Kabini Dam: ಕಬಿನಿ ಡ್ಯಾಂ ಭರ್ತಿಗೆ ದಿನಗಣನೆ, ಕರ್ನಾಟಕ ಪ್ರಮುಖ ಜಲಾಶಯಗಳ ಜುಲೈ 31ರ ನೀರಿನ ಮಟ್ಟ, ವರದಿ

ಬೆಂಗಳೂರು: ಸದ್ಯ ರಾಜ್ಯದಲ್ಲಿ ಕಾವೇರಿ ನದಿ ನೀರು ವಿವಾದ ಭುಗಿಲೆದ್ದಿದೆ. ಈ ನಡುವೆ ಕಾವೇರಿಯ ಉಪ ನದಿಯಾದ ಕಬಿನಿ ಒಳಹರಿವು ಏರಿಕೆ ಆಗಿದ್ದು, ಕಬಿನಿ ಜಲಾಶಯ ತುಂಬಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಮಳೆ ಮುಂದುವರಿದರೆ ಡ್ಯಾಂ ಭರ್ತಿಯಾಗುವುದರಲ್ಲಿ ಅನುಮಾನ ಇಲ್ಲ. ರಾಜ್ಯದ ಮಲೆನಾಡು, ಕೇರಳ ಭಾಗದಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಕಾವೇರಿ, ಆಲಮಟ್ಟಿ, ತುಂಗಾ, ಭದ್ರಾ, ಲಿಂಗನಮಕ್ಕಿ ಸೇರಿದಂತೆ ಅನೇಕ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಆದರೆ ಜೂನ್‌ನಲ್ಲಿ ನಿರೀಕ್ಷಿತ ಮಳೆ ಆಗದ ಹಿನ್ನೆಲೆ ಯಾವೊಂದು ಜಲಾಶಯಗಳು ಆಗಸ್ಟ್ 2026 ಬಂದರೂ ಭರ್ತಿಯಾಗಿಲ್ಲ.

ಜಲಾಯನಯ ಪ್ರದೇಶಗಳಲ್ಲಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಲಿಂಗನಮಕ್ಕಿ, ತುಂಗಭದ್ರಾ, ಘಟಪ್ರಭಾ, ಸುಪಾ, ಕಬಿನಿ ಸೇರಿದಂತೆ ವಿವಿಧ ಜಲಾಶಯಗಳ ನೀರಿನ ಒಳಹರಿವು ಏರಿಕೆ ಆಗಿದೆ. ಮುಂದಿನ ಮೂರು ದಿನ ಕೊಡುಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೇರಳ ಭಾಗದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಇದರಿಂದ ಇನ್ನಷ್ಟು ನೀರಿನ ಸಂಗ್ರಹವಾಗುವ ಸಾಧ್ಯತೆ ಇದೆ. ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ (ಜುಲೈ 31) ನೀರಿನ ಮಟ್ಟ, ಅಂಕಿ ಸಂಖ್ಯೆಗಳು ಇಲ್ಲಿದೆ.

Karnataka Dam Water

ಲಿಂಗನಮಕ್ಕಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 151 ಟಿಎಂಸಿ
ಇಂದಿನ ನೀರಿನ ಸಂಗ್ರಹ: 48.23 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 20,003ಕ್ಯೂಸೆಕ್
ಒಟ್ಟು ಹೊರ ಹರಿವು: 2015 ಕ್ಯೂಸೆಕ್

ಕಬಿನಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 16 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 9133 ಕ್ಯೂಸೆಕ್
ಒಟ್ಟು ಹೊರ ಹರಿವು: 500 ಕ್ಯೂಸೆಕ್

ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 49.45 ಟಿಎಂಸಿ
ಇಂದಿನ ನೀರಿನ ಸಂಗ್ರಹ: 17.70 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 7058 ಕ್ಯೂಸೆಕ್
ಒಟ್ಟು ಹೊರ ಹರಿವು: 1706 ಕ್ಯೂಸೆಕ್

ತುಂಗಭದ್ರಾ ಅಣೆಕಟ್ಟು

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 105.73 ಟಿಎಂಸಿ
ಇಂದಿನ ನೀರಿನ ಸಂಗ್ರಹ: 37 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 15,690 ಕ್ಯೂಸೆಕ್
ಒಟ್ಟು ಹೊರ ಹರಿವು: 3648 ಕ್ಯೂಸೆಕ್

ಆಲಮಟ್ಟಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 123.08 ಟಿಎಂಸಿ
ಇಂದಿನ ನೀರಿನ ಸಂಗ್ರಹ: 114.57 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 82,743 ಕ್ಯೂಸೆಕ್
ಒಟ್ಟು ಹೊರ ಹರಿವು: 1,10,433 ಕ್ಯೂಸೆಕ್

ಘಟಪ್ರಭಾ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 51 ಟಿಎಂಸಿ
ಇಂದಿನ ನೀರಿನ ಸಂಗ್ರಹ: 33.54 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 10,828 ಕ್ಯೂಸೆಕ್
ಒಟ್ಟು ಹೊರ ಹರಿವು: 1556 ಕ್ಯೂಸೆಕ್

ಹಾರಂಗಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 8.40 ಟಿಎಂಸಿ
ಇಂದಿನ ನೀರಿನ ಸಂಗ್ರಹ: 8.12 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 4008 ಕ್ಯೂಸೆಕ್
ಒಟ್ಟು ಹೊರ ಹರಿವು: 3700 ಕ್ಯೂಸೆಕ್

ಹೇಮಾವತಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರಿನ ಸಂಗ್ರಹ: 25.02 ಟಿಎಂಸಿ
ಇಂದಿನ ಒಳಹರಿವು ಪ್ರಮಾಣ: 5445 ಕ್ಯೂಸೆಕ್
ಒಟ್ಟು ಹೊರ ಹರಿವು: 500 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+