ಕರ್ನಾಟಕದಲ್ಲಿ ಒಮ್ಮೆ ಶಾಸಕರಾದವರಿಗೆ ಸಿಗುವ ದುಡ್ಡೆಷ್ಟು ? ಇಲ್ಲಿದೆ ಮಾಹಿತಿ!
ಕರ್ನಾಟಕದಲ್ಲಿ ಒಮ್ಮೆ ಶಾಸಕರಾದರೆ ಅವರಿಗೆ ಹಾಗೂ ಅವರ ಅವಲಂಬಿತ ಕುಟುಂಬಕ್ಕೆ ಸರ್ಕಾರಕ್ಕೆ ಎಷ್ಟು ಹಣ ಸಿಗುತ್ತದೆ ಅಥವಾ ಮಾಜಿ ಶಾಸಕರು ಮತ್ತು ದಿವಂಗತ ಮಾಜಿ ಶಾಸಕರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ ಮತ್ತು ವೈದ್ಯಕೀಯ ಭತ್ಯೆ (ಹಣ) ಎಷ್ಟು ಸಿಗುತ್ತದೆ ಎನ್ನುವ ವಿವರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಹಂಚಿಕೊಂಡಿರುವ ಮಾಹಿತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ ವಿಧಾನಸಭೆ ವಿಧಾನ ಸಭೆ ಸಚಿವಾಲಯದಿಂದ ಈ ಮಾಹಿತಿ ಹಂಚಿಕೊಳ್ಳಲಾಗಿದೆ ಎನ್ನುವ ಬರಹವಿರುವ ಪೋಸ್ಟ್ ಸೋಷಿಯಲ್ ಜನ ಹಂಚಿಕೊಳ್ಳುತ್ತಿದ್ದಾರೆ.

ಮಾಹಿತಿ ಹಕ್ಕು ಅಧಿನಿಯಮ 2005ರಡಿ ಉಲ್ಲೇಖಿತ ಅರ್ಜಿಯಲ್ಲಿ ಕೋರಿರುವಂತ ಮಾಜಿ ಶಾಸಕರು ಮತ್ತು ದಿವಂಗತ ಮಾಜಿ ಶಾಸಕರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ ಮತ್ತು ವೈದ್ಯಕೀಯ ಭತ್ಯೆಯನ್ನು ಈ ಕೆಳಕಂಡ ಕೋಷ್ಠಕದಲ್ಲಿ ವಿವರಿಸಿರುವಂತೆ ಪಾವತಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಮಾಜಿ ಶಾಸಕರು ಮತ್ತು ದಿವಂಗತ ಮಾಜಿ ಶಾಸಕರ & ಕುಟುಂಬದವರಿಗೆ ಇರುವ ಸೌಲಭ್ಯಗಳು
ನಿವೃತ್ತಿ ವೇತನ ಪ್ರತಿ ತಿಂಗಳು: 75.000.00
ಪ್ರತಿ ಹೆಚ್ಚುವರಿ ಅವಧಿಗೆ ಪ್ರತಿ ತಿಂಗಳು: 20.000.00
ವೈದ್ಯಕೀಯ ಭತ್ಯ ಪ್ರತಿ ತಿಂಗಳು: 20.000.00
ಕುಟುಂಬ ನಿವೃತ್ತಿ ವೇತನ ಪ್ರತಿ ತಿಂಗಳು: 37.500.00
ಪ್ರತಿ ಹೆಚ್ಚುವರಿ ಅವಧಿಗೆ ಪ್ರತಿ ತಿಂಗಳು: 10.000.00
ವೈದ್ಯಕೀಯ ಭತ್ಯೆ ಪ್ರತಿ ತಿಂಗಳು: 10.000.00
ಮಾಜಿ ಶಾಸಕರಿಗೆ ರೈಲ್ವೆ/ ವಿಮಾನ ಪ್ರಯಾಣ ಭತ್ಯೆ ವಾರ್ಷಿಕ: 2.00.000.00
ಮಾಜಿ ಶಾಸಕರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನು ಒದಗಿಸಲಾಗಿರುತ್ತದೆ.
ಇಷ್ಟೆಲ್ಲಾ ಯಾಕೆ ?
ಇನ್ನು ಒಮ್ಮೆ ಶಾಸಕರಾದವರಿಗೆ ಹಾಗೂ ಅವರ ಕುಟುಂಬದವರಿಗೆ ಇಷ್ಟೆಲ್ಲಾ ಹಣವನ್ನು ಯಾವ ಕಾರಣಕ್ಕೆ ಖರ್ಚು ಮಾಡಬೇಕು ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಬಡವರ ದುಡ್ಡನ್ನು ಅಥವಾ ತೆರಿಗೆದಾರರ ದುಡ್ಡನ್ನು ಈ ರೀತಿ ಖರ್ಚು ಮಾಡುವುದು ಎಷ್ಟು ಸರಿ ಎಂದು ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮ / ಆರ್‌ಟಿಐನ ಅಡಿಯಲ್ಲಿ ಈ ಮಾಹಿತಿಯನ್ನು ಕೇಳಲಾಗಿದ್ದು. ಜನ ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಅಲ್ಲದೇ ಗ್ಯಾರಂಟಿ ಯೋಜನೆಗೆ ಸರ್ಕಾರ ಹಣ ಹೊಂದಾಣಿಕೆ ಮಾಡುವುದಕ್ಕೆ ಸರ್ಕಸ್ ಮಾಡುತ್ತಿದೆ. ಈ ರೀತಿ ಇರುವಾಗ ಇಷ್ಟೊಂದು ಹಣವನ್ನು ಒಂದು ಬಾರಿ ಶಾಸಕರಾದವರಿಗೆ ಕೊಡುವುದಾದರೂ ಯಾಕೆ. ಈ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಹಲವರು ಆಗ್ರಹಿಸಿದ್ದಾರೆ.












Click it and Unblock the Notifications