ಚುನಾವಣಾ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 145 ಕೋಟಿ ರೂ. ನಗದು ಜಪ್ತಿ. ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು, ಮೇ 09: ರಾಜ್ಯ ವಿಧಾನಸಭಾ ಚುನಾವಣೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿ, ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮವನ್ನು ತಡೆಗಟ್ಟಲು ಚುನಾವಣಾಧಿಕಾರಿಗಳು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ನೀತಿ ಸಂಹಿತೆ ಜಾರಿಯಾದ ನಂತರ ಇಲ್ಲಿಯವರೆಗೂ ಕೋಟೆಗಟ್ಟಲೆ ಹಣ ಜಪ್ತಿ ಮಾಡಲಾಗಿದೆ.
ಹೌದು, ರಾಜ್ಯಾದ್ಯಂತ ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ದಾಳಿ ವೇಳೆ ಮತ್ತು ಚೆಕ್ ಪೋಸ್ಟ್ಗಳಲ್ಲಿ ಈವರೆಗೆ ಬರೋಬ್ಬರಿ 145 ಕೋಟಿ ರೂ. ಜಪ್ತಿಯಾಗಿದೆ. ಈವರೆಗೆ 375 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಅಧಿಕೃತ ಮಾಹಿತಿಯನ್ನ ನೀಡಿದೆ. ಇನ್ನೂ ಕಂತೆ ಕಂತೆ ಕೋಟಿ ಹಣದ ಜೊತೆಗೆ ಮದ್ಯ, ಬೆಳ್ಳಿ, ಬಂಗಾರ, ಕುಕ್ಕರ್ ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ನೀತಿ ಸಂಹಿತೆ ಜಾರಿಯಾದ ದಿನದಿಂದ ಐಟಿ ಅಧಿಕಾರಿಗಳು ರಾಜ್ಯಾದ್ಯಂತ ಕಾರ್ಯಚಾರಣೆ ನಡೆಸುತ್ತಿದ್ದು, ಅಕ್ರಮವಾಗಿ ಹಣ ಸಂಗ್ರಹಿಸಿದ್ದ ನೂರಕ್ಕೂ ಅಧಿಕ ಕಡೆ ಐಟಿ ದಾಳಿ ನಡೆಸಿದ್ದಾರೆ. ಈ ವೇಳೆ ಬರೊಬ್ಬರಿ 42 ಕೋಟಿ ರೂ. ಹಣ ಸೀಜ್ ಮಾಡಿದೆ. ವಿಜಿಲೆನ್ಸ್, ಚೆಕ್ ಪೋಸ್ಟ್ಗಳಲ್ಲಿ 105 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ.
96.59 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು, ಸೀರೆ, ಕುಕ್ಕರ್ ಸೇರಿ 24.21 ಕೋಟಿ ಮೌಲ್ಯದ ಹಲವು ಬಗೆಯ ವಸ್ತು, 83.33 ಕೋಟಿ ರೂ. ಮೌಲ್ಯದ 81.39 ಕೋಟಿ ಲೀಟರ್ ಮದ್ಯ, 23 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಸೀಜ್ ಮಾಡಲಾಗಿದೆ. ರಾಜ್ಯಾದ್ಯಂತ 2,896 ಎಫ್‍ಐಆರ್ ದಾಖಲಾಗಿವೆ ಎಂದು ಮಾಹಿತಿ ನೀಡಿದೆ.

ಜಿಲ್ಲಾವಾರು ಮದ್ಯ, ಹಣ, ಚಿನ್ನ ವಶಕ್ಕೆ! ಇಲ್ಲಿದೆ ಮಾಹಿತಿ
ಕೊಪ್ಪಳದಲ್ಲಿ ಸಿಕ್ಕಿದೆಷ್ಟು?
ಹಣ ಜಪ್ತಿ: 3,91,40,900 ರೂ.
ಮದ್ಯ ಜಪ್ತಿ: 7,40,000 ರೂ.
ಚಿನ್ನಾಭರಣ ಜಪ್ತಿ: 1.24,088 ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 132
ಬೀದರ್ ನಲ್ಲಿ ಎಷ್ಟು ಹಣ ಜಪ್ತಿ
ಹಣ ಜಪ್ತಿ- 9,82,00,000 ರೂ.
ಮದ್ಯ ಜಪ್ತಿ - 72,440 ಲೀ.
ಬೆಳ್ಳಿ ಕಾಯಿನ್ಸ್ ಜಪ್ತಿ - 1 ಕೋಟಿಗೂ ಅಧಿಕ
ನೀತಿಸಂಹಿತೆ ಉಲ್ಲಂಘನೆ ಕೇಸು- 31
ಶಿವಮೊಗ್ಗ ದಲ್ಲಿ ಸಿಕ್ಕ ನಗದು ಹಣ ಎಷ್ಟು?
ಹಣ ಜಪ್ತಿ: 13,78,72,229 ರೂ.
ಮದ್ಯ ಜಪ್ತಿ: 95,884.27 ಲೀ.
ಚಿನ್ನಾಭರಣ ಜಪ್ತಿ: 9 ಕೆಜಿ, 577ಗ್ರಾಂ
ನೀತಿಸಂಹಿತೆ ಉಲ್ಲಂಘನೆ ಕೇಸು: 8
ಬಾಗಲಕೋಟೆ
ಹಣ ಜಪ್ತಿ: 10,61,00,000 ರೂ.
ಮದ್ಯ ಜಪ್ತಿ: 29,535 ಲೀಟರ್ ಲಿಕ್ಕರ್ ಜಪ್ತಿ
ಚಿನ್ನಾಭರಣ ಜಪ್ತಿ: 46,38,000 ಮೌಲ್ಯದ ಚಿನ್ನ ಮತ್ತು ಬೆಳ್ಳಿ
ಗಿಫ್ಟ್ ಐಟಮ್ಸ್ ಜಪ್ತಿ: 1,47,00,000 ರೂ. ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 72 ಕೇಸ್
ಕೋಲಾರ
ಹಣ ಜಪ್ತಿ: 5,40,00,000 ರೂ.
ಮದ್ಯ ಜಪ್ತಿ: 96,86,000 ರೂ.
ಚಿನ್ನಾಭರಣ ಇತರೆ ಗಿಫ್ಟ್ ಐಟಂ : 2,34,00,000 ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 89
ಕಲಬುರಗಿ
ಹಣ ಜಪ್ತಿ: 5 ಕೋಟಿ ರೂ.
ಐಟಿ ರೈಡ್ ಕೇಸ್ ಫೈಲ್: 3 ಕಡೆಗಳಲ್ಲಿ ಐಟಿ ದಾಳಿ; ಹಣ ಮತ್ತು ದಾಖಲೆಗಳನ್ನು ವಶಕ್ಕೆ
ಮಂಡ್ಯ
ಹಣ ಜಪ್ತಿ: 3,48,48,253 ರೂ.
ಮದ್ಯ ಜಪ್ತಿ: 108531.38 ಲೀ, 2,35,21,991 ರೂ. ಮೌಲ್ಯ
ಡ್ರಗ್ಸ್: 1.805 ಕೆಜಿ, 55,550 ರೂ. ಮೌಲ್ಯ.
ಇತರೆ : 22,557 ಪದಾರ್ಥಗಳು, 24,79,270 ರೂ. ಮೌಲ್ಯ.
ಬಳ್ಳಾರಿ
ಹಣ ಜಪ್ತಿ: 1,33,00,000 ರೂ.
ಮದ್ಯ ಜಪ್ತಿ: 16,500 ಲೀಟರ್- 54 ಲಕ್ಷ ಮೌಲ್ಯದ ಮದ್ಯ
ಚಿನ್ನಾಭರಣ ಜಪ್ತಿ: 33 ಲಕ್ಷ ಮೌಲ್ಯದ ಬಂಗಾರ
ನೀತಿಸಂಹಿತೆ ಉಲ್ಲಂಘನೆ ಕೇಸು: 23
ವಿಜಯನಗರ
ಹಣ ಜಪ್ತಿ: 1.5 ಕೋಟಿ ನಗದು ಸೀಜ್
ಮದ್ಯ ಜಪ್ತಿ: 51 ಸಾವಿರ ಲೀ.
ಚಿನ್ನಾಭರಣ ಜಪ್ತಿ: 5.5 ಕೋಟಿ ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 1915
ವಿಜಯಪುರ
ಹಣ ಮತ್ತು ವಸ್ತುಗಳ ಜಪ್ತಿ : 2.03 ಕೋಟಿ ರೂ.
ಮದ್ಯ ಜಪ್ತಿ: 45.59 ಲಕ್ಷ ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 29
ಚಾಮರಾಜನಗರ
ಹಣ ಜಪ್ತಿ: 2.7 ಕೋಟಿ ರೂ.
ಮದ್ಯ ಜಪ್ತಿ: 1.28 ಕೋಟಿ ರೂ.
ನೀತಿ ಸಂಹಿತೆ ಉಲ್ಲಂಘನೆ ಕೇಸು: 12
ಚಿಕ್ಕಬಳ್ಳಾಪುರ
ಹಣ ಜಪ್ತಿ: 24,41,550ರೂ.
ಮದ್ಯ ಜಪ್ತಿ: 71,968 ರೂ.
ಲೀಟರ್ : (1,92,75,033) ಮೌಲ್ಯ
ಚಿನ್ನಾಭರಣ ಜಪ್ತಿ: 5.064 ಕೆಜಿ
ನೀತಿಸಂಹಿತೆ ಉಲ್ಲಂಘನೆ ಕೇಸು: 33
ಚಿಕ್ಕಮಗಳೂರು
ಹಣ ಜಪ್ತಿ : 3,11,61458 ರೂ.
ಮದ್ಯ ಜಪ್ತಿ : 76,65,414 ರೂ.
ಡ್ರಗ್ಸ್ : 4,84,000 ರೂ.
ಚಿನ್ನಾಭರಣ ಜಪ್ತಿ : 53,41,65,506 ರೂ. ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು : 24
ಚಿತ್ರದುರ್ಗ
ಹಣ ಜಪ್ತಿ : 81 ಲಕ್ಷ ರೂ.
ಮದ್ಯ ಜಪ್ತಿ : 50,273 ಲೀಟರ್, 1.16 ಕೋಟಿ ಮೌಲ್ಯ
ಚಿನ್ನಾಭರಣ ಜಪ್ತಿ: 14.84 ಕೆ.ಜಿ. 7.48 ಕೋಟಿ, 10 ಕೆ.ಜಿ. ಬೆಳ್ಳಿ 6.2 ಲಕ್ಷ ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 28
ದಾವಣಗೆರೆ
ಹಣ ಜಪ್ತಿ: 94,74,057 ರೂ.
ಮದ್ಯ ಜಪ್ತಿ: 3,17,77,802 ಮೌಲ್ಯದ 47,420 ಲೀ ಮದ್ಯ
ಕುಕ್ಕರ್ ಸೇರಿದಂತೆ ವಿವಿಧ ವಸ್ತುಗಳ ಜಪ್ತಿ: 85,00,048 ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 66
ಧಾರವಾಡ
ಹಣ ಜಪ್ತಿ: 1,58,75,000 ರೂ.
ಮದ್ಯ ಜಪ್ತಿ: 1,42,87,000
ಮಾದಕವಸ್ತುಗಳು: 81,69,864 ರೂ.
ಚಿನ್ನಾಭರಣ ಜಪ್ತಿ: 5,63,48,000
ನೀತಿಸಂಹಿತೆ ಉಲ್ಲಂಘನೆ ಕೇಸು: 58
ಐಟಿ ರೇಡ್ ಕೇಸ್ ಫೈಲ್: ಒಟ್ಟು 5 ಜನರ
ಗದಗ
ಹಣ ಜಪ್ತಿ: 2,37,72,000 ರೂ. ಅಧಿಕ ಹಣ
ಮದ್ಯ ಜಪ್ತಿ: 43,666,225 ಲೀಟರ್. (98,95,173 ರೂ.)
ಡ್ರಗ್ಸ್: 8.49 ಕೆ.ಜಿ ಡ್ರಗ್ಸ್ (8,30,550 ರೂ.)
ಚಿನ್ನಾಭರಣ, ಇತರೆ ಸಾಮಗ್ರಿಗಳ ಜಪ್ತಿ: 1,67,55,148 ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 68
ಹಾಸನ
ಹಣ ಜಪ್ತಿ : 1,87,29,430 ರೂ.
ಮದ್ಯ ಜಪ್ತಿ : 29,964 ಲೀಟರ್
ನೀತಿಸಂಹಿತೆ ಉಲ್ಲಂಘನೆ ಕೇಸು : 1,433
ಹಾವೇರಿ
ಹಣ ಜಪ್ತಿ: 76,15,364 ರೂ. ನಗದು ವಶ
ಮದ್ಯ ಜಪ್ತಿ: 2,04,92,980 ಮೊತ್ತದ 79,491.25 ಲೀಟರ್ ಲಿಕ್ಕರ್
ಚಿನ್ನಾಭರಣ ಜಪ್ತಿ: 6,93,81,492 ರೂ. ಮೊತ್ತದ 86 ಕೆ.ಜಿ. ಬೆಲೆಬಾಳುವ ಲೋಹಗಳು
ನೀತಿಸಂಹಿತೆ ಉಲ್ಲಂಘನೆ ಕೇಸು: 48 ಎಫ್‍ಐಆರ್
ಉತ್ತರ ಕನ್ನಡ
ಹಣ ಜಪ್ತಿ- 1,70,93,985 ರೂ.
ಮದ್ಯ ಜಪ್ತಿ- 2,11,13,395 ರೂ. (83,935.802 ಲೀಟರ್)
ಮಾದಕ ವಸ್ತುಗಳ ವಶ - 1,44,000 ರೂ. (5.24 ಕೆಜಿ)
ವಸ್ತುಗಳ ವಶ- 45,000 ರೂ. (79 ವಸ್ತುಗಳು)
ನೀತಿಸಂಹಿತೆ ಉಲ್ಲಂಘನೆ ಕೇಸು- 35
ಕೊಡಗು
ಹಣ ಜಪ್ತಿ: 0.2746 ಕೋಟಿ ರೂ.
ಮದ್ಯ ಜಪ್ತಿ: 0.8156 ಕೋಟಿ ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 12
ಒಟ್ಟಾರೆ ಸೀಜ್ 1.1264 ಕೋಟಿ
ದಕ್ಷಿಣ ಕನ್ನಡ
ಹಣ ಜಪ್ತಿ: 1,82,00,000ರೂ.
ಮದ್ಯ ಜಪ್ತಿ: 27,66,000 ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 66
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications