Karnataka Drought: 35 ತಾಲೂಕುಗಳಲ್ಲಿ ಶೇ.50ಕ್ಕೂ ಅಧಿಕ ಮಳೆ ಕೊರತೆ, ರೈತರ ಗೋಳು ಕೇಳೋರಿಲ್ಲ!
ಬೆಂಗಳೂರು: ಕರ್ನಾಟಕದಲ್ಲಿ ಕೆಲವೇ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದ್ದು, ಉಳಿದೆಡೆ ಬರಗಾಲ ತಾಂಡವವಾಡುತ್ತಿದೆ. ರೈತರು ಸಂಕಷ್ಟ ಕೇಳುವವರೇ ಗತಿ ಇಲ್ಲದಂತಾಗಿದೆ. ರಾಜ್ಯದ ಸುಮಾರು 35 ತಾಲೂಕುಗಳಲ್ಲಿ ಶೇ.50ಕ್ಕೂ ಅಧಿಕ ಮಲೆ ಕೊರತೆ ಉಂಟಾಗಿದೆ. ಬಳ್ಳಾರಿ ಜಿಲ್ಲೆ ವ್ಯಾಪ್ತಿಯ ವಿವಿಧೆಡೆ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಹೀಗಿದ್ದಾಗ ರಾಜ್ಯ ಸರ್ಕಾರ ಬರ ಘೋಷಣೆಗೆ ಮೀನ ಮೇಷ ಎಣಿಸುತ್ತಿದೆ.
ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಸುರಿದ ಮಳೆಯು, ಸಮಾರು 35 ತಾಲೂಕುಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಪಮಾಣದ ಮಳೆ ದಾಖಲಾಗಿದೆ. ರಾಜ್ಯದ ಎಲ್ಲ ತಾಲೂಕುಗಳ ಪೈಕಿ ಬರೀ 41ವಾಡಿಕೆಗಿಂತ ಅಧಿಕ ಮಳೆ ಆಗಿದೆ. 44 ತಾಲೂಕುಗಳಲ್ಲಿ ಸಾಮಾನ್ಯ ಮಳೆ ಆಗಿದೆ. ಹೆಚ್ಚಿನ ತಾಲೂಕುಗಳಲ್ಲಿ ಮಳೆ ಕೊರತೆ ಸಂಭವಿಸಿದೆ.

ಸೊಂಡೂರು ಮತ್ತು ಹೊಸಪೇಟೆ ತಾಲೂಕು ವ್ಯಾಪ್ತಿಯಲ್ಲಿ ಶೇಕಡಾ 75ರಷ್ಟು ಮಳೆ ಕೊರತೆ ಉಂಟಾಗಿದ್ದು, ತೀವ್ರ ಬರಗಾಲ ಇಲ್ಲಿದೆ. ಇಷ್ಟಾದರೂ ರಾಜ್ಯ ಸರ್ಕಾರ ತ್ವರಿತವಾಗಿ ಸಮೀಕ್ಷೆ ನಡೆಸಿ ಬರಗಾಲ ಘೋಷಣೆಗೆ ಮನಸ್ಸು ಮಾಡುತ್ತಿಲ್ಲ. ಮಳೆಗಾಗಿ ಆಕಾಶವನ್ನೇ ನೋಡಿಕೊಂಡು ದಿನ ದೂಡುತ್ತಿರುವ ಉತ್ತರ-ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟ ಮುಂದುವರಿದಿದೆ. ವಿಪಕ್ಷ ನಾಯಕರು ಬೇಗ ಸಮೀಕ್ಷೆ ನಡೆಸಿ ಬರ ಘೋಷಿಸಿ, ಪರಿಹಾರ ಒದಗಿಸುವಂತೆ ಆಗ್ರಹಿಸುತ್ತಿವೆ.
ಸಚಿವರಿಂದ ಆಯಾ ಜಿಲ್ಲೆಗಳಲ್ಲಿ ಬರ ಪರಿಶೀಲನೆ
ಇತ್ತ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಸಚಿವರಿಗೆ ತಮ್ಮ ಜಿಲ್ಲೆಗಳಲ್ಲಿ ಬರ ಪರಸ್ಥಿತಿ ಪರಿಶೀಲಿಸುವಂತೆ, ಮಾಹಿತಿ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದರು. ತುಮಕೂರಲ್ಲಿ ಡಿಸಿಎಂ ರಾ.ಜಿ.ಪರಮೇಸ್ವರ್, ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್, ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ಈಶ್ವರ್ ಖಂಡ್ರೆ ಅವರು ಬರಗಾಲ ಸ್ಥಿತಿ ಪರಿಶೀಲಿಸಿದ್ದಾರೆ. ಕಳೆದ ಎರಡು ವಾರ ಕೆಲವು ಜಿಲ್ಲೆಗಳಲ್ಲಿ ಮಳೆ ಸಕ್ರಿಯವಾಗಿದ್ದರಿಂದ ಸರ್ಕಾರ ಕಾದು ನೋಡಲು ಮುಂದಾಯಿತಾ ಎಂಬ ಅನುಮಾನ ಮೂಡಿಸಿದೆ. ಉತ್ತರ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಮಳೆ ಕೊರತೆ ಮುಂದುವರಿದಿದ್ದು ಶೀಘ್ರವೇ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ವಾಡಿಕೆಯಷ್ಟೂ ಬಾರದ ಮಳೆ
ವಿಜಯನಗರ ಜಿಲ್ಲೆಗೆ ಬರಬೇಕಿದ್ದ 168 ಮಿಲಿ ಮೀಟರ್ ಮಳೆಗೆ ಬದಲಾಗಿ ಕೇವಲ 45 ಮಿಲಿ ಮೀಟರ್ ಮಳೆ ಆಗಿದೆ. ವಿಜಯನಗರ ಜಿಲ್ಲೆ ಕೂಡಾ ಶೇ.50ಕ್ಕೂ ಅಧಿಕ ಪ್ರಮಾಣದ ಮಳೆ ಕೊರತೆಯಿಂದ ನಲಗುತ್ತಿದೆ. ಇದೇ ರೀತಿಯ ಬೀದರ್, ಕಲಬುರಗಿ, ಯಾದಗಿರಿ, ಕೊಫ್ಪಳ, ಹಾವೇರಿ, ಗದಗ, ಬಾಗಲಕೋಟೆ ದಾವಣಗೆರೆ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲೂ ಬರಗಾಲ ಉಂಟಾಗಿದೆ.
ಚಿಕ್ಕಮಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು ಭಾಗಗಳಲ್ಲಿ ಉತ್ತಮ ಮಳೆ ಆಗಿದೆ. ರಾಜ್ಯದ 14 ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಒಂದೆರಡು ಡ್ಯಾಂ ಮಾತ್ರವೇ ಭರ್ತಿ ಆಗಿವೆ.
ಬರಗಾಲ: ಕೇಂದ್ರ-ರಾಜ್ಯ ಸರ್ಕಾರ ವಿಳಂಬ ಧೋರಣೆ
ತುಮಕೂರು ಜಿಲ್ಲೆ ಬರಗಾಲ ಪರಿಶೀಲಿಸಿದ ಡಿಸಿಎಂ ಡಾ.ಜಿ.ಪರಮೇಸ್ವರ್ ಅವರು ಬರಗಾಲ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದ ನೆರವಿಗೆ ಧಾವಿಸುವಂತೆ ಕೋರಿ ಈಗಾಗಲೇ ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಆದರೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ. 240 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದು, ಈ ಬಗ್ಗೆ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು. ಈ ಮೂಲಕ ಡಿಸಿಎಂ ಕೇಂದ್ರದತ್ತ ಬೊಟ್ಟು ಮಾಡಿದರು.
ಬರ ಘೋಷಣೆ ಮಾಡಬೇಕಾದರೆ ಕೇಂದ್ರದ ಕೆಲವು ನಿಯಮಗಳಿವೆ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವರದಿ ಬಂದ ಕೂಡಲೇ ನಮಗೊಂದು ಚಿತ್ರಣ ಸಿಗುತ್ತದೆ. ಆ ಬಳಿಕ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇಂದು ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲೂಕಿಗೆ ಭೇಟಿ ನೀಡಿ, ನಾಳೆ ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕಿಗೆ ಭೇಟಿ ನೀಡುತ್ತೇನೆ. ಬಳಿಕ ಅಧ್ಯಯನ ಮಾಡಿ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಬರಗಾಲ ಘೋಷಿಸಿದರೆ ಅದರ ಹಿಂದೆಯೇ ಪರಿಹಾರ ಸಹ ಬಿಡುಗಡೆ ಮಾಡಬೇಕಾಗುತ್ತದೆ. ಹೀಗಾಗಿಯೇ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಕೇಂದ್ರವು ಸಹ ಕರ್ನಾಟಕ ಸರ್ಕಾರದ ಮನವಿ ತ್ವರಿತವಾಗಿ ಸ್ಪಂದಿಸದೇ ವಿಳಂಬ ಧೋರಣೆ ಅನುರಿಸಿದ್ದಾರೆ. ಇಬ್ಬರ ರಾಜಕೀಯ ಜಗಳದಲ್ಲಿ ರೈತರ ಬರದ ಸಂಕಷ್ಟ ಅನುಭವಿಸುವಂತಾಗಿದೆ.


Click it and Unblock the Notifications
