Karnataka 14 Reservoirs: ರಾಜ್ಯದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ 135 ಟಿಎಂಸಿ ಕಡಿಮೆ ನೀರು
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆಗಾಗ ಮಳೆಯೇನೋ ಆಗುತ್ತಿದೆ. ನೂರಕ್ಕೂ ಅಧಿಕ ತಾಲೂಕುಗಳು ಬರಗಾಲ ಪರಿಸ್ಥಿತಿಯಲ್ಲಿವೆ. ಅರ್ಧ ರಾಜ್ಯದಲ್ಲಿ ಮಳೆಯೇ ಆಗುತ್ತಿಲ್ಲ. ಇದರಿಂದಲೇ ಈ ವರ್ಷ ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಮೆ ಪ್ರಮಾಣದ ನೀರು ಸಂಗ್ರಹವಾಗಿದೆ. ಎಲ್ಲ ಡ್ಯಾಂಗಳ ಒಟ್ಟು ನೀರಿನ ಮಟ್ಟ, ಅಪ್ಡೇಟ್ ವಿವರ ಇಲ್ಲಿದೆ.
ಪ್ರಸ್ತುತ ಮುಂಗಾರಿನಲ್ಲಿ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 763 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅದರಲ್ಲಿ 317 ಟಿಎಂಸಿ ಅಡಿ ನೀರನ್ನು ಹೊರ ಬಿಡಲಾಗಿದೆ. ವಿಚಿತ್ರವೆಂದರೆ ಈ ವರ್ಷ ಆಗಸ್ಟ್ 28ರ ಹೊತ್ತಿಗೆ 689 ಟಿಎಂಸಿ ಅಡಿ ನೀರು ಜಲಾಶಯಗಳಲ್ಲಿದೆ. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ 135 ಟಿಎಂಸಿ ನೀರು ಕಡಿಮೆ ಎಂದು 'ಡಿಎಚ್' ವರದಿ ಮಾಡಿದೆ.

ಕೃಷ್ಣಾ ಜಲಾನಯನ, ಆಲಮಟ್ಟಿ ಮಟ್ಟ ವಿವರ
ನೆರೆಯ ಮಹಾರಾಷ್ಟ್ರರಾಜ್ಯದಲ್ಲಿ ಭಾರೀ ಮಳೆ ಆದಾಗ ಅಲ್ಲಿಂದಲೂ ನೀರು ಹರಿದು ರಾಜ್ಯಕ್ಕೆ ಬರುತ್ತದೆ. ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಬಿದ್ದ ಭಾರೀ ಮಳೆಯಿಂದ ಕೃಷ್ಣಾ ಜಲಾನಯನ ಪ್ರದೇಶದ ಭಾಗಗಳಿಗೆ ಅಪಾರ ಪ್ರಯೋಜನ ಸಿಗುತ್ತದೆ. ಮುಂಗಾರು ಆರಂಭದ ಬಳಿಕ ಈ ಜಲಾನಯನ ಪ್ರದೇಶದ 6 ಅಣೆಕಟ್ಟುಗಳು 514 ಟಿಎಂಸಿಎಫ್‌ಟಿಗಿಂತ ಹೆಚ್ಚು ನೀರನ್ನು ಸಂಗ್ರಹಿಸಿವೆ. ಅದರಲ್ಳೂ ಆಲಮಟ್ಟಿ ಜಲಾಶಯದಲ್ಲಿ ಅಪಾರ ನೀರು ಸಂಗ್ರಹವಾಗಿದ್ದು, ಇದರ ಒಳಹರಿವು ವಾರಗಳಿಂದಲೂ ಹೆಚ್ಚೇ ಇದೆ.ಈ ಆರು ಜಲಾಶಯಗಳು ಸದ್ಯ 386 ಟಿಎಂಸಿಎಫ್‌ಟಿ ನೀರು ಸಂಗ್ರಹಿಸಿವೆ. ಇನ್ನಷ್ಟು ಮಳೆ ಆದರೂ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಸದ್ಯದ ನೀರು ಗರಿಷ್ಠ ಮಟ್ಟಕ್ಕಿಂತ ಕಡಿಮೆ ಇದೆ.
ರೈತರ ಆತಂಕ ದೂರ
ಇನ್ನು ಮಲೆನಾಡಿನ ಮಳೆ ಆಧಾರಿತ ರಾಜ್ಯದ ಮತ್ತೊಂದು ದೊಡ್ಡ ತುಂಗಭದ್ರಾ ಅಣೆಕಟ್ಟು ಜಲಾನಯನ ಭಾಗ ರೈತರಿಗೆ ಮುಂಗಾರು ಆರಂಭದಲ್ಲಿ ಆತಂಕವಾಗಿತ್ತು. ಆದರೆ ಹೊಸ ಗೇಟ್ ಅಳವಡಿಕೆ ಆಗುತ್ತಿದ್ದಂತೆ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಸುರಿದ ಮಳೆಯಿಂದ ತುಂಗಾ ಮತ್ತು ಭದ್ರಾ ನದಿಗಳು ಉಕ್ಕಿ ಹರಿದು ಬಂದವು. ಇದರಿಂದಾಗಿ ತುಂಗಭದ್ರಾ ಡ್ಯಾಂಗೆ ಜೀವಕಳೆ ಬಂತು, ರೈತರ ಆತಂಕ ದೂರವಾಯಿತು.
ಜುಲೈ ಅಂತ್ಯ ಮತ್ತು ಆಗಸ್ಟ್ ಆರಂಭದಲ್ಲಿ ಸುರಿದ ಅಪಾರ ಮಳೆಯು ತುಂಗಭದ್ರಾ ಡ್ಯಾಂ ನೀರು ಹೆಚ್ಚಳಕ್ಕೆ ಕಾರಣವಾಗಿದೆ. ಸದ್ಯ ಜಲಾಶಯದಲ್ಲಿ ಶೇ. 91ರಷ್ಟು ಅಂದರೆ 104 ಟಿಎಂಸಿಎಫ್‌ಟಿ ನೀರು ಸಂಗ್ರಹಿಸಿದೆ. ಸದ್ಯ ನೀರಾವರಿ ಇಲಾಖೆಯು 96.23 ಟಿಎಂಸಿಎಫ್‌ಟಿ ಅಡಿ ನೀರನ್ನು ಸಂಗ್ರಹಿಸಿದಾಗ 19.41 ಟಿಎಂಸಿಎಫ್‌ಟಿ ಅಡಿ ನೀರನ್ನು ಕಾಲುವೆಗೆ ಹರಿಸಿದ್ದಾರೆ. ಕಳೆದ ವರ್ಷ ಗೇಟ್ ದುರಸ್ತಿ ಕಾರಣಕ್ಕಾಗಿ ಇದೇ ಅವಧಿಗೆ ತುಂಗಭದ್ರಾ ಡ್ಯಾಂ ಕೇವಲ 80 ಟಿಎಂಸಿಎಫ್‌ಟಿ ಅಡಿ ನೀರು ಹೊಂದಿತ್ತು.
KRS ವಿವರ ಇಲ್ಲಿದೆ
ಇನ್ನೂ ಕಾವೇರಿ ಜಲಾಶಯವು ಆಗಸ್ಟ್ ಅಂತ್ಯದ ಹೊತ್ತಿಗೆ ಒಟ್ಟಾರೆ 101 ಟಿಎಂಸಿಎಫ್‌ಟಿ ನೀರು ಹೊಂದಿತ್ತು. ಕಳೆದ ವರ್ಷಕ್ಕಿಂತ ಕಡಿಮೆ ನೀರಿದ್ದರು ಸಹ ತಮಿಳುನಾಡಿನ ಅನಿವಾರ್ಯ ಕಾರಣದಿಂದ ನಿರಂತರವಾಗಿ ನೀರು ಬೀಡಬೇಕಾಯಿತು. ಸೆಪ್ಟಂಬರ್ ವರೆಗೆ ನೆರೆ ರಾಜ್ಯ ಕಾಯಲು ಸಿದ್ಧವಿರಲಿಲ್ಲ. ಸದ್ಯ ಕೆಆರ್ ಎಸ್ ನಲ್ಲಿ 32 ಟಿಎಂಸಿಎಫ್‌ಟಿ ನೀರಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 48 ಟಿಎಂಸಿಎಫ್‌ಟಿ ನೀರಿತ್ತು. ಸದ್ಯ ಮಲೆನಾಡಿನ ಮಳೆ ನೀರು ಆಧರಿಸುವ ರಾಜ್ಯ ಡ್ಯಾಂಗಳ ಒಳ ಹರಿವು ನಿರೀಕ್ಷೆಯಷ್ಟಿದೆ.


Click it and Unblock the Notifications
