Karnataka election 2023: ಮತದಾನ ವೇಳೆ ಬಳಸುವ ಶಾಹಿ ಬಗ್ಗೆ ನಿಮಗೆ ಗೊತ್ತಿರದ ಇತಿಹಾಸ
ಬೆಂಗಳೂರು, ಮೇ 09: ಕರ್ನಾಟಕ ರಾಜ್ಯ ಚುನಾವಣಾ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬುಧವಾರ ಮೇ 10ರಂದು ಮತಗಟ್ಟೆಗಳ ಮುಂದೆ ಜನ ಸರಿತಿ ಸಾಲಿನಲ್ಲಿ ನಿಂತ ಮತದಾನ ಮಾಡುತ್ತಾರೆ. ತಾವು ಮತದಾನ ಮಾಡಿದ್ದೇವೆ ಎಂದು ಹೇಳಲು ಅವರು ಕೈಬೆರಳಿಗೆ ಹಾಕಿರುವ ಶಾಹಿ ಗುರುತನ್ನು ತೋರಿಸುತ್ತಾರೆ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಾಹಿ ಹಿಂದಿನ ಇತಿಹಾಸ ಇಲ್ಲಿ ತಿಳಿಯೋಣ.
ಭಾರತದ ಪ್ರಜಾಪ್ರಭುತ್ವದಲ್ಲಿ ಚುನಾವಣೆ-ಮತದಾನವನ್ನು ಒಂದು ಹಬ್ಬದಂತೆ ಎಲ್ಲರೂ ಆಚರಿಸುತ್ತಾರೆ. ಜನಸಾಮಾನ್ಯರಿಂದ ಹಿಡಿದು ಪ್ರಯೋಬ್ಬರ ಅರ್ಹ ಮತದಾರರು ಮತದಾನ ಮಾಡುತ್ತಾರೆ. ಮತ ಹಾಕಿ ಹೊರ ಬಂದು ಸೋಷಿಯಾ ಮೀಡಿಯಾಗಳಿಗೆ, ಮಾಧ್ಯಮಗಳ ಮುಂದೆ ಶಾಹಿ ಗುರುತು ತೋರಿಸಿ ನಗೆ ಬೀರುತ್ತಾರೆ. ಈ ಶಾಹಿಗೆ ಹತ್ತಾರು ವರ್ಷಗಳ ಹಿಂದಿನಿಂದಲೇ ಬಳಕೆಯಲ್ಲಿದೆ. ಅಲ್ಲದೇ ಶಾಹಿಗೂ ಮೈಸೂರು ರಾಜಮನೆತಕ್ಕೂ ಸಂಬಂಧ ಸಹ ಇದೆ ಎಂದು ನ್ಯೂಸ್ 18 ವರದಿ ಮಾಡಿದೆ.

ಆರಂಭಿಕವಾಗಿ ಬಳಸಿ ಶಾಹಿಯಿಂದ ಹಿಡಿದು 2023ರ ಚುನಾವಣೆವರೆಗೂ ಬಳಸುತ್ತಿರುವ ಶಾಹಿಯ ಉತ್ಪಾದನೆ ಮೈಸೂರು ಒಡೆತನದ 'ಮೈಸೂರು ಪೇಂಟ್ಸ್ ಆಮ್ಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆ'ಯಲ್ಲಿಯೇ ಆಗುತ್ತಿದೆ. ಮೈಸೂರು ಮಹಾರಾಜರಾದ ನಾಲ್ಕನೇ ಕೃಷ್ಣರಾಜ ಒಡೆಯರ್ ಅಂದಿನ ಕಾಲದಲ್ಲಿ ಭಾರೀ ಶ್ರೀಮಂತರು. ಈ ರಾಜವಂಶವು ಚಿನ್ನದ ಗಣಿ ಹಾಗೂ ಇನ್ನಿತರ ಕಂಪನಿಗಳನ್ನು ಹೊಂದಿದ್ದರು. ಅವರು ಹಲವು ಕಂಪನಿಗಳನ್ನು ಹೊಂದದ್ದರು, ಅದರಲ್ಲಿ ಪೇಂಟ್ಸ್ ಹಾಗೂ ವಾರ್ನಿಶ್ ಉತ್ಪಾದಿಸುವ ಕಂಪನಿಗಳು ಇದ್ದವು.
ಮೊದಲ ಚುನಾವಣೆಯಲ್ಲಿ ಮೋಸ: ಶಾಹಿ ಬಳಕೆಗೆ ಚಿಂತನೆ
ಭಾರತೀಯ ಇತಿಹಾಸದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದದ್ದು 1951-52 ರಲ್ಲಿ ಎನ್ನಲಾಗಿದೆ. ಇದು ಮೊದಲ ಚುನಾವಣೆ ಆಗಿದ್ದರಿಂದ ಸಾಕಷ್ಟು ಮೋಸ ನಡೆದದ್ದು ಅಂದಿನ ಚುನಾವಣಾಧಿಕಾರಿಗಳ ಗಮನಕ್ಕೆ ಬಂತು. ಹೀಗಾಗಿ ಅವರು ಚುನಾವಣೆ ಮತದಾನದಲ್ಲಿ ಇಂತಹ ಮೋಸ, ಒಬ್ಬ ವ್ಯಕ್ತಿಯೇ ಎರಡು ಬಾರಿ ಇಲ್ಲವೇ ಅದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಬಾರದೆಂದು ನಿರ್ಧರಿಸಿ ಶಾಹಿ ಬಳಕೆ ತಂತು.
ಈ ಸಂಬಂಧ ಅಂದು ರಾಜ್ಯ ಚುನಾವಣೆ ಆಯೋಗವು ನ್ಯಾಷನಲ್ ಫಿಸಿಕಲ್ ಲ್ಯಾಬರೇಟರಿ ಆಫ್ ಇಂಡಿಯಾವನ್ನು ಸಂಪರ್ಕಿಸಿ ಸುಲಭವಾಗಿ ಕೈಯಿಂದ ಅಳಿಸಲಾಗದ ಮತ್ತು ಕೆಲವು ದಿನ ಕೈಯಲ್ಲಿಯೇ ಉಳಿದು ಬಿಡುವ ಶಾಹಿಯನ್ನು ತಮಗಾಗಿ ಉತ್ಪಾದಿಸುವಂತೆ ಕೇಳಿಕೊಂಡಿತು.

1962ರ ಚುನಾವಣೆಯಲ್ಲಿ ಶಾಹಿ ಬಳಕೆ
ಇದಾದ ಬಳಿಕ ಶಾಹಿ ಉತ್ಪಾದಿಸಿ ಚುನಾವಣೆ ಪ್ರಕ್ರಿಯೆ ಬಳಕೆಗಾಗಿ ಕೊಡುವಂತೆ 'ಮೈಸೂರು ಪೇಂಟ್ಸ್ ಆಮ್ಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆ' ಅನ್ನು ಸಂಪರ್ಕಿಸಲಾಯಿತು. ಅದರಂತೆ ಶಾಹಿ ಉತ್ಪಾದಿಸಿ ಕೊಡುತ್ತಿರುವ ಮೈಸೂರು ಸಂಸ್ಥೆ ಇಂದಿಗೂ ಮುಂದುವರೆಸಿದೆ. 1962ರಲ್ಲಿ ಇದನ್ನು ಮೊದಲ ಬಾರಿಗೆ ದೇಶದಲ್ಲಿ ಬಳಕೆ ಮಾಡಲಾಯಿತು. ಇದರಿಂದ ಅಂದು ಮತದಾನ ವೇಳೆ ಆಗುತ್ತಿದ್ದ ಮೋಸ ತಡೆಗಟ್ಟಲು ಸಾಧ್ಯವಾಯಿತು.
ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೇ ವಿದೇಶಗಳಿಗೂ ಶಾಹಿ ತಯಾರಿಸಿ ಕೊಡುತ್ತಿದೆ. ಕರ್ನಾಟಕ ಒಂದು ಜಿಲ್ಲೆ ಅದರಲ್ಲೂ ರಾಜವಂಶಸ್ಥರ ಮನೆತನಕ್ಕೆ ಸೇರಿದ ಸಂಸ್ಥೆವೊಂದು ವಿದೇಶಗಳಿಗೆ ಶಾಹಿ ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ಕೆನಡಾ, ಸಿಂಗಾಪೂರ್, ಅಫ್ಘಾನಿಸ್ತಾನ್, ಟರ್ಕಿ ಸೇರಿದಂತೆ ಸುಮಾರು 35 ರಾಷ್ರಗಳೂ ನಮ್ಮ ಮೈಸೂರಿನಿಂದಲೇ ಶಾಹಿಯನ್ನು ಪಡೆಯುತ್ತಿವೆ.
ಪ್ರತಿ ವರ್ಷ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ ಮತಗಟ್ಟೆಗಳ ವ್ಯಾಪ್ತಿಯ ಜನರ ಸಂಖ್ಯೆಗೆ ತಕ್ಕಂತೆ ಶಾಹಿಯನ್ನು ಆರ್ಡರ್ ಮಾಡಿ ಪಡೆಯಲಾಗುತ್ತಿದೆ. ಇದನ್ನು ಹೇಗೆ ಉತ್ಪಾದಿಸುತ್ತಾರೆ ಎಂಬ ವಿಷಯ ಕಾರಣಾಂತರಗಳಿಂದ ಇಂದಿಗೂ ಗೌಪ್ಯವಾಗೇ ಇಡಲಾಗಿದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಿಲ್ವರ್ ನೈಟ್ರೇಟ್ ಘಟಕಾಂಶ ಇರುವುದರಿಂದ ಮತದಾರ ಬೆರಳಿನ ಮೇಲೆ ಹಾಕಿದ ಮೂರು ನಾಲ್ಕು ವಾರಗಳವರೆಗೆ ಅಳಿಯದಂತೆ ಉಳಿದುಕೊಳ್ಳವಷ್ಟು ಸಾಮರ್ಥ್ಯ ಈ ಶಾಹಿಗೆ ಇದೆ ಎನ್ನಲಾಗಿದೆ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಬೆಂಗಳೂರು ನಾಗರಿಕರೇ ಗಮನಿಸಿ; ಪರಿಷ್ಕೃತ ಕರಡು ಮತದಾರರ ಪಟ್ಟಿ- ಅಹವಾಲು, ಆಕ್ಷೇಪಣೆ ಆಹ್ವಾನ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications