ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ್ಡಿ ರಹಿತ ಸಾಲ ನೀಡುವ 'ಬಡವರ ಬಂಧು' ಯೋಜನೆ ಬಗ್ಗೆ ಮಾಹಿತಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ನವೆಂಬರ್ 31: ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳನ್ನು ಸಾಲದ ಸುಳಿಯಿಂದ ರಕ್ಷಿಸಬೇಕೆಂದು ನಾಳೆ (ನವೆಂಬರ್ 22) ಕುಮಾರಸ್ವಾಮಿ ಅವರು ಬಡವರ ಬಂಧು ಯೋಜನೆ ಲೋಕಾರ್ಪಣೆ ಮಾಡುತ್ತಿದ್ದಾರೆ.

ಸಣ್ಣ ವ್ಯಾಪಾರಿಗಳು, ಬೀದಿ ಬದಿ ನೊಂದಾಯಿತ ವ್ಯಾಪಾರಿಗಳಿಗೆ ಸಣ್ಣ ಪ್ರಮಾಣದ ಸಾಲ ಸೌಲಭ್ಯ ಒದಗಿಸುವ ಯೋಜನೆ ಇದಾಗಿದ್ದು, ದಿನವಹಿ ಬಡ್ಡಿ ಸಾಲದಿಂದ ತಪ್ಪಿಸಲು ಸರ್ಕಾರ ಈ ಯೋಜನೆ ರೂಪಿಸಿದೆ.

ನಾಳೆ ಈ ಯೋಜನೆಯು ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಉದ್ಘಾಟನೆ ಆಗಲಿದೆ. ಸಿಎಂ ಕುಮಾರಸ್ವಾಮಿ ಅವರು ಯೋಜನೆ ಉದ್ಘಾಟಿಸಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಿದ್ದಾರೆ. ಜೊತೆಗೆ ವ್ಯಾಪಾರಿಗಳಿಗೆ ಸಾಲ ನೀಡುವ ಸಂಚಾರಿ ಸೇವಾ ವಾಹನಕ್ಕೂ ಚಾಲನೆ ನೀಡಲಿದ್ದಾರೆ.

ಸಂಪುಟ ವಿಸ್ತರಣೆ: ಎಚ್‌ಕೆ ಕುಮಾರಸ್ವಾಮಿ, ಫಾರೂಕ್‌ಗೆ ಮಂತ್ರಿ ಸ್ಥಾನ? ಸಂಪುಟ ವಿಸ್ತರಣೆ: ಎಚ್‌ಕೆ ಕುಮಾರಸ್ವಾಮಿ, ಫಾರೂಕ್‌ಗೆ ಮಂತ್ರಿ ಸ್ಥಾನ?

ತಳ್ಳುವ ಗಾಡಿ ಹೊಂದಿರುವ ವ್ಯಾಪಾರಿಗಳು, ಮೋಟಾರ್ ವಾಹನದಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹಣ್ಣು, ಹೂವು, ತರಕಾರಿ ಮಾರುವವರು, ರಸ್ತೆ ಬದಿ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಚರ್ಮದ ಉತ್ಪನ್ನಗಳ ರಿಪೇರಿ ಮತ್ತು ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.

ಈ ಎಲ್ಲಾ ವ್ಯಾಪಾರಿಗಳಿಗೆ ಸಾಲ ಇಲ್ಲ

ಈ ಎಲ್ಲಾ ವ್ಯಾಪಾರಿಗಳಿಗೆ ಸಾಲ ಇಲ್ಲ

ರಸ್ತೆ ಬದಿಯಲ್ಲಿ ಸ್ವಚ್ಛತೆ ಹಾಳು ಮಾಡುವ, ಪರಿಸರಕ್ಕೆ ಹಾನಿ ಆಗುವಂತಹಾ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರಗುಳಿಯಲಿದ್ದಾರೆ. ಯೋಜನೆಯ ಫಲಾನುಭವ ಪಡೆಯಲು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್‌ ಹೊಂದಿರಬೇಕು ಮತ್ತು ನೊಂದಾಯಿತಿ ಬೀದಿ ಬದಿ ವ್ಯಾಪಾರಿಗಳಾಗಿರಬೇಕು.

15 ದಿನದಲ್ಲಿ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚನೆ: ಎಚ್‌ಡಿಕೆ 15 ದಿನದಲ್ಲಿ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚನೆ: ಎಚ್‌ಡಿಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಸಾವಿರ ಸಾಲ

ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಸಾವಿರ ಸಾಲ

ಬಿಬಿಎಂಪಿ ವ್ಯಾಪ್ತಿಯ ವ್ಯಾಪಾರಿಗಳಿಗೆ 5 ಸಾವಿರ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ವಿಜಯಪುರ, ತುಮಕೂರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವ್ಯಾಪಾರಿಗಳಿಗೆ 3 ಸಾವಿರ ರೂ., ಹಾಗೂ ಇತರೆ ನಗರ ಪ್ರದೇಶಗಳಾದ ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ಹಾಸನ, ಹಾವೇರಿ, ಕಾರವಾರ, ಕೋಲಾರ, ಕೊಪ್ಪಳ, ಮಡಿಕೇರಿ, ಮಂಡ್ಯ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ನಗರ ಪ್ರದೇಶಗಳಲ್ಲಿ 1 ಸಾವಿರ ರೂ.ಸಾಲ ನೀಡಲು ಉದ್ದೇಶಿಸಲಾಗಿದೆ.

ಸಿಎಂ-ರೈತರ ಸಭೆ ಮುಕ್ತಾಯ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಆರಂಭ ಸಿಎಂ-ರೈತರ ಸಭೆ ಮುಕ್ತಾಯ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಆರಂಭ

ಶೂನ್ಯ ಬಡ್ಡಿದರದಲ್ಲಿ ಸಾಲ

ಶೂನ್ಯ ಬಡ್ಡಿದರದಲ್ಲಿ ಸಾಲ

ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸುಲಭವಾಗಿ ಡಿಸಿಸಿ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳು ಬಡವರ ಬಂಧು ಯೋಜನೆಯ ಅಡಿ ಸಾಲ ನೀಡಲಿವೆ. ಸ್ಥಳೀಯ ಸಂಸ್ಥೆಗಳು ಗುರುತಿನ ಚೀಟಿ ನೀಡದಿದ್ದ ಪಕ್ಷದಲ್ಲಿ ಡಿಸಿಸಿ ಬ್ಯಾಂಕುಗಳೇ ಗುರುತಿನ ಚೀಟಿ ವಿತರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಲ ಪಡೆಯುವ ವ್ಯಾಪಾರಿಯಿಂದ ಉಳಿತಾಯ ಖಾತೆ ತೆರೆದು ಸಾಲ ವಿತರಣೆಗೆ ಕ್ರಮಕೈಗೊಳ್ಳಬೇಕೆಂದು ಸಹಕಾರ ಇಲಾಖೆ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಸಂಪುಟ ಸಭೆಯಲ್ಲಿ ಎಚ್ದಿಕೆಗೆ ರಮೇಶ್ ಜಾರಕಿಹೊಳಿ ಕೊಟ್ಟ ಪತ್ರದಲ್ಲಿ ಇದ್ದದ್ದಾದರೂ ಏನು? ಸಂಪುಟ ಸಭೆಯಲ್ಲಿ ಎಚ್ದಿಕೆಗೆ ರಮೇಶ್ ಜಾರಕಿಹೊಳಿ ಕೊಟ್ಟ ಪತ್ರದಲ್ಲಿ ಇದ್ದದ್ದಾದರೂ ಏನು?

ಸಾಲದ ಮೊತ್ತ ಸಂಗ್ರಹಿಸಲು ವ್ಯವಸ್ಥೆ

ಸಾಲದ ಮೊತ್ತ ಸಂಗ್ರಹಿಸಲು ವ್ಯವಸ್ಥೆ

ಬ್ಯಾಂಕುಗಳು ವ್ಯವಹಾರ ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ಸಾಲದ ಮೊತ್ತವನ್ನು ಸಂಗ್ರಹಿಸಲು ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಲಾಗಿದೆ. ಸರ್ಕಾರದಿಂದ ದೈನಂದಿನ ಹೊರ ಬಾಕಿಗೆ ಪ್ರತಿ ತ್ರೈಮಾಸಿಕಕ್ಕೆ ಶೇ.10ರ ಬಡ್ಡಿ ಸಹಾಯಧನವನ್ನು ಒದಗಿಸಲಿದೆ ಎಂದು ಸಹಕಾರ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

English summary
Karnataka government launching 'Badavara Bandhu' scheme tomorrow in Yashwanthpura. Through this scheme road side traders and small traders will get zero interest loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X