ರಾಜ್ಯದ 22 ಜಿಲ್ಲೆಯ 68 ತಾಲೂಕುಗಳು ಬರಪೀಡಿತ

Written By: Ramesh
Subscribe to Oneindia Kannada

ಬೆಂಗಳೂರು, ಸೆ.29: ನಿಗದಿತ ಸಮಯಕ್ಕೆ ಮಳೆ ಇಲ್ಲದಿದ್ದರಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಳೆ ಹಾನಿಗೀಡಾದ ರಾಜ್ಯದ 22 ಜಿಲ್ಲೆಯ 68 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಂತ್ರಿ ಪರಿಷತ್‌ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ತಿಳಿಸಿದರು. ಕೇಂದ್ರ ಸರ್ಕಾರದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನಿಗದಿ ಮಾಡಿದ ಮಾನದಂಡದ ಅನ್ವಯ ಈ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ವಾಡಿಕೆಗಿಂತ ಶೇ. 20ರಷ್ಟುಮಳೆ ಕೊರತೆ, ಭೂಮಿಯ ಮೇಲಿನ ತೇವಾಂಶ ಶೇ. 50ರಷ್ಟು ಕೊರತೆ, ಸತತ ನಾಲ್ಕು ವಾರಗಳ ಶುಷ್ಕ ವಾತಾವರಣ, ಬಿತ್ತನೆ ಪ್ರದೇಶದ ಪೈಕಿ ಶೇ.33ರಷ್ಟು ಬೆಳೆ ಹಾನಿಗೀಡಾಗಿರುವ ಅಂಶಗಳನ್ನು ಪರಿಗಣಿಸಿ ಬರಪೀಡಿತ ತಾಲೂಕುಗಳನ್ನು ಗುರುತಿಸಲಾಗಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ಬರಪೀಡಿತ ತಾಲೂಕುಗಳು ಯಾವುವು ?

ಚಿತ್ರದುರ್ಗ,ಚಾಮರಾಜನಗರ ಜಿಲ್ಲೆಯ ತಾಲೂಕುಗಳು

ಚಿತ್ರದುರ್ಗ,ಚಾಮರಾಜನಗರ ಜಿಲ್ಲೆಯ ತಾಲೂಕುಗಳು

ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು.
ಮೊಳಕಾಲ್ಮೂರು
ಚಾಮರಾಜನಗರ
ಗುಂಡ್ಲುಪೇಟೆ
ಕೊಳ್ಳೆಗಾಲ
ಯಳಂದೂರು.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆ

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆ

ಬಂಗಾರಪೇಟೆ
ಬಾಗೇಪಲ್ಲಿ
ಶಿರಾ

ಮೈಸೂರು, ಮಂಡ್ಯ ಜಿಲ್ಲೆ

ಮೈಸೂರು, ಮಂಡ್ಯ ಜಿಲ್ಲೆ

ಹೆಗ್ಗಡದೇವನಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸೀಪುರ, ಕೃಷ್ಣರಾಜಪೇಟೆ, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ

ಬೈಲಹೊಂಗಲ, ಬೆಳಗಾವಿ, ಗೋಕಾಕ್‌, ಖಾನಾಪುರ, ರಾಮದುರ್ಗ, ಸವದತ್ತಿ.
ಬದಾಮಿ, ಬೀಳಗಿ, ಹುನಗುಂದ, ಮುಧೋಳ. ಇಂಡಿ, ವಿಜಯಪುರ, ಮುದ್ದೇಬಿಹಾಳ, ಸಿಂಧಗಿ.

ಗದಗ, ಹಾವೇರಿ, ಧಾರವಾಡ ಜಿಲ್ಲೆ

ಗದಗ, ಹಾವೇರಿ, ಧಾರವಾಡ ಜಿಲ್ಲೆ

ಮುಂಡರಗಿ, ಗದಗ, ಶಿರಹಟ್ಟಿ, ನರಗುಂದ, ರೋಣ. ಹಿರೇಕೆರೂರ, ಸವಣೂರ.
ಕಲಘಟಗಿ, ಕುಂದಗೋಳ, ನವಲಗುಂದ.

ಶಿವಮೊಗ್ಗ-, ಹಾಸನ, ಚಿಕ್ಕಮಗಳೂರು ಜಿಲ್ಲೆ

ಶಿವಮೊಗ್ಗ-, ಹಾಸನ, ಚಿಕ್ಕಮಗಳೂರು ಜಿಲ್ಲೆ

ಹೊಸನಗರ, ಸಾಗರ, ತೀರ್ಥಹಳ್ಳಿ.ಅರಕಲಗೂಡು, ಅರಸೀಕೆರೆ, ಬೇಲೂರು, ಹಾಸನ. ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ.

ಕೊಡಗು, ಉತ್ತರಕನ್ನಡ ಜಿಲ್ಲೆ

ಕೊಡಗು, ಉತ್ತರಕನ್ನಡ ಜಿಲ್ಲೆ

ಮಡಿಕೇರಿ, ವಿರಾಜಪೇಟೆ.ಹಳಿಯಾಳ, ಸಿದ್ದಾಪುರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After cabinet meeting law and parliamentary affairs minister T.B.Jayachandra said, As many as 68 taluks in 22 districts in the Karnataka will be declared drought hit following the failure of the monsoon.
Please Wait while comments are loading...