District In-charge Ministers: ಡಿಕೆಶಿ ಹೆಗಲಿಗೆ ಬೆಂಗಳೂರು ಉಸ್ತುವಾರಿ! ಯಾವ ಜಿಲ್ಲೆಯ ಉಸ್ತುವಾರಿ ಯಾರಿಗೆ? ಇಲ್ಲಿದೆ ಪಟ್ಟಿ
ಬೆಂಗಳೂರು, ಜೂನ್ 09: ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೇ ದೊಡ್ಡ ತಲೆನೋವಾಗಿದ್ದು, ಕೊನೆಗೂ ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಲಾಗಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಭರ್ಜರಿ ಪೈಪೋಟಿ ಶುರುವಾಗಿದ್ದು, ಸಚಿವರು ಕೂಡ ಭರ್ಜರಿ ಲಾಬಿ ನಡೆಸಿದ್ದರು. ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಪಣತೊಟ್ಟಿದ್ದು, ಹಲವು ಸಚಿವರು ತಮ್ಮ ತಮ್ಮ ಜಿಲ್ಲೆಯ ಮೇಲೆ ಕಣ್ಣೀಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರಿಗೆ ಜಿಲ್ಲಾ ಉಸ್ತುವಾರಿಯನ್ನ ನೇಮಕ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ !
| ಕ್ರಮ ಸಂಖ್ಯೆ | ಜಿಲ್ಲೆ | ಉಸ್ತುವಾರಿ ಸಚಿವರು |
| 1 | ಬೆಂಗಳೂರು ನಗರ | ಡಿ ಕೆ ಶಿವಕುಮಾರ್ |
| 2 | ತುಮಕೂರು | ಡಾ.ಜಿ ಪರಮೇಶ್ವರ್ |
| 3 | ಗದಗ | ಹೆಚ್.ಕೆ ಪಾಟೀಲ್ |
| 4 | ಬೆಂಗಳೂರು ಗ್ರಾಮಾಂತರ | ಕೆ ಹೆಚ್ ಮುನಿಯಪ್ಪ |
| 5 | ರಾಮನಗರ | ರಾಮಲಿಂಗರೆಡ್ಡಿ |
| 6 | ಚಿಕ್ಕಮಗಳೂರು | ಕೆ.ಜೆ ಜಾರ್ಜ್ |
| 7 | ವಿಜಯಪುರ | ಎಂ.ಬಿ ಪಾಟೀಲ್ |
| 8 | ದಕ್ಷಿಣ ಕನ್ನಡ | ದಿನೇಶ್ ಗುಂಡೂರಾವ್ |
| 9 | ಮೈಸೂರು | ಹೆಚ್.ಸಿ ಮಹದೇವಪ್ಪ |
| 10 | ಬೆಳಗಾವಿ | ಸತೀಶ್ ಜಾರಕಿಹೊಳಿ |
| 11 | ಕಲಬುರಗಿ | ಪ್ರಿಯಾಂಕ್ ಖರ್ಗೆ |
| 12 | ಹಾವೇರಿ | ಶಿವಾನಂದ ಪಾಟೀಲ್ |
| 13 | ವಿಜಯನಗರ | ಜಮೀರ್ ಅಹ್ಮದ್ ಖಾನ್ |
| 14 | ಯಾದಗಿರಿ | ಶರಣಬಸಪ್ಪ ದರ್ಶನಾಪುರ |
| 15 | ಬೀದರ್ | ಈಶ್ವರ್ ಖಂಡ್ರೆ |
| 16 | ಮಂಡ್ಯ | ಎನ್.ಚಲುವರಾಯಸ್ವಾಮಿ |
| 17 | ದಾವಣಗೆರೆ | ಎಸ್.ಎಸ್ ಮಲ್ಲಿಕಾರ್ಜುನ |
| 18 | ಧಾರವಾಡ | ಸಂತೋಷ್ ಲಾಡ್ |
| 19 | ರಾಯಚೂರು | ಶರಣಪ್ರಕಾಶ್ ಪಾಟೀಲ್ |
| 20 | ಬಾಗಲಕೋಟೆ | ಆರ್. ಬಿ ತಿಮ್ಮಾಪುರ್ |
| 21 | ಚಾಮರಾಜನಗರ | ಕೆ.ವೆಂಕಟೇಶ್ |
| 22 | ಕೊಪ್ಪಳ | ಶಿವರಾಜ್ ತಂಗಡಗಿ |
| 23 | ಚಿತ್ರದುರ್ಗ | ಡಿ.ಸುಧಾಕರ್ |
| 24 | ಬಳ್ಳಾರಿ | ಬಿ.ನಾಗೇಂದ್ರ |
| 25 | ಹಾಸನ | ಕೆ.ಎನ್ ರಾಜಣ್ಣ |
| 26 | ಕೋಲಾರ | ಬಿ ಎಸ್ ಸುರೇಶ್ |
| 27 | ಉಡುಪಿ | ಲಕ್ಷ್ಮಿ ಹೆಬ್ಬಾಳ್ಕರ್ |
| 28 | ಉತ್ತರ ಕನ್ನಡ | ಮಂಕಾಳ ವೈದ್ಯ |
| 29 | ಶಿವಮೊಗ್ಗ | ಮಧು ಬಂಗಾರಪ್ಪ |
| 30 | ಚಿಕ್ಕಬಳ್ಳಾಪುರ | ಎಂ.ಸಿ ಸುಧಾಕರ್ |
| 31 | ಕೊಡಗು | ಎನ್.ಎಸ್ ಬೋಸರಾಜು |












Click it and Unblock the Notifications