Get Updates
Get notified of breaking news, exclusive insights, and must-see stories!

ಕರ್ನಾಟಕ: ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ-ನವಜಾತು ಶಿಶು ಆಂಬ್ಯುಲೆನ್ಸ್ ‌ಬಿಡುಗಡೆ: ವಿಶೇಷತೆ?, ಸೇವೆಯ ಪಟ್ಟಿ, ಮಾಹಿತಿ

ಬೆಂಗಳೂರು, ಫೆಬ್ರವರಿ 13: ಆರೋಗ್ಯ ಸೇವೆಗಳು ಲಭ್ಯವಿಲ್ಲದ ಗ್ರಾಮೀಣ, ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರಿಗೆ ಕಣ್ಣಿನ ಆರೈಕೆ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಹೀನತೆಯ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ (NPCB&VI) 8 'ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ' ಲೋಕಾರ್ಪಣೆಗೊಂಡವು.

ಬೆಂಗಳೂರಿನ ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವದಿನೇಶ್ ಗುಂಡೂರಾವ್ ಅವರು 'ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ' ಜೊತೆಗೆ 4 ನವಜಾತು ಶಿಶು ಆಂಬ್ಯುಲೆನ್ಸ ಗಳ ಸೇವೆಗಳಿಗೆ ಹಸಿರು ನಿಶಾನೆ ತೋರಿಸಿದರು. ಆರೋಗ್ಯ ಇಲಾಖೆ ಉದ್ದೇಶ ಹಾಗೂ ವಾಹನಗಳ ವಿಶೇಷತೆಗಳ ಮಾಹಿತಿ ಇಲ್ಲಿ ತಿಳಿಯಿರಿ.

Karnataka Govt Launched 8 District Mobile Ophthalmology Unit and 4 Neonatal Ambulance

ಆರೋಗ್ಯ ಇಲಾಖೆ ಉದ್ದೇಶ

* ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಕಾರ್ಯಚಾರಣೆಯ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿ ಕಣ್ಣಿನ ಆರೈಕೆ ಸೇವಗಳನ್ನು ಹೆಚ್ಚಿಸುವುದು.

* ಕಣ್ಣಿನ ಆರೈಕೆಯ ಸೇವಗಳನ್ನು ಹೆಚ್ಚಿನ ಪ್ರದೇಶ, ಸಮುದಾಯಗಳಿಗೆ ವಿಸ್ತರಿಸುವುದು

* ರಾಜ್ಯದ ಹಿಂದುಳಿದ ಪ್ರದೇಶ ಮತ್ತು ಬುಡಕಟ್ಟು ಪ್ರದೇಶಗಳಿಗೆ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸುವುದು

ಸಂಚಾರಿ ನೇತ್ರ ಚಿಕಿತ್ಸಾ ಘಟಕ ಕಾರ್ಯಗಳೇನು?

* ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ, ಕಾರ್ನಿಯ ಅಸ್ಪಷ್ಟತೆ ಮುಂತಾದ ಸಮಸ್ಯೆಗಳ ತಪಾಸಣೆ ಮತ್ತು ರೋಗ ನಿರ್ಣಯಮಾಡಿ ಸಲಹೆ ನೀಡುವುದು.

* ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ, ಶಿಕ್ಷಕರ ಕಣ್ಣಿನ ತಪಾಸಣೆ

* ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಸ್ವೀನಿಂಗ್ ಸೆಂಟರ್‌ಗಳಿಂದ ಹತ್ತಿರದ ಜಿಲ್ಲಾ ಆಸ್ಪತ್ರೆ/ರೆಫರಲ್ ಸೆಂಟರ್ಗೆಗೆ ಕರೆದೊಯ್ಯುವುದು.

* ಸ್ಥಳದಲ್ಲೇ ತಪಾಸಣೆ ಮತ್ತು ಅಗತ್ಯವಿರುವವರಿಗೆ ಕನ್ನಡಕಗಳನ್ನು ಒದಗಿಸಲು ಸೂಚನಾ ಪತ್ರಗಳ ವಿತರಣೆ

* ಆಡಿಯೋ, ವಿಡಿಯೋ ಮತ್ತು ಪೋಸ್ಟರ್ ಪ್ರದರ್ಶನಗಳ ಮೂಲಕ ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಜಾಗೃತಿ

ಸಂಚಾರಿ ನೇತ್ರ ವಾಹನದ ವಿಶೇಷತೆಗಳು

ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರ ಕಣ್ಣಿನ ಪ್ರಾಥಮಿಕ ತಪಾಸಣೆ ನಡೆಸಲು ಅಗತ್ಯವಾದ ಉಪಕರಣಗಳನ್ನು ಒಳಗೊಂಡಿರುವ ಈ ವಾಹನದಲ್ಲಿ ಓರ್ವ ನೇತ್ರ ತಜ್ಞರು, ಪ್ಯಾರಾ ಮೆಡಿಕಲ್ ನೇತ್ರ ಸಹಾಯಕ (PMOA), ಬ್ಲಾಕ್ ಹೆಲ್ತ್ ಎಜುಕೇಶನ್ ಆಫೀಸರ್ (BHEO), ಸ್ಮಾಫ್ ನರ್ಸ್ ಇರಲಿದ್ದಾರೆ. ಪ್ರತಿ ವಾಹನವು 15 ರೋಗಿಗಳನ್ನು ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Karnataka Govt Launched 8 District Mobile Ophthalmology Unit and 4 Neonatal Ambulance

ಅಂಧತ್ವ ನಿಯಂತ್ರಣ ವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ (DLO) ಜಿಲ್ಲಾ ಮಟ್ಟದಲ್ಲಿ ಮೊಬೈಲ್ ಘಟಕದ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಶಿಬಿರ ನಡೆಯುವ ದಿನ, ಸ್ಥಳ ಸೇರಿದಂತೆ ಎಲ್ಲಾ ಮಾಹಿತಿಗಳನ್ನು DLO ಅವರು ಸಂಬಂಧಪಟ್ಟ ಸಿಬ್ಬಂದಿಗೆ ಮುಂಚಿತವಾಗಿ ತಿಳಿಸುತ್ತಾರೆ.

ನೇತ್ರ ತಪಾಸಣಾ ಶಿಬಿರದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಹಾಜರಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ವೈದ್ಯರ ಜೊತೆಗೆ ಸ್ಥಳೀಯ ಉಪ ಕೇಂದ್ರದ ಸಿಬ್ಬಂದಿ ಮತ್ತು ಗ್ರಾಮ ಆರೋಗ್ಯ ಸಮಿತಿಯ ಸದಸ್ಯರು ಶಿಬಿರಗಳನ್ನು ಆಯೋಜಿಸಲು ಸಹಾಯ ಮಾಡಲಿದ್ದಾರೆ.

ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ, ಉಡುಪಿ, ತುಮಕೂರು, ಬೆಂಗಳೂರು ನಗರ, ಬೀದ‌ರ್, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ, ಕಲಬುರಗಿ ಮತ್ತು ಧಾರವಾಡ ಸೇರಿದಂತೆ 17 ಜಿಲ್ಲೆಗಳಲ್ಲಿ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+