ಟಿವಿ ಚಾನೆಲ್‌ಗಳಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಸರ್ಕಾರ!

ಕನ್ನಡ ನ್ಯೂಸ್ ಚಾನೆಲ್‌ಗಳ ಸಂಖ್ಯೆ ಈಗ ನೂರಕ್ಕೆ ತಲುಪಲು ಸಜ್ಜಾಗಿದ್ದು, ಎಲ್ಲೆಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಿದ್ದಾಗ ಬಹುತೇಕ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರುದ್ಧ ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದು. ಈ ಬೆಳವಣಿಗೆ ನಡುವೆ ಕರ್ನಾಟಕ ಕಾಂಗ್ರೆಸ್ ನಾಯಕರು ಟಿವಿ ಚಾನೆಲ್‌ಗಳಿಗೆ ಆಘಾತ ನೀಡಲು ಸಜ್ಜಾಗಿದ್ದು, ಟಿವಿ ಚಾನೆಲ್‌ಗಳ ವಿರುದ್ಧ ಹೊಸ ಬ್ರಹ್ಮಾಸ್ತ್ರ ಸಿದ್ಧಪಡಿಸಿದ್ದಾರೆ. ಹಾಗಾದರೆ ಆ ಅಸ್ತ್ರ ಏನು? ಬನ್ನಿ ತಿಳಿಯೋಣ.

ಅಂದಹಾಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸಿದ್ದು ಇದೀಗ 2ನೇ ವರ್ಷ ಪೂರೈಸುವತ್ತ ಮುನ್ನಡೆದಿದೆ. ಹೀಗಿದ್ದಾಗಲೇ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ & ಜೆಡಿಎಸ್ ನಾಯಕರು ಸಾಲು ಸಾಲು ಗಂಭೀರ ಆರೋಪಗಳನ್ನ ಮಾಡುತ್ತಿದ್ದಾರೆ. ಅದರಲ್ಲೂ 'ಮುಡಾ' ಸೈಟ್ ಹಗರಣ ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯ & ಕಾಂಗ್ರೆಸ್ ಸರ್ಕಾರದ ಪ್ರಮುಖರ ವಿರುದ್ಧವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಸಂಘಟಿಸಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಮಾಧ್ಯಮಗಳು ಕೂಡ ಮುಖ್ಯವಾಗಿ ಕನ್ನಡ ನಾಡಿನ ಟಿವಿ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ, ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದು.

Karnataka Congress Planning To Start New Own Media Organization

ಕನ್ನಡ ಟಿವಿ ಚಾನೆಲ್‌ಗಳಿಗೆ ಆಘಾತ?

ನ್ಯೂಸ್.. ನ್ಯೂಸ್.. ನ್ಯೂಸ್.. ಕೇವಲ 15 ವರ್ಷಗಳ ಹಿಂದೆ ಕನ್ನಡದಲ್ಲಿ ನ್ಯೂಸ್ ಚಾನೆಲ್ ನೋಡಬೇಕು ಅಂದ್ರೆ, ಭೂತ ಕನ್ನಡಿ ಹಿಡಿದು ಟಿವಿ ಸ್ಕ್ರೀನ್ ನೋಡಿ ಹುಡಕಾಡಬೇಕಾಗಿತ್ತು. ಆದರೆ ಈಗಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಕನ್ನಡದಲ್ಲಿ ನೂರಾರು ನ್ಯೂಸ್ ಚಾನೆಲ್ ಇವೆ. ಹೀಗಿದ್ದರೂ ಬಹುತೇಕ ಕನ್ನಡದ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರೋಧಿ ಸುದ್ದಿ ಪ್ರಕಟ ಮಾಡುತ್ತಿವೆ ಎಂಬುದು ಕಾಂಗ್ರೆಸ್ ಆರೋಪ. ಹೀಗಾಗಿ ಹೊಸ ಪ್ಲಾನ್ ಮಾಡಿದೆ ಕರ್ನಾಟಕ ಕಾಂಗ್ರೆಸ್. ಕರ್ನಾಟಕ ಕಾಂಗ್ರೆಸ್ ಈಗ ಮಾಡಿಕೊಂಡ ಪ್ಲಾನ್ ಪ್ರಕಾರ, ಶೀಘ್ರದಲ್ಲೇ ಕಾಂಗ್ರೆಸ್ ನೇತೃತ್ವದಲ್ಲಿ ಹೊಸ ನ್ಯೂಸ್ ಚಾನೆಲ್ ಕನ್ನಡದಲ್ಲಿ ಆರಂಭ ಮಾಡಲು ಚಿಂತನೆ ನಡೆದಿದೆ.

ಹಾಗೇ ಇಂಗ್ಲಿಷ್ ಭಾಷೆಯಲ್ಲೂ ಚಾನೆಲ್ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದು ಕಡೆ ನ್ಯೂಸ್ ಪೇಪರ್ ಒಂದನ್ನು ಕರ್ನಾಟಕ ಕಾಂಗ್ರೆಸ್ ವತಿಯಿಂದ ಆರಂಭ ಮಾಡೋದಕ್ಕೆ ಚರ್ಚೆಗಳು ನಡೆದಿವೆಯಂತೆ. ಹೀಗೆ ಕರ್ನಾಟಕ ಕಾಂಗ್ರೆಸ್ ವತಿಯಿಂದ ಸ್ವಂತ ನ್ಯೂಸ್ ಚಾನೆಲ್ ಅಥವಾ ಮಾಧ್ಯಮ ಸಂಸ್ಥೆ ಆರಂಭ ಮಾಡುವ ಬಗ್ಗೆ ನಡೆದಿರುವ ಚಿಂತನೆ ಕುರಿತು ಇದೀಗ, ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಮಾಹಿತಿ ನಿಡಿದ್ದಾರೆ.

ಪ್ಲಾನ್ ಯಾವಾಗ ಜಾರಿ ಆಗುತ್ತೆ?

ಒಟ್ನಲ್ಲಿ ಹೀಗೆ ಕರ್ನಾಟಕದ ಮಾಧ್ಯಮ ಲೋಕದಲ್ಲಿ ಹೊಸ ತಲ್ಲಣ ಸೃಷ್ಟಿ ಆಗಿದೆ. ಅದು ಹೇಗೆ ಎಂದರೆ ಕನ್ನಡ ನ್ಯೂಸ್ ಚಾನೆಲ್‌ಗಳು ತಮ್ಮ ವಿರುದ್ಧ ಬೇಕು ಅಂತಲೇ ಸುದ್ದಿಯನ್ನ ಮಾಡುತ್ತಿವೆ, ಇದರ ಹಿಂದೆ ಖುದ್ದು ಬಿಜೆಪಿ ನಾಯಕರ & ಜೆಡಿಎಸ್ ನಾಯಕರ ಕುತಂತ್ರವು ಅಡಗಿದೆ ಎಂಬ ಆರೋಪವು ಕರ್ನಾಟಕ ಕಾಂಗ್ರೆಸ್ ನಾಯಕರದ್ದು. ಪರಿಸ್ಥಿತಿ ಹೀಗಿದ್ದಾಗಲೇ ಸ್ವಂತ ಮಾಧ್ಯಮ ಸಂಸ್ಥೆ ಆರಂಭ ಮಾಡಿ ಬಿಜೆಪಿ & ಜೆಡಿಎಸ್ ನಾಯಕರ ವಿರುದ್ಧ ತೊಡೆ ತಟ್ಟುವ ಐಡಿಯಾ ಕರ್ನಾಟಕ ಕಾಂಗ್ರೆಸ್ ನಾಯಕರದ್ದು. ಆದರೆ ಈ ಪ್ಲಾನ್ ಯಾವಾಗ ಜಾರಿ ಆಗುತ್ತೆ? ಅಥವಾ ಜಾರಿ ಆಗುವ ಮೊದಲೇ ಐಡಿಯಾ ಮುಗಿದು ಹೋಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+