Karnataka Dam Water Level: ಭರ್ತಿಯಾಗುತ್ತಿವೆ ಪ್ರಮುಖ ಜಲಾಶಯಗಳು; ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಮಳೆ ಮುಂದುವರಿದಿರುವ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ವಿಶೇಷವಾಗಿ ಕಾವೇರಿ ಹಾಗೂ ಕೃಷ್ಣಾ ನದಿ ಕೊಳ್ಳದ ಹಲವು ಅಣೆಕಟ್ಟುಗಳಿಗೆ ಉತ್ತಮ ಪ್ರಮಾಣದ ನೀರು ಹರಿದುಬರುತ್ತಿದ್ದು, ಕೆಲ ಜಲಾಶಯಗಳು ಗರಿಷ್ಠ ಮಟ್ಟದ ಸಮೀಪ ತಲುಪಿವೆ. ಇದರಿಂದ ರೈತರಲ್ಲೂ ಆಶಾಭಾವನೆ ಮೂಡಿದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆಆರ್‌ಎಸ್ ಹಾಗೂ ಕಬಿನಿ ಅಣೆಕಟ್ಟುಗಳಿಗೆ ಒಳಹರಿವು ಉತ್ತಮವಾಗಿದೆ. ನಿರಂತರ ಮಳೆಯ ಪರಿಣಾಮ ಜಲಾಶಯಗಳ ನೀರಿನ ಸಂಗ್ರಹ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಹಾರಂಗಿ ಜಲಾಶಯವು ಶೇ.97.21ರಷ್ಟು ಭರ್ತಿಯಾಗಿದ್ದು, ಗರಿಷ್ಠ ಮಟ್ಟದ ಸಮೀಪದಲ್ಲಿದೆ. ಕಬಿನಿ ಜಲಾಶಯವೂ ಶೇ.95ಕ್ಕೂ ಅಧಿಕ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರು ಒಳಹರಿಯುತ್ತಿದೆ.

ಇನ್ನು ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವೂ ಏರಿಕೆಯಾಗುತ್ತಿದ್ದು, ಸದ್ಯ ಸುಮಾರು ಶೇ.63ರಷ್ಟು ಭರ್ತಿಯಾಗಿದೆ. ಹೇಮಾವತಿ ಜಲಾಶಯದಲ್ಲೂ ನೀರಿನ ಸಂಗ್ರಹ ಉತ್ತಮವಾಗಿದೆ. ರಾಜ್ಯದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಉತ್ತಮವಾಗಿದೆ. ಕೆಆರ್‌ಎಸ್, ಕಬಿನಿ, ಆಲಮಟ್ಟಿ, ಹೇಮಾವತಿ ಹಾಗೂ ಹಾರಂಗಿ ಸೇರಿದಂತೆ ಹಲವು ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಅದರಲ್ಲೂ ಹಾರಂಗಿ, ಕಬಿನಿ ಹಾಗೂ ಆಲಮಟ್ಟಿ ಜಲಾಶಯಗಳು ಗರಿಷ್ಠ ಮಟ್ಟದ ಸಮೀಪದಲ್ಲಿವೆ.
ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ತುಸು ಕಡಿಮೆಯಾಗಿದೆ. ಆಗಸ್ಟ್ 12ರ ಅಂಕಿ-ಅಂಶದ ಪ್ರಕಾರ ರಾಜ್ಯದ 22 ಪ್ರಮುಖ ಜಲಾಶಯಗಳ ಒಟ್ಟು ಗರಿಷ್ಠ ಸಾಮರ್ಥ್ಯ 532.259 TMC ಇದ್ದು, ಸದ್ಯ 379.379 TMC (71.28%) ನೀರು ಸಂಗ್ರಹವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಇದೇ ಜಲಾಶಯಗಳಲ್ಲಿ 432.913 TMC (81.24%) ನೀರು ಸಂಗ್ರಹವಾಗಿತ್ತು. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯಗಳ ಒಟ್ಟು ನೀರಿನ ಸಂಗ್ರಹದಲ್ಲಿ ಇಳಿಕೆ ಕಂಡುಬಂದಿದೆ.
ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ
ಕೆಆರ್‌ಎಸ್ ಜಲಾಶಯ
ಭರ್ತಿ: 63.197%
ಗರಿಷ್ಠ ಮಟ್ಟ: 2468.800 ಅಡಿ
ಪ್ರಸ್ತುತ ಮಟ್ಟ: 2453.530 ಅಡಿ
ಒಳಹರಿವು: 6,473 ಕ್ಯೂಸೆಕ್
ಹೊರಹರಿವು: 2,298 ಕ್ಯೂಸೆಕ್
ಸಾಮರ್ಥ್ಯ: 49.452 TMC
ಹಾರಂಗಿ ಜಲಾಶಯ
ಭರ್ತಿ: 97.212%
ಗರಿಷ್ಠ ಮಟ್ಟ: 2859.000 ಅಡಿ
ಪ್ರಸ್ತುತ ಮಟ್ಟ: 2858.300 ಅಡಿ
ಒಳಹರಿವು: 6,153 ಕ್ಯೂಸೆಕ್
ಹೊರಹರಿವು: 6,041 ಕ್ಯೂಸೆಕ್
ಸಾಮರ್ಥ್ಯ: 8.500 TMC
ಕಬಿನಿ ಜಲಾಶಯ
ಭರ್ತಿ: 95.901%
ಗರಿಷ್ಠ ಮಟ್ಟ: 2284.000 ಅಡಿ
ಪ್ರಸ್ತುತ ಮಟ್ಟ: 2282.760 ಅಡಿ
ಒಳಹರಿವು: 9,660 ಕ್ಯೂಸೆಕ್
ಹೊರಹರಿವು: 11,583 ಕ್ಯೂಸೆಕ್
ಸಾಮರ್ಥ್ಯ: 19.516 TMC
ಹೇಮಾವತಿ ಜಲಾಶಯ
ಭರ್ತಿ: 84.311%
ಗರಿಷ್ಠ ಮಟ್ಟ: 2922.000 ಅಡಿ
ಪ್ರಸ್ತುತ ಮಟ್ಟ: 2915.700 ಅಡಿ
ಒಳಹರಿವು: 3,216 ಕ್ಯೂಸೆಕ್
ಹೊರಹರಿವು: 500 ಕ್ಯೂಸೆಕ್
ಸಾಮರ್ಥ್ಯ: 37.103 TMC
ಆಲಮಟ್ಟಿ ಜಲಾಶಯ
ಭರ್ತಿ: 97.973%
ಗರಿಷ್ಠ ಮಟ್ಟ: 1704.810 ಅಡಿ
ಪ್ರಸ್ತುತ ಮಟ್ಟ: 1704.244 ಅಡಿ
ಪ್ರಸ್ತುತ ಸಂಗ್ರಹ: 120.586 TMC
ಒಳಹರಿವು: 69,104 ಕ್ಯೂಸೆಕ್
ಹೊರಹರಿವು: 60,450 ಕ್ಯೂಸೆಕ್
ಭದ್ರಾ ಜಲಾಶಯ
ಭರ್ತಿ: 76.572%
ಗರಿಷ್ಠ ಮಟ್ಟ: 2158.000 ಅಡಿ
ಪ್ರಸ್ತುತ ಮಟ್ಟ: 2143.750 ಅಡಿ
ಪ್ರಸ್ತುತ ಸಂಗ್ರಹ: 54.776 TMC
ಒಳಹರಿವು: 6,486 ಕ್ಯೂಸೆಕ್
ಹೊರಹರಿವು: 100 ಕ್ಯೂಸೆಕ್


Click it and Unblock the Notifications
