ಕರ್ನಾಟಕ ಅಸೆಂಬ್ಲಿ ಚುನಾವಣೆ: ₹17,36,04,076 ನಗದು ಸೇರಿ ಮದ್ಯ, ವಸ್ತುಗಳು, ಮಾದಕ ದ್ರವ್ಯ ಜಪ್ತಿ, ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್ 04: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚುನಾವಣಾಧಿ ಆಯೋಗ ನಿಗದಿ ಮಾಡಿದ ಅಧಿಕಾರಿಗಳು ಸೇರಿದಂತೆ ವಿವಿಧ ಜಾಗೃತ ದಳದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸೂಕ್ತ ತಪಾಸಣೆ ನಡೆಸುತ್ತಿದ್ದಾರೆ. ಹೀಗಾಗಿ ಕೋಟ್ಯಂತರ ಮೌಲದ ವಸ್ತುಗಳು, ಮದ್ಯ, ಹಣವನ್ನು ಮಂಗಳವಾರವೂ ವಶಕ್ಕೆ ಪಡೆಯಲಾಗಿದೆ.
ರಾಜ್ಯದಲ್ಲಿ ಮಾರ್ಚ್ 29 ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಅಂದಿನಿಂದಲೂ ಯಾವುದೇ ಅಂಜಿಕೆ, ಕಾನೂನುಗಳ ಭಯವಿಲ್ಲದೇ ನಿಯಮಗಳು ಉಲ್ಲಂಘಿಸಲಾಗುತ್ತಿದೆ. ಚುನಾವಣೆ ಹಿನ್ನೆಲೆ ಮತದಾರ ಒಲೈಕೆಗಾಗಿ ಬಳಕೆಯಾಗುತ್ತಿದ್ದ ವಸ್ತುಗಳು, ನಗದು, ಮಾದಕ ದ್ರವ್ಯ, ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅದರ ಈವರೆಗಿನ ಒಟ್ಟು ಮಾಹಿತಿ ಇಲ್ಲಿದೆ.

ವಿಚಕ್ಷಣ ದಳ ಮತ್ತು ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು ರೂ. 17,36,04,076 ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ ಮತ್ತು ಸ್ಥಿರ ಕಣ್ಗಾವಳು ಸಿಬ್ಬಂದಿ ಅಬಕಾರಿ ಇಲಾಖೆ ಮತ್ತು ಪೊಲೀಸರು ರೂ. 22,35,85,130 ಮೌಲ್ಯದ 3,27,604 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ.
ಒಟ್ಟು 1,560 ಪ್ರಕರಣ ದಾಖಲು
ಒಟ್ಟು 42,66,910 ರೂಪಾಯಿ ಮೌಲ್ಯದ 82.85 ಕೆ.ಜಿ ಮಾದಕ ವಸ್ತುಗಳು, ಅಬಕಾರಿ ಇಲಾಖೆಯ ಅಧಿಕಾರಿಗಳು 584 ಗಂಭೀರ ಪ್ರಕರಣಗಳನ್ನು ಮತ್ತು ಮದ್ಯ ಪರವಾನಿಗೆ ನಿಯಮ ಉಲ್ಲಂಘಿಸಿದ 373 ಪ್ರಕರಣಗಳು, 16 NDPS ಮತ್ತು ಕನಾಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ ಅಡಿ ಒಟ್ಟು 1,560 ಪ್ರಕರಣಗಳ ದಾಖಲಿಸಿದೆ. ಅಷ್ಟೇ ಅಲ್ಲದೇ ಈ ಸಂಬಂಧ ಬಳಕೆ ಮಾಡಲಾಗಿದ್ದ ವಿವಿಧ ಮಾದರಿಯ 357 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಕಣ್ಗಾವಳು ತಂಡದ ಸದಸ್ಯರು ಮತ್ತು ಪೊಲೀಸರು ರೂಪಾಯಿ 8,50,61,733 ಮೌಲ್ಯದ 22.691 ಕೆ.ಜಿ ಬಂಗಾರ, ರೂ. 65,19,560/- ಮೌಲ್ಯದ 93.563 ಕೆ.ಜಿ ಬೆಳ್ಳಿಯನ್ನು, ರೂಪಾಯಿ 11,69,55,485 ಮೌಲ್ಯದ ಉಚಿತವಾಗಿ ಮತದಾರಿಗೆ ನೀಡಿ ಆಮಿಷ ಒಡ್ಡಲು ಇಟ್ಟುಕೊಂಡಿದ್ದ ಉಡುಗೊರೆ ಸೇರಿದಂತೆ ಇನ್ನಿತರ ವಸ್ತುಗಳು ಜಪ್ತಿ ಮಾಡಲಾಗಿದೆ.

ಕರ್ನಾಟ ವಿಧಾನಸಭಾ ಚುನಾವಣೆ 2023 ದಿನಾಂಕವು ಮಾರ್ಚ್ 29ರಂದು ಘೋಷಣೆ ಆಯಿತು. ಅಂದಿನಿಂದ ಈವರೆಗೆ ಒಟ್ಟಾರೆ 37462 ಶಸ್ತ್ರಾಗಳನ್ನು ಜಮೆ ಮಾಡಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಇದೂವರೆಗೆ ಒಟ್ಟು 60,99,92, 894 ರೂಪಾಯಿ ಮೌಲ್ಯದ ನಗದು ಪತ್ತೆಯಾಗಿದೆ.
ಬೆಂಗಳೂರಿನ ಇಲ್ಲಿ ಭಾರಿ ನಗದು, ಬಂಗಾರ ವಶಕ್ಕೆ
ಇನ್ನೂ ಬೆಂಗಳೂರಿನ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ 1,47,00,000 ರೂಪಾಯಿ ಮೌಲ್ಯದ 8,589 ಕೇಜಿ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೇ ರಾಜ್ಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದದಲ್ಲಿ ಸ್ವಯಂ ಪ್ರೇರಿತವಾಗಿ 3,36,95,900 ಮೌಲ್ಯದಷ್ಟು ನಗದನ್ನು ವಶಕ್ಕೆ ಪಡೆದಿದ್ದಾರೆ ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.
ಕರ್ನಾಟಕದಲ್ಲಿ ಮುಂದಿನ ಮೇ 10 ರಂದು ಒಂದೇ ಹಂತದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಅದೇ ಮೇ 13 ರಂದೇ ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ. ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ದಳ ನಾಯಕರು ಚುನಾವಣೆ ಎದುರಿಸಲು ಸಜ್ಜಾಗಿದ್ದು, ಮೂರು ಪ್ರಮುಖ ಪಕ್ಷಗಳ ಮಧ್ಯೆ ತೀವ್ರ ಜಿದ್ದಾ ಜಿದ್ದ ನಡೆಯಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.












Click it and Unblock the Notifications