Karnataka Dam Water Level: ಮಳೆ ಆರ್ಭಟಕ್ಕೆ ತುಂಗಭದ್ರಾ ಡ್ಯಾಂ ಭರ್ತಿ; ರಾಜ್ಯ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು?

ಬೆಂಗಳೂರು, ಜುಲೈ 27: ಕರ್ನಾಟಕ ಎಲ್ಲೆಡೆ ಮಳೆರಾಯನ ಆರ್ಭಟ ಹೆಚ್ಚಳವಾಗಿದ್ದು, ಜಲಾಶಯಗಳಿಗೆ ನಿರಂತರವಾಗಿ ಒಳಹರಿವು ಹೆಚ್ಚಾಗುತ್ತಿದೆ. ಕಳೆದ ಬಾರಿಗಿಂತ ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗುತ್ತಿದೆ. ಇದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ.

ಕರ್ನಾಟಕದ ಕೆಲವು ಜಲಾಶಯ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ, ಕೆಆರ್​​ಎಸ್​, ಹಾರಂಗಿ, ಘಟಪ್ರಭಾ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ಹೊರ ಹರಿಸಾಲಾಗುತ್ತಿದೆ. ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

Karnataka Dams Water level Today KRS Kabini Bhadra dam water level as on July 27th

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ 87766 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದಿಂದ ನದಿಗೆ ಅಪಾರ ನೀರು ಬಿಡುಗಡೆ ಮಾಡಲಾಗುತ್ತಿದೆ. ಡ್ಯಾಂನಿಂದ ಈಗ ನದಿಗೆ 84,149 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 101 ಟಿಎಂಸಿ ನೀರು ಸಂಗ್ರಹವಾಗಿದೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಜುಲೈ 27) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dams Water level Today KRS Kabini Bhadra dam water level as on July 27th
‌ಕರ್ನಾಟಕದ ಪ್ರಮುಖ ಜಲಾಶಗಳು ಗರಿಷ್ಠ ನೀರಿನ ಮಟ್ಟ (ಮೀಟರ್)

ಇಂದಿನ ನೀರಿನ ಮಟ್ಟ (ಟಿಎಂಸಿ)

ಒಳಹರಿವು‌ (ಕ್ಯೂಸೆಕ್ಸ್) ಹೊರಹರಿವು‌ (ಕ್ಯೂಸೆಕ್ಸ್)
​ಆಲಮಟ್ಟಿ ಜಲಾಶಯ 519.60 83.49 2,04,098 2,66,586
​ತುಂಗಭದ್ರಾ ಜಲಾಶಯ 497.71 101.73 87,766 84,149
​ಮಲಪ್ರಭಾ ಜಲಾಶಯ 633.80 25.46 21,606 194
​ಕೆ ಆರ್‌ ಎಸ್‌ 38.04 48.82 66,945 74,021
​ಲಿಂಗನಮಕ್ಕಿ ಜಲಾಶಯ 554,44 108.40 65,167 1,853
​ಕಬಿನಿ ಜಲಾಶಯ 696.13 18.41 19,729 19,250
​ಭದ್ರಾ ಜಲಾಶಯ 657.73 57.54 35,318 202
​ಘಟಪ್ರಭಾ ಜಲಾಶಯ 662.91 46.30 33,385 26,900
​ಹೇಮಾವತಿ ಜಲಾಶಯ 890.58 35.22 52,999 63,580
​ವರಾಹಿ ಜಲಾಶಯ 594.36 14.66 7,537 0
​ಹಾರಂಗಿ ಜಲಾಶಯ 871.38 7.44 9,288 13,916
​ಸೂಫಾ ಜಲಾಶಯ 564.00 86.89 35,786 0
​ನಾರಾಯಣಪುರ ಜಲಾಶಯ 492.25 26.86 2,04,098 2,66,586
​ವಾಣಿವಿಲಾಸ ಸಾಗರ 652.24 17.89 0 147
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+