ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಮೋದಿಯ 15 ಲಕ್ಷ ಸೂಟ್ ಬಗ್ಗೆ ಮಾತಾಡಿದವರು, ಈಗ ಮಾಡಿದ್ದೇನು?

|
Google Oneindia Kannada News

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಮೊದಲ ಬಾರಿ ಅಮೆರಿಕಾ ಅಧ್ಯಕ್ಷ ಒಬಾಮ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಅವರು ಧರಿಸಿಕೊಂಡಿದ್ದ ಸೂಟು ಹತ್ತು ಲಕ್ಷ, ಹದಿನೈದು ಲಕ್ಷ ಬೆಲೆಬಾಳುವಂತದ್ದು ಎಂದು ಊರೆಲ್ಲಾ ಸುದ್ದಿಯಾಗಿತ್ತು.

ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾವಿಸಿ, ರಾಜಕೀಯ ಲಾಭ ಮಾಡಿಕೊಂಡವರಲ್ಲಿ ಕಾಂಗ್ರೆಸ್ ಧುರೀಣರೂ ಪ್ರಮುಖರಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರೂ ಇದರಿಂದ ಹೊರತಾಗಿರಲಿಲ್ಲ.

ಒಬಾಮ ಅವರ ಜತೆ ನಡೆಸಿದ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಸೂಟ್‌ ಧರಿಸಿದ್ದರು, ಕುರ್ತಾದಿಂದ ಹದಿನೈದು ಲಕ್ಷ ರೂಪಾಯಿಯ ಸೂಟ್ ಗೆ ಮೋದಿ ರೂಪಾಂತರಗೊಂಡಿದ್ದಾರೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದರು. (ಕಾಂಗ್ರೆಸ್ ಹಾಳು ಮಾಡಿದ ದಾಮಾದ್ ಯಾರು)

ರಾಜ್ಯ ಕಾಂಗ್ರೆಸ್ ಮುಖಂಡರೂ ಮೋದಿ ಸೂಟ್ ವಿಷಯವನ್ನು ಪ್ರಸ್ತಾವಿಸಿ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದುಂಟು. ಅಂದು ಮೋದಿ ಸೂಟ್ ಬಗ್ಗೆ ಕಿಡಿಕಾರಿದ್ದ ಎಐಸಿಸಿ ಪ್ರಮುಖರು, ಈಗ ತಮ್ಮದೇ ಕರ್ನಾಟಕದ ಸರಕಾರ ಕಂಬಳಿ, ದಿಂಬು ಖರೀದಿಗೆ ಲಕ್ಷ, ಲಕ್ಷ ವ್ಯಯಿಸಿರುವ ಬಗ್ಗೆ ಏನಂತಾರೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಕಂಬಳಿ, ಬೆಡ್ಶೀಟ್, ದಿಂಬು, ಕವರ್‌, ಟವಲ್ ಇತ್ಯಾದಿ.. ಇತ್ಯಾದಿ. ಖರೀದಿಸಲು ಒಂದು ವರ್ಷದೊಳಗೆ ಬರೋಬ್ಬರಿ 14.34 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

RTI ಕಾಯ್ದೆಯಡಿ ಮಾಹಿತಿ

RTI ಕಾಯ್ದೆಯಡಿ ಮಾಹಿತಿ

ಮಾಹಿತಿ ಹಕ್ಕು ಕಾರ್ಯಕರ್ತ ಮರಿಲಿಂಗೇಗೌಡ ಎನ್ನುವವರು RTI ಕಾಯ್ದೆಯಡಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಖರ್ಚಾದ ಈ ಮಾಹಿತಿಯನ್ನು ಪಡೆದಿದ್ದಾರೆ. ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಂದರೆ 2015-16ರ ಸಾಲಿನಲ್ಲಿ ಸಿಎಂ ನಿವಾಸ 'ಕಾವೇರಿ'ಗೆ ವ್ಯಯಿಸಿದ ಗೃಹೋಪಯೋಗಿ ಖರ್ಚುಗಳ ಬಾಬ್ತು.

ಬರೀ ಟವೆಲ್ ಗೆ ಲಕ್ಷ..ಲಕ್ಷ

ಬರೀ ಟವೆಲ್ ಗೆ ಲಕ್ಷ..ಲಕ್ಷ

RTI ಕಾಯ್ದೆಯಡಿ ಲಭ್ಯವಾದ ಮಾಹಿತಿಯಲ್ಲಿ ಗಮನಿಸಬೇಕಾದ ಅಂಶವೇನಂದರೆ, ಇದೇ ಏಪ್ರಿಲ್ ನಿಂದೀಚೆಗೆ ಅಂದರೆ ಆರು ತಿಂಗಳಲ್ಲಿ ಮುಖ್ಯಮಂತ್ರಿಗಳ 'ಶುಭ್ರ ಟವೆಲ್' ಗಾಗಿ ಖರ್ಚಾಗಿರುವ ದುಡ್ಡು 4.78 ಲಕ್ಷ ರೂಪಾಯಿ ಎಂದರೆ ಯಾರಾದರೂ ಹೆಬ್ಬೇರಿಸದೇ ಇರ್ತಾರಾ?

ಇಷ್ಟಕ್ಕೇ ಮುಗಿದಿಲ್ಲ, ಸಚಿವರ ಖರ್ಚುಗಳೂ ಇವೆ

ಇಷ್ಟಕ್ಕೇ ಮುಗಿದಿಲ್ಲ, ಸಚಿವರ ಖರ್ಚುಗಳೂ ಇವೆ

ಮುಖ್ಯಮಂತ್ರಿಗಳ ಖರ್ಚಿನ ಜೊತೆಗೆ, ಐವರು ಸಚಿವರೂ ಮನೆ ದುರಸ್ತಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿದ್ದಾರೆ. ಸಚಿವರಾದ ಎಚ್ ಸಿ ಮಹದೇವಪ್ಪ, ಎಚ್‌ ಕೆ ಪಾಟೀಲ್‌, ಕೆ ಜೆ ಜಾರ್ಜ್‌, ಆರ್‌ ವಿ ದೇಶಪಾಂಡೆ, ರಮಾನಾಥ ರೈ ಅವರ ಮನೆಗಳ ವಿವಿಧ ದುರಸ್ತಿ ಕೆಲಸಕ್ಕೆ ಒಟ್ಟು 1.71ಕೋಟಿ ರೂಪಾಯಿ ಖರ್ಚಾಗಿದೆಯಂತೆ!

PWD ನೂತನ ನಿವಾಸಕ್ಕೆ ಮುಂದಾಗಿತ್ತು

PWD ನೂತನ ನಿವಾಸಕ್ಕೆ ಮುಂದಾಗಿತ್ತು

ನಗರದ ಸಿಐಡಿ ಕಚೇರಿ ಇರುವ ಆವರಣದಲ್ಲಿ ಮುಖ್ಯಮಂತ್ರಿಗಳಿಗಾಗಿ ನೂತನ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಕಾವೇರಿ ಮತ್ತು ಅನುಗ್ರಹ ಹೆಸರಿನ ಎರಡು ನಿವಾಸಗಳು ಸಿಎಂ ಹುದ್ದೆಗೆ ಏರಿದವರು ಬಳಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಈ ಎರಡೂ ನಿವಾಸ ಬಳಸಿಕೊಳ್ಳಲು ಅಷ್ಟೇನೂ ಉತ್ಸುಕರಾಗಿರಲಿಲ್ಲ, ಹಾಗಾಗಿ ಲೋಕೋಪಯೋಗಿ ಇಲಾಖೆ ನೂತನ ನಿವಾಸ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಯೋಜನೆಯನ್ನು ಕೈಬಿಟ್ಟಿತ್ತು ಎನ್ನಲಾಗುತ್ತಿದೆ.

ಹರಾಜಿನ ಮೂಲಕ ಉತ್ತರ ನೀಡಿದ್ದ ಪ್ರಧಾನಮಂತ್ರಿ ಕಾರ್ಯಾಲಯ

ಹರಾಜಿನ ಮೂಲಕ ಉತ್ತರ ನೀಡಿದ್ದ ಪ್ರಧಾನಮಂತ್ರಿ ಕಾರ್ಯಾಲಯ

ತಾನು ಧರಿಸಿದ್ದ ಸೂಟಿನ ಬೆಲೆಯ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ತನಗೆ ಬಂದ 800ಕ್ಕೂ ಹೆಚ್ಚು ಗಿಫ್ಟ್ ಜೊತೆಗೆ ಸೂಟನ್ನೂ ಪ್ರಧಾನಮಂತ್ರಿ ಕಾರ್ಯಾಲಯ ಹರಾಜಿಗೆ ಹಾಕಿತ್ತು. ಪಿಎಂ ಧರಿಸಿದ್ದ ಸೂಟ್ ದಾಖಲೆಯ (ಸುಮಾರು ಐದು ಕೋಟಿ) ಮೊತ್ತಕ್ಕೆ ಹರಾಜಾಗಿತ್ತು. ಈ ಮೊತ್ತವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳಲು ಮೋದಿ ನೀಡಿ, ಅಂದು ತನ್ನ ಸೂಟಿನ ಬಗ್ಗೆ ಮಾತಾಡಿದ್ದವರ ಬಾಯಿಗೆ ಸ್ಟಿಚ್ ಹಾಕಿದ್ದರು.

English summary
Karnataka government spent 14.34 lacs for Chief Minister residence towel, bed sheet, pillow etc. purchase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X