ವಸತಿ ಪ್ರದೇಶದಲ್ಲಿ ಬೇಕಾಬಿಟ್ಟಿ ಟವರ್ ನಿರ್ಮಾಣಕ್ಕೆ ಮೂಗುದಾರ
ವಸತಿ ಪ್ರದೇಶಗಳಲ್ಲಿ ಬೇಕಾಬಿಟ್ಟಿ ಮೊಬೈಲ್ ಫೋನ್ ಟವರ್ ನಿರ್ಮಾಣಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರಕಾರ ಮುಂದಾಗಿದೆ. ಈ ಕುರಿತು ನಿಯಮಾವಳಿಗಳು ಸದ್ಯದಲ್ಲೇ ಜಾರಿಗೆ ತರಲಿದೆ.
ಬೆಂಗಳೂರು, ಫೆಬ್ರವರಿ 8: ವಸತಿ ಪ್ರದೇಶಗಳಲ್ಲಿ ಬೇಕಾಬಿಟ್ಟಿ ಮೊಬೈಲ್ ಟವರ್ ನಿರ್ಮಾಣಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರಕಾರ ಮುಂದಾಗಿದೆ. ಈ ಕುರಿತು ನಿಯಮಾವಳಿಗಳು ಸದ್ಯದಲ್ಲೇ ಜಾರಿಗೆ ತರಲಿದೆ.
ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿರುವ ನಗರಾಡಳಿತ ಸಚಿವ ಈಶ್ವರ್ ಖಂಡ್ರೆ ವಸತಿ ಪ್ರದೇಶಗಳಲ್ಲಿ ಟವರ್ ಗಳ ನಿರ್ಮಾಣ ಹೆಚ್ಚಾಗುತ್ತಿರುವುದನ್ನು ನಿಯಂತ್ರಣಕ್ಕೆ ತರಲು ಕರ್ನಾಟಕ ಸರಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಈಗಾಗಲೇ ನಿಯಮಾವಳಿಗಳ ಕರಡು ಪ್ರತಿ ಸಿದ್ಧವಾಗಿದೆ ಎಂದಿದ್ದಾರೆ.[ಅಧಿವೇಶನದಲ್ಲಿ ವಿದ್ಯುತ್ ದರ ಏರಿಕೆ ಸುಳಿವು ನೀಡಿದ ಡಿಕೆಶಿ!]

ಸರಿಸುಮಾರು ಒಂದು ವರ್ಷದ ಹಿಂದೆ ಅಂದರೆ ಫೆಬ್ರವರಿ 24, 2016ರಂದೇ ಕರಡು ನಿಯಮಾವಳಿಯನ್ನು ಸಾರ್ವಜನಿಕರ ಮುಂದಿಡಲಾಗಿತ್ತು. ಮತ್ತು ಇದಕ್ಕೆ ಆಕ್ಷೇಪ ಮತ್ತು ತಿದ್ದುಪಡಿಗಳೇನಾದರೂ ಇದ್ದರೆ ಸೂಚಿಸುವಂತೆ ಕೋರಿಕೊಳ್ಳಲಾಗಿತ್ತು. ಇದೀಗ ಅಂತಿಮವಾಗಿ ಜನರ ಅಭಿಪ್ರಾಯ ಪಡೆದುಕೊಂಡು ಅಧಿಸೂಚನೆ ಹೊರಡಿಸಲು ಸರಕಾರ ನಿರ್ಧರಿಸಿದೆ.[ವರ್ಷ 2, ಹೂಡಿಕೆ 67,000ಕೋಟಿ; ಕರ್ನಾಟಕ ದೇಶಕ್ಕೆ ನಂ.1]
"ಈಗಾಗಲೇ ಹಲವು ಟವರುಗಳು ಸರಕಾರದ ಒಪ್ಪಿಗೆ ಇಲ್ಲದೆ ಸ್ಥಾಪನೆಯಾಗಿವೆ. ಆದರೆ ಜನರಿಗೆ ಟವರುಗಳಿಂದ ತೊಂದರೆಯಾಗದಂತೆ ಸರಕಾರ ನೋಡಿಕೊಳ್ಳಲಿದೆ," ಎಂದಿದ್ದಾರೆ. ಒಮ್ಮೆ ನಿಯಮಾವಳಿ ಜಾರಿಗೆ ಬರುತ್ತಿದ್ದಂತೆ ಅವುಗಳ ಪಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಖಂಡ್ರೆ ಭರವಸೆ ನೀಡಿದ್ದಾರೆ.












Click it and Unblock the Notifications