Government Employee: ಸರ್ಕಾರಿ ನೌಕರರ ವಿವಿಧ ಭತ್ಯೆ ಕುರಿತು ಹೊಸ ಆದೇಶ
ಬೆಂಗಳೂರು, ನವೆಂಬರ್ 13: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ವೇತನದ ಜೊತೆಗೆ ವಿವಿಧ ಬಗೆಯ ಭತ್ಯೆಗಳನ್ನು ನೀಡುತ್ತದೆ. ಈಗ ಭತ್ಯೆಗಳನ್ನು ಸರಿಪಡಿಸಿ ಮರು ಪಾವತಿಸುವ ಬಗ್ಗೆ ಆದೇಶವೊಂದನ್ನು ಹೊರಡಿಸಲಾಗಿದೆ. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ 2.0 ನಿರ್ದೇಶನಾಲಯ ಆರ್ಥಿಕ ಇಲಾಖೆ ಆದೇಶವನ್ನು ಹೊರಡಿಸಿದೆ.
ಯೋಜನಾ ವ್ಯವಸ್ಥಾಪಕರು, ಹೆಆರ್‌ಎಂಎಸ್ 2.0 ಈ ಕುರಿತು ಆದೇಶವನ್ನು ಹೊರಡಿಸಿದ್ದು, ಆದೇಶ ಸರ್ಕಾರಿ ನೌಕರರಿಗೆ ತಪ್ಪಾಗಿ/ ಹೆಚ್ಚುವರಿಯಾಗಿ/ ಕಡಿಮೆಯಾಗಿ ಪಾವತಿಸಲಾದ ವಿವಿಧ ಭತ್ಯೆಗಳನ್ನು ಸರಿಪಡಿಸಿ ಮರುಪಾವತಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ. ಸರ್ಕಾರಿ ಆದೇಶ 11/01/2019 ಉಲ್ಲೇಖಿಸಲಾಗಿದೆ.

ಆದೇಶದ ವಿವರಗಳು: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ/ ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 1ನೇ ಜನವರಿರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ವಿಶೇಷ ಭತ್ಯೆ ಮಂಜೂರಾತಿ ಕುರಿತಂತ ಹೊರಡಿಸಲಾದ ಹಿಂದಿನ ಎಲ್ಲಾ ಆದೇಶಗಳು ದಿನಾಂಕ 01.01.2019ರಿಂದ ಜಾರಿಗೆ ಬರುವಂತೆ ನಿರಸಗೊಳ್ಳುತ್ತದೆ.
ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರು ಇವರುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ನೌಕರರು ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ.
ಪರಂತು ಸಚಿವರು/ ಸರ್ಕಾರದ ಕಾರ್ಯದರ್ಶಿಗಳ ವೈಯಕ್ತಿಕ ಶಾಖೆಗೆ ನಿಯುಕ್ತಿಗೊಳಿಸಲಾಗಿರುವ ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರು ವೈಯಕ್ತಿಕ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜೊತೆಗೆ ಅವರು ಹೊಂದಿರುವ ಹುದ್ದೆಗಳಿಗೆ ಲಭ್ಯವಿರುವ ವಿಶೇಷ ಭತ್ಯೆಯನ್ನು ನೀಡಬಹುದಾಗಿದೆ.
ಹೆಚ್‌ಆರ್‌ಎಂಎಸ್ 2.0 ನ Arrears Module Database ಅನ್ನು ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಪಡೆಯುತ್ತಿರುವ ಭತ್ಯೆಗಳ ವಿವರಗಳನ್ನು ವಿಶ್ಲೇಷಿಸಿದಾಗ ಕೆಳಕಂಡ ಅಂಶಗಳು ಕಂಡು ಬಂದಿರುತ್ತದೆ.
* ವಿವಿಧ ವೃಂದ/ ಹುದ್ದೆಗಳಿಗೆ ಭತ್ಯೆಗಳು ಅನ್ವಯಿಸದಿದ್ದರೂ ಸಹ ಭತ್ಯೆಗಳನ್ನು ಸೆಳಯಲಾಗಿರುತ್ತದೆ.
* ತಪ್ಪು ವರ್ಗೀಕರಣ ಮಾಡಿ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.
* ನಿಗದಿತ ದರಕ್ಕಿಂತ ಹೆಚ್ಚಿನ ಅಥವಾ ಕಡಿಮೆ ದರದಲ್ಲಿ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.
* ವೃಂದ ಬದಲಾವಣೆಯಾದಾಗ ಹಾಗೂ ಮರು ನೇಮಕಗೊಂಡಾಗ ಹಿಂದಿನ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.
* ಕಡ್ಡಾಯ ಭತ್ಯೆಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.
ಆದ್ದರಿಂದ ಇಲಾಖಾ ಹಂತದಲ್ಲಿ ತುರ್ತಾಗಿ ಬೆಳೆಯಲಾಗುತ್ತಿರುವ ಭತ್ಯೆಗಳನ್ನು ಪರಿಶೀಲಿಸಿ, ಇಲಾಖಾವಾರು ಪ್ರತ್ಯೇಕವಾಗಿ ಯಾವುದಾದರೂ ಭತ್ಯೆಗಳ ಸಂಬಂಧ ಆದೇಶ ಹೊರಡಿಸಿದ್ದರೆ, ಹೆಆರ್‌ಎಂಎಸ್ 2.0 ತಂತ್ರಾಂಶದಲ್ಲಿ ಅಳವಡಿಸಲು ಆದೇಶ ಪ್ರತಿಗಳನ್ನು ಸಲ್ಲಿಸುವುದು. ಅನ್ವಯಿಸದಿರುವ ಭತ್ಯೆಗಳನ್ನು ನಿಲ್ಲಿಸುವುದು, ಭತ್ಯೆಗಳ, ವರ್ಗೀಕರಣ ಸರಿಪಡಿಸುವುದು, ಹೆಚ್ಚಿನ ದರದಲ್ಲಿ ಸೆಳೆದಿರುವ ಭತ್ಯೆಗಳನ್ನು ವೇತನದಲ್ಲಿ ಕಟಾಯಿಸಿ ಸರ್ಕಾರಕ್ಕೆ, ಮರುಭರಿಸುವುದು ಇದು ಅತಿ ಅವಶ್ಯವಾಗಿದೆ.
ಶೀಘ್ರದಲ್ಲೇ ಹಬ್‌ಎಂಎಸ್ 2.0 Payroll Module ನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ತಿಂಗಳ ವೇತನವನ್ನು 10 ಪೈಲಟ್ ಇಲಾಖೆಗಳನ್ನು ಹೆಚ್‌ಆರ್‌ಎಂಎಸ್ 2.0 ನಲ್ಲೇ ತಯಾರಿಸಿ, ಖಜಾನೆ-2ಗೆ ಸಲ್ಲಿಸಲಾಗುತ್ತಿದೆ. ಮುಂದುವರಿದು, ಇನ್ನು ಮುಂದಿನ ತಿಂಗಳುಗಳಲ್ಲಿ ಎಲ್ಲಾ ಇಲಾಖೆಗಳು ಹೆಚ್‌ಎಂಎಸ್ 2.0 ನಲ್ಲೇ ವೇತನ ಸಳೆಯುವುದರಿಂದ, ಯಾವುದೇ ಆಧಾರವಿಲ್ಲದ ಭತ್ಯೆಗಳನ್ನು ಸೆಳೆಯಲು ಹೆಚ್‌ಆರ್‌ಎಂಎಸ್ 2.0 ಬಿಡುವುದಿಲ್ಲ.
ಆದುದರಿಂದ ಈ ಪತ್ರದಲ್ಲಿ ತಿಳಿಸಿರುವಂತೆ ಎಲ್ಲಾ ಡಿಡಿಓಗಳಿಗೆ ತಮ್ಮ ಅಧೀನದ ಸಿಬ್ಬಂದಿಗಳ ಭತ್ಯೆಗಳನ್ನು ಜರೂರಾಗಿ ಪರಿಶೀಲಿಸಿ, ಹೆಚ್‌ಆರ್‌ಎಂಎಸ್ 2.0ನಲ್ಲಿ ಸೇರಿಸಲು ಸೂಕ್ತ ಮಾಹಿತಿಯೊಡನೆ ಸಲ್ಲಿಸಲು ತಿಳಿಸಿದೆ. ಯಾವುದೇ ವಿಶೇಷ ಭತ್ಯೆಗಳು ಆಧಾರವಿಲ್ಲದ ಲಭ್ಯಪಡಿಸಲಾಗುವುದಿಲ್ಲಾ ಎಂದು ಈ ಮೂಲಕ ತಿಳಿಸಿ, ಸೂಕ್ತ ನಿರ್ದೇಶನವನ್ನು ತಮ್ಮ ಎಲ್ಲಾ ಡಿಡಿಓಗಳಿಗೆ ನೀಡಲು ಕೋರಿದೆ.












Click it and Unblock the Notifications