ಹೊಸ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರದಿಂದ ಬಿಗ್‌ ಶಾಕ್‌

ಈಗಾಗಲೇ ದುಬಾರಿ ದುನಿಯಾದಲ್ಲಿ ಬದುಕು ನಡೆಸುವುದು ಕಷ್ಟ ಎಂಬ ಕೂಗು ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಇದರ ನಡುವೆಯೂ ಅದೆಷ್ಟೋ ಮಂದಿ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಕನಸಿನಲ್ಲೇ ದಿನ ದೂಡುತ್ತಿದ್ದಾರೆ. ಈಗ ರಾಜ್ಯ ಸರ್ಕಾರವು ಮನೆಯ ಕನಸು ಕಾಣುತ್ತಿದ್ದವರಿಗೆ ಆಘಾತ ನೀಡಲು ಮುಂದಾಗಿದೆ.

ಹೌದು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಹಲವು ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಪ್ರಮುಖವಾಗಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಲ್ಲು ಹಾಗೂ ಗಣಿಗಾರಿಕೆ ಕಲ್ಲಿನ ರಾಯಲ್ಟಿ ಹೆಚ್ಚಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಮೂಲಕ ಕಟ್ಟಡ ನಿರ್ಮಾಣ ವಲಯದ ಮೇಲೆ ಬೆಲೆ ಏರಿಕೆ ಚಾಟಿ ಬೀಸಲು ಮುಂದಾಗಿದೆ.

Karnataka Government Decides To Increase Royalty On Construction Stones

ಸಚಿವ ಸಂಪುಟ ಸಭೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆಯೂ ಸುದೀರ್ಘ ಚರ್ಚೆಯಾಗಿದೆ. ಈ ವೇಳೆ ಇದರ ರಾಯಲ್ಟಿ ಪರಿಷ್ಕರಣೆ ಮಾಡಲು ಕೂಡ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಈ ಮೂಲಕ ಸರ್ಕಾರಕ್ಕೆ ಆದಾಯ ಹರಿವು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಸದ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ತೊಡಕಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಿರುವ ಕಾರಣ ಈ ತೆರಿಗೆ ಪ್ರಮಾಣ ಹೆಚ್ಚಿಸಲಾಗುತ್ತಿದೆ ಎಂದು ಕಾರಣ ನೀಡಿದ್ದಾರೆ.

ಅದರಂತೆ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುವ ಕಲ್ಲು ಹಾಗೂ ಮೈನಿಂಗ್ ಕಲ್ಲಿನ ಪ್ರತಿ ಟನ್​ಗೆ ರಾಯಲ್ಟಿ ನಿಗದಿ ಮಾಡುವುದರಿಂದ ಹೆಚ್ಚುವರಿಯಾಗಿ 311 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಲಿದೆ. ಈ ಹಿಂದೆ ಒಂದು ಮೆಟ್ರಿಕ್ ಟನ್​ಗೆ 20 ರೂಪಾಯಿಯಷ್ಟು ರಾಯಲ್ಟಿ ನಿಗದಿ ಇತ್ತು. ಈಗ ಪ್ರತಿ ಮೆಟ್ರಿಕ್ ಟನ್‌ ಕಲ್ಲಿಗೆ 10 ರೂಪಾಯಿ ರಾಯಲ್ಟಿ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Karnataka Government Decides To Increase Royalty On Construction Stones

ಅಲ್ಲದೆ ಈ ರಾಯಲ್ಟಿ ಪಾವತಿ ಮಾಡದೆ, ಸಾಗಣೆ ಮಾಡಿದರೆ ಅವರಿಂದಲೂ ದಂಡ ವಿಧಿಸಲಾಗುವುದು. ಹಲವು ವರ್ಷಗಳಿಂದ ದಂಡ ವಸೂಲಿಯಾಗಿಲ್ಲ, ಹಾಗಾಗಿ ಈಗ ಒಂದೇ ಬಾರಿಗೆ ಬಾಕಿ ಪಾವತಿಗೂ ಅವಕಾಶ ನೀಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್‌ ಹೇಳಿದ್ದಾರೆ.

ಸುಮಾರು 1,221 ಕೋಟಿ ರೂಪಾಯಿ ಮೊತ್ತವನ್ನು ರಾಯಲ್ಟಿ ಎಂದು ಪರಿಗಣಿಸಲಾಗಿದೆ. 6,105 ಕೋಟಿ ರೂಪಾಯಿಯಷ್ಟು ದಂಡ ಬಾಕಿ ಇದೆ. ಸರ್ಕಾರಕ್ಕೆ ಈಗ ಆದಾಯದ ಅಗತ್ಯತೆ ಇರುವುದರಿಂದ ರಾಯಲ್ಟಿ ವಸೂಲಿಗೆ ಮುಂದಾಗಿದ್ದೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇನ್ನು ರಾಯಲ್ಟಿ ಹೆಚ್ಚಾಗುವುದರಿಂದ ಇದರ ಪರಿಣಾಮ ಮನೆ ನಿರ್ಮಾಣ ಮಾಡುವವರ ಮೇಲೆ ನೇರವಾಗಿ ಬೀಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮನೆ ನಿರ್ಮಾಣಕ್ಕೆ ಕಲ್ಲನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಈ ದುಬಾರಿ ಬಿಸಿ ಜನರಿಗೆ ತಟ್ಟಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಸರ್ಕಾರದ ಈ ನಿರ್ಧಾರದಿಂದ ಹೊಸ ಮನೆ ಕಟ್ಟುವ ಕನಸು ಕಂಡವರಿಗಂತೂ ಶಾಕ್‌ ನೀಡಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+