ಕರ್ನಾಟಕ ಚುನಾವಣೆ; ಪ್ರಚಾರ ವಾಹನಗಳ ಖರ್ಚು, ವೆಚ್ಚಗಳು

ಬೆಂಗಳೂರು, ಮೇ 03; ಕರ್ನಾಟಕದಲ್ಲಿ ಮೇ 10ರಂದು ನಡೆಯುವ ಚುನಾವಣೆಗೆ ಪ್ರಚಾರ ಜೋರಾಗಿದೆ. ಹೆಲಿಕಾಪ್ಟರ್‌ನಿಂದ ಹಿಡಿದು ಕಾರು, ಜೀಪುಗಳ ತನಕ ವಾಹನಗಳ ಬಳಕೆಯಾಗುತ್ತಿದೆ. ಪ್ರಚಾರ ವಾಹನಗಳನ್ನು ಹೊಸದಾಗಿ ವಿನ್ಯಾಸವನ್ನು ಸಹ ಮಾಡಿಸಿ ಪಕ್ಷಗಳು ಬಳಕೆ ಮಾಡುತ್ತಿವೆ. ಇದಕ್ಕಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚಮಾಡಲಾಗುತ್ತಿದೆ.

ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ವಿನ್ಯಾಸಗೊಳಿಸಿದ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ವಾಹನವನ್ನು ವಿನ್ಯಾಸಗೊಳಿಸಿ ಬಾಡಿಗೆಗೆ ನೀಡುವು ಉದ್ಯಮವೂ ಇದೆ. ಬಹಿರಂಗ ಪ್ರಚಾರ ಮೇ 8ರ ತನಕ ನಡೆಯಲಿದೆ. ಆದ್ದರಿಂದ ಇನ್ನೂ ಕೆಲವು ದಿನ ಮೂರು ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳ ಪ್ರಚಾರದಲ್ಲಿ ವಾಹನಗಳ ಬಳಕೆ ಹೆಚ್ಚಿರುತ್ತದೆ.

Karnataka Elections 2023 Campaign Cost Of Modified Vehicles

ಡೆಕ್ಕನ್ ಹೆರಾಲ್ಡ್‌ ಪತ್ರಿಕೆ ವಿನ್ಯಾಸಗೊಳಿಸುವ ವಾಹನಗಳಿಗೆ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ? ಎಂಬ ವರದಿಯೊಂದನ್ನು ಪ್ರಕಟಿಸಿದೆ. ಮಹೀಂದ್ರಾ ಬೊಲೇರೊ, Isuzu ಸೇರಿದಂತೆ ವಿವಿಧ ವಾಹನಗಳನ್ನು ಪ್ರಚಾರದ ಕಣದಲ್ಲಿ ಕಾಣಬಹುದಾಗಿದೆ. ಅದನ್ನು ವಿನ್ಯಾಸಗೊಳಿಸಿ ಮೈಕ್ ಸೆಟ್ ಹಾಕಿ, ಲೈಟ್ ಹಾಕಿಸಿ ಅದರಲ್ಲೇ ನಿಂತು ಭಾಷಣ ಮಾಡಲಾಗುತ್ತಿದೆ, ರೋಡ್ ಶೋ ನಡೆಸಲಾಗುತ್ತಿದೆ.

ಲಕ್ಷಾಂತರ ರೂ. ವೆಚ್ಚ; ಮಹೀಂದ್ರಾ ಬೊಲೇರೊ ವಾಹನವನ್ನು ವಿನ್ಯಾಸಗೊಳಿಸಿ ಪ್ರಚಾರಕ್ಕೆ ಬಳಕೆ ಮಾಡಲು ಸುಮಾರು 50 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ಈ ವಾಹನದಲ್ಲಿ 8 ರಿಂದ 9 ಜನರು ಸಂಚಾರ ಮಾಡಬಹುದಾಗಿದೆ. ವಾಹನವನ್ನು ವಿನ್ಯಾಸಗೊಳಿಸಿ ಅದರಲ್ಲಿ ಸ್ಪೀಕರ್ ಅಳವಡಿಕೆ ಮಾಡಿ ಅದರಲ್ಲೇ ಚಿಕ್ಕ ವೇದಿಕೆ ಮಾಡಿ ಭಾಷಣ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ನಾಯಕರ ಸುರಕ್ಷತೆಗಾಗಿ ಗ್ರಿಲ್‌ಗಳನ್ನು ಅಳವಡಿಸಲಾಗಿದೆ.

Karnataka Elections 2023 Campaign Cost Of Modified Vehicles

Isuzuವನ್ನು ಪ್ರಚಾರದಲ್ಲಿ ಕಾಣಬಹುದಾಗಿದೆ. ಇದರ ವಿನ್ಯಾಸಕ್ಕಾಗಿ ಸುಮಾರು 1 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಸ್ಪೀಕರ್, ಆಂಪ್ಲಿಫೈರ್, ನಾಲ್ಕರಿಂದ ಐದು ಲೈಟ್ ಮುಂತಾದವುಗಳನ್ನು ಜೋಡಿಸಿ Isuzu ವಾಹನವನ್ನು ಪ್ರಚಾರಕ್ಕೆ ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ. ಮೂರು ಪಕ್ಷಗಳು ಈ ವಾಹನವನ್ನು ಹೆಚ್ಚಾಗಿ ಬಳಕೆ ಮಾಡುತ್ತಿವೆ.

ಈ ವಾಹನಗಳ ಮೇಲೆ ಪಕ್ಷದ ಚಿನ್ನೆ, ಅಭ್ಯರ್ಥಿಗಳ ಚಿತ್ರ, ಪಕ್ಷದ ಪ್ರಮುಖ ನಾಯಕರ ಚಿತ್ರಗಳನ್ನು ಹಾಕಿಸಲಾಗಿದೆ. ಈ ವಾಹನಗಳ ವಿನ್ಯಾಸವನ್ನು ತೆಲಂಗಾಣದ ಗುಂಟೂರಿನಲ್ಲಿ ಹೆಚ್ಚಾಗಿ ಮಾಡಿಸಲಾಗುತ್ತಿದೆ. ಈ ಹಿಂದಿನ ಚುನಾವಣೆ ಸಮಯದಲ್ಲಿಯೂ ಇಲ್ಲಿಯೇ ವಾಹನಗಳ ವಿನ್ಯಾಸ ಆಗಿತ್ತು.ಇದಕ್ಕಾಗಿಯೇ ವಿಶೇಷ ಗ್ಯಾರೇಜ್‌ಗಳು ಅಲ್ಲಿವೆ, ಪಕ್ಷಗಳು ಅಲ್ಲಿಯೇ ವಿನ್ಯಾಸದ ಕಾರ್ಯವನ್ನು ಮಾಡಿಸುತ್ತಿವೆ.

ಪ್ರಚಾರ ವಾಹನದಲ್ಲಿ ಜನರನ್ನು ಸೆಳೆಯಲು ಹಾಡುಗಳನ್ನು ಹಾಕಲಾಗುತ್ತದೆ. ಅಲ್ಲದೇ ನಾಯಕರು ಭಾಷಣ ಮಾಡುವಾಗ ಉತ್ತಮ ಗುಣಮಟ್ಟದ ಮೈಕ್ ಅಗತ್ಯವಿದೆ. ಚುನಾವಣಾ ಸಮಯದಲ್ಲಿ ಇಂತಹ ವಾಹನಗಳ ಬಳಕೆ ಹೆಚ್ಚಾಗಿದೆ. ಕೆಲವು ರಾಜಕೀಯ ಪಕ್ಷಗಳು ಪಕ್ಷದ ವತಿಯಿಂದಲೇ ವಾಹನ ಒದಗಿಸಿವೆ. ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿಯೂ ವಾಹನ ವಿನ್ಯಾಸಗೊಳಿಸಿ ಪ್ರಚಾರಕ್ಕೆ ಬಳಕೆ ಮಾಡುತ್ತಿದ್ದಾರೆ.

ರೋಡ್‌ ಶೋ, ಜಾಥಾಗಳಿಗೆ ಸಹ ವಾಹನ ಬಳಕೆ ಮಾಡಲಾಗುತ್ತಿದೆ. ಬಿಜೆಪಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಪ್ರಚಾರ, ರೋಡ್‌ ಶೋಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನ ಬಳಕೆ ಮಾಡುತ್ತಿದೆ. ವಾಹನಗಳಲ್ಲಿ ನಿಂತು ಭಾಷಣ ಮಾಡುವಾಗ, ರೋಡ್ ಶೋ ಮಾಡುವಾಗ ನಾಯಕರ ಸುರಕ್ಷತೆಗಾಗಿ ಗ್ರಿಲ್ ಆಳವಡಿಕೆ ಮಾಡಲಾಗಿದೆ.

ವಿನ್ಯಾಸಗೊಳಿಸಿದ ವಾಹನವನ್ನು ಬಾಡಿಗೆಗೆ ನೀಡುವುದು ಸಹ ಒಂದು ಉದ್ಯಮವಾಗಿದೆ. ಕೆಲವು ವ್ಯಕ್ತಿಗಳು, ಕಂಪನಿಗಳು ಇಂತಹ ವಾಹನಗಳನ್ನು ಬಾಡಿಗೆಗೆ ನೀಡುತ್ತವೆ. ಚುನಾವಣೆ ಮುಗಿದ ಬಳಿಕ ಅವುಗಳನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಸುಮಾರು 4 ಲಕ್ಷ ರೂ. ಖರ್ಚು ಮಾಡಿ ವಿನ್ಯಾಸಗೊಳಿಸಲಾಗುತ್ತದೆ. 15 ದಿನದಲ್ಲಿ ವಾಹನಗಳ ವಿನ್ಯಾಸ ಮಾಡಬಹುದಾಗಿದೆ. ಬಳಿಕ ಸುಲಭವಾಗಿ ಅವುಗಳನ್ನು ಕಳಚಲು ಸಹ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+