ್ತೆ. 430 ಜನರಲ್ಲಿ 160 ಜನರ ಹೆಸರು ನಾಪತ್ತೆಯಾಗಿದ್ದು, ಅಭ್ಯರ್ಥಿಗಳಾದ ನರಸಿಂಹ ನಾಯಕ್, ಮುನಿರಾಜು ಅವರ ಹೆಸರು ಕೂಡ ನಾಪತ್ತೆಯಾಗಿದೆ. ಜನರು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಸಮಯ 12 ಗಂಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ನೆಲಮಂಗಲದ ಮಲ್ಲಾಪುರ ಗ್ರಾಮಪಂಚಾಯತಿಯಲ್ಲಿ ಇಬ್ಬರು ರೌಡಿ ಶೀಟರ್‍ಗಳು ಚುನಾವಣೆಗೆ ಸ್ಪರ್ಧಿಸಿರುವುದರಿಂದ ಗ್ರಾಮಸ್ಥರು ಮತದಾನದಿಂದ ದೂರವುಳಿದಿದ್ದಾರೆ. ಪೊಲೀಸ್ ಎನ್‍ಕೌಂಟರ್‍ನಲ್ಲಿ ಮೃತಪಟ್ಟ ಬೆತ್ತನಗೆರೆ ಸೀನನ ಸಹವರ್ತಿ ಬಂಡೆ ಮಂಜ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದಾನೆ. ರಂಗನಾಥ ಅಲಿಯಾಸ್ ರಂಗ ಎಂಬ ಮತ್ತೊಬ್ಬ ರೌಡಿ ಶೀಟರ್ ಚುನಾವಣೆ ಕಣದಲ್ಲಿದ್ದಾನೆ.

ಸಮಯ 11 ಗಂಟೆ : ರಾಯಚೂರಿನ ಕಮಲಾಪುರ ಗ್ರಾಮದಲ್ಲಿ ಮತದಾರ ಪಟ್ಟಿಯಲ್ಲಿ ಗೊಂದಲ ಉಂಟಾಗಿ ಮತದಾನ ಸ್ಥಗಿತವಾಗಿದೆ. ರಾಯಚೂರು ತಾಲೂಕಿನಲ್ಲಿರುವ ಕಮಲಾಪುರ ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವು ಗೊಂದಲಗಳು ಉಂಟಾಗಿದ್ದು ಚುನಾವಣಾ ಸಿಬ್ಬಂದಿ ಹಾಗೂ ಮತದಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಸಮಯ 10.30 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ತುಮಕೂರು ತಾಲೂಕಿನ ಗೊಲ್ಲಹಳ್ಳಿಯ ಮತಗಟ್ಟೆ ಸಂಖ್ಯೆ 293ರಲ್ಲಿ ಮತದಾನ ಮಾಡಿದರು. 'ಡಿಕೆ ರವಿ ಕುಟುಂಬದವರು ಸರ್ಕಾರದ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕುಟುಂಬದವರು ಮತದಾನ ಮಾಡಬೇಕು' ಎಂದು ಅವರು ಕರೆ ನೀಡಿದರು.

ಸಮಯ 9.30 : ತುಮಕೂರು ಜಿಲ್ಲೆ ದೊಡ್ಡಕೊಪ್ಪಲಿನಲ್ಲಿ ಐಎಎಸ್ ಅಧಿಕಾರಿ ಡಿಕೆ ರವಿ ಕುಟುಂಬವದವರು ಮತದಾನ ಬಹಿಷ್ಕರಿಸಿದ್ದಾರೆ. ಡಿಕೆ ರವಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿರುವ ರವಿ ಅವರ ಕುಟುಂಬ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡಿದೆ.

ಸಮಯ 9 ಗಂಟೆ : ಯಾದಗಿರಿ ತಾಲೂಕಿನ ಚೆಪಟ್ಲಾ ಗ್ರಾಮದಲ್ಲಿ ಅಭ್ಯರ್ಥಿಗಳ ಚಿಹ್ನೆಗಳು ಅದಲುಬದಲಾಗಿದ್ದು ಮತದಾನವನ್ನು ಸ್ಥಗಿತಗೊಳಿಸಲಾಗಿದೆ.

ಸಮಯ 8.30 : ಡಾ.ಶಿವಮೂರ್ತಿ ಮುರುಘಾ ಶರಣರು ಮತದಾನ ಮಾಡಿದ್ದಾರೆ. 'ಮತದಾನ ಮಾಡುವುದು ಒಂದು ಅವಕಾಶ ಎಲ್ಲರೂ ತಪ್ಪದೇ ಮತದಾನ ಮಾಡಿ' ಎಂದು ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದ್ದಾರೆ.

ಸಮಯ 8 ಗಂಟೆ : ಹರಪನಹಳ್ಳಿ ತಾಲೂಕಿನ ಕರಡಿದುರ್ಗದಲ್ಲಿ ಗ್ರಾಮಸ್ಥರು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ

ಸಮಯ 7.45 : ನಕ್ಸಲ್ ಪೀಡಿತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಲ್ಲಂದೂರಿನಲ್ಲಿ ಪಂಚಾಯಿತಿ ಚುನಾವಣೆಗೆ ಬಿಗಿ ಭದ್ರತೆ

voting

ಸಮಯ 7.30 : ಬೀದರ್‌ ಜಿಲ್ಲೆ ಔರಾದ್ ತಾಲೂಕಿನ ವಾರ್ಡ್‌ ನಂ 56ರಲ್ಲಿ ಮತಯಂತ್ರ ಕೈಕೊಟ್ಟಿದ್ದು, ಮತದಾನ ತಾತ್ಕಾಲಿಕವಾಗಿ ಸ್ಥಗಿತವಾಗಿದೆ

ಸಮಯ 7.15 : ಮಂದಗತಿಯಲ್ಲಿ ಆರಂಭವಾದ ಮತದಾನ. ಕೊಪ್ಪಳದಲ್ಲಿ ಸೋಮವಾರ ರಾತ್ರಿ ಹಣ ಹಂಚಿದ ಅಭ್ಯರ್ಥಿಗಳು. ಮತದಾರರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+