Karnataka Dams Water level : ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಹೇಗಿದೆ? KRS, ಸೇರಿದಂತೆ ಪ್ರಮುಖ ಡ್ಯಾಂಗಳ ವಿವರ ಇಲ್ಲಿದೆ
ಬೆಂಗಳೂರು: ರಾಜ್ಯದ ಕಾವೇರಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನಲೆ ಭದ್ರಾ, ಹಾರಂಗಿ, ಕಬಿನಿ, ಕೆಆರ್‌ಎಸ್, ಹೇಮಾವತಿ, ಲಿಂಗನಮಕ್ಕಿ, ಆಲಮಟ್ಟಿ, ಮಲಪ್ರಭಾ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ.
ವಿಜಯಪುರದ ಆಲಮಟ್ಟಿ ಹಾಗೂ ಯಾದಗಿರಿಯ ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭದಿಂದಲೂ ಮಳೆಯಾಗಿದ್ದು, ಹಾಗಾದರೆ ಆಗಸ್ಟ್ 14 ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.

ಕೆಆರ್‌ಎಸ್ ಜಲಾಶಯ: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 109.80 ಅಡಿ ನೀರಿದ್ದು, ಒಟ್ಟು 31.521 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಸದ್ಯ ಶೇ.63.739ರಷ್ಟು ಭರ್ತಿಯಾಗಿದೆ. ಡ್ಯಾಂಗೆ 3,150 ಕ್ಯೂಸೆಕ್ ಒಳಹರಿವು ಇದ್ದು, 2,310 ಕ್ಯೂಸೆಕ್ ಹೊರಹರಿವು ಇದೆ.
ಆಲಮಟ್ಟಿ ಜಲಾಶಯ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಗರಿಷ್ಠ ಮಟ್ಟ ತಲುಪುವ ಹಂತದಲ್ಲಿದೆ. ಗರಿಷ್ಠ 519.60 ಮೀಟರ್ ಮಟ್ಟ ಹೊಂದಿರುವ ಡ್ಯಾಂನಲ್ಲಿ ಪ್ರಸ್ತುತ 519.45 ಮೀಟರ್ ನೀರಿದೆ. ಜಲಾಶಯಕ್ಕೆ 25,023 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 19,155 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಬಸವಸಾಗರ ಜಲಾಶಯ: ಯಾದಗಿರಿ ಜಿಲ್ಲೆಯ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯವೂ ಬಹುತೇಕ ಭರ್ತಿಯಾಗಿದೆ. ಗರಿಷ್ಠ 492.25 ಮೀಟರ್ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 492.23 ಮೀಟರ್ ನೀರಿದೆ. 18,000 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 6,000 ಕ್ಯೂಸೆಕ್ ಹೊರಹರಿವು ಇದೆ.
ಕಬಿನಿ ಜಲಾಶಯ: ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ವ್ಯಾಪ್ತಿಯ ಕಬಿನಿ ಜಲಾಶಯ ಪ್ರದೇಶದಲ್ಲಿ 32 ಮಿ.ಮೀ. ಮಳೆ ದಾಖಲಾಗಿದೆ. ಜಲಾಶಯದಲ್ಲಿ ಒಟ್ಟು 18.30 ಟಿಎಂಸಿ ನೀರು ಸಂಗ್ರಹವಿದ್ದು, ಲೈವ್ ಸ್ಟೋರೇಜ್ 8.49 ಟಿಎಂಸಿಯಾಗಿದೆ. ಪ್ರಸ್ತುತ 8,230 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 10,000 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಹೇಮಾವತಿ ಜಲಾಶಯ: ಹಾಸನ ಜಿಲ್ಲೆಯ ಗೊರೂರು ಬಳಿಯ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 31.884 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 36.803 ಟಿಎಂಸಿ ನೀರಿತ್ತು. ಸದ್ಯ ಜಲಾಶಯಕ್ಕೆ 4,264 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯ: ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ಆಗಸ್ಟ್ 14ರ ಬೆಳಗ್ಗೆ 8 ಗಂಟೆಯ ವೇಳೆಗೆ ನೀರಿನ ಮಟ್ಟ 1793.60 ಅಡಿ ದಾಖಲಾಗಿದೆ. ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಪ್ರಸ್ತುತ 13,079 ಕ್ಯೂಸೆಕ್ ಒಳಹರಿವು ಇದೆ.
ಹಿಡ್ಕಲ್ ಜಲಾಶಯ: ಹಿಡ್ಕಲ್ ಅಣೆಕಟ್ಟು ಶೇ 97.790ರಷ್ಟು ಭರ್ತಿಯಾಗಿದೆ. ಜಲಾಶಯದಲ್ಲಿ ಪ್ರಸ್ತುತ ಸುಮಾರು 49.873 ಟಿಎಂಸಿ ನೀರು ಸಂಗ್ರಹವಿದೆ.
ತುಂಗಭದ್ರಾ ಜಲಾಶಯ: ತುಂಗಭದ್ರಾ ಜಲಾಶಯವೂ ಉತ್ತಮ ನೀರಿನ ಸಂಗ್ರಹ ಹೊಂದಿದೆ. ಪ್ರಸ್ತುತ ಡ್ಯಾಂ ಶೇ. 84.548ರಷ್ಟು ಭರ್ತಿಯಾಗಿದ್ದು , 27,897 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದ ನೀರಿನ ಸಂಗ್ರಹ 89.442 ಟಿಎಂಸಿ ಗೆ ಏರಿಕೆಯಾಗಿದೆ.


Click it and Unblock the Notifications
