Karnataka Congress: ಕರ್ನಾಟಕ ಕಾಂಗ್ರೆಸ್‌ಗೆ ಹೊಸ ಜಿಲ್ಲಾಧ್ಯಕ್ಷರು: ಯಾವ ಜಿಲ್ಲೆಗೆ ಯಾರು? ಸಂಪೂರ್ಣ ಪಟ್ಟಿ ಇಲ್ಲಿದೆ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಸಂಘಟನಾ ಪುನರ್‌ವ್ಯವಸ್ಥೆಗೆ ವೇಗ ನೀಡುವ ಮಹತ್ವದ ಬೆಳವಣಿಗೆ ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ಅಧ್ಯಕ್ಷರ ನೇಮಕಾತಿಗೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ. ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 9, 2026ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಪಕ್ಷದ ಅಧ್ಯಕ್ಷರು ಒಪ್ಪಿಗೆ ನೀಡಿರುವುದಾಗಿ ತಿಳಿಸಲಾಗಿದೆ. ಇದರೊಂದಿಗೆ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಸಂಘಟನೆಯ ನೇತೃತ್ವ ಹೊಸ ಮುಖಗಳ ಕೈಗೆ ಬರಲಿದೆ.

Karnataka Congress:ಸಂಘಟನ್ ಸೃಜನ ಅಭಿಯಾನದಡಿ ನೇಮಕ
ಕಾಂಗ್ರೆಸ್ ಪಕ್ಷ ಕೈಗೊಂಡಿರುವ 'ಸಂಘಟನ್ ಸೃಜನ ಅಭಿಯಾನ' ದ ಭಾಗವಾಗಿ ಈ ನೇಮಕಾತಿ ಪ್ರಕ್ರಿಯೆ ನಡೆದಿದೆ. ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗೆ AICC ವೀಕ್ಷಕರನ್ನು ನಿಯೋಜಿಸಲಾಗಿತ್ತು.
ಈ ವೀಕ್ಷಕರು ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಇತರ ಪ್ರಮುಖರೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದ್ದರು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಸ್ಥಿತಿ, ಕಾರ್ಯಚಟುವಟಿಕೆಗಳು, ಸ್ಥಳೀಯ ನಾಯಕತ್ವ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳ ಕುರಿತು ಮಾಹಿತಿ ಸಂಗ್ರಹಿಸಿದ್ದರು.
Karnataka Congress:AICC ವೀಕ್ಷಕರ ವರದಿ ಆಧರಿಸಿ ಆಯ್ಕೆ
ಜಿಲ್ಲಾವಾರು ಕಾಂಗ್ರೆಸ್ ಸಂಘಟನೆಯ ಕಾರ್ಯವೈಖರಿ ಮತ್ತು ಮುಖಂಡರು-ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ AICC ವೀಕ್ಷಕರು ತಮ್ಮ ಸಮಗ್ರ ವರದಿಗಳನ್ನು ಸಲ್ಲಿಸಿದ್ದರು. ಈ ವರದಿಗಳ ಆಧಾರದ ಮೇಲೆ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಮುಂದುವರಿದಿದೆ. ವರದಿಗಳನ್ನು ಸ್ವೀಕರಿಸಿದ ನಂತರ ಪ್ರತಿ ವೀಕ್ಷಕರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗಿದ್ದು, ಪಕ್ಷದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೂ ಸಮಾಲೋಚನೆ ನಡೆಸಲಾಗಿದೆ ಎಂದು AICC ಪ್ರಕಟಣೆ ತಿಳಿಸಿದೆ.
ನೂತನ ಜಿಲ್ಲಾಅಧ್ಯಕ್ಷರ ಪಟ್ಟಿ
ಬಾಗಲಕೋಟೆ: ದಯಾನಂದ್ ಎಸ್. ಪಾಟೀಲ್
ಬೆಂಗಳೂರು ಉತ್ತರ: ಅಬ್ದುಲ್ ವಾಜಿದ್
ಬೆಂಗಳೂರು ದಕ್ಷಿಣ: ಒ. ಮಂಜುನಾಥ್
ಬೆಂಗಳೂರು ಪೂರ್ವ: ಡಿ.ಕೆ. ಮೋಹನ್ ಬಾಬು
ಬೆಂಗಳೂರು ಪಶ್ಚಿಮ: ಹನುಮಂತರಾಯಪ್ಪ
ಬೆಂಗಳೂರು ಸೆಂಟ್ರಲ್: ಜೆ. ಶರವಣನ್
ಬೆಂಗಳೂರು ಗ್ರಾಮಾಂತರ: ಸಿ. ಪ್ರಸನ್ನ ಕುಮಾರ್
ಚಿಕ್ಕೋಡಿ: ಲಕ್ಷ್ಮಣ್‌ರಾವ್ ಚಿಂಗಳೆ
ಬೆಳಗಾವಿ ನಗರ: ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಾಸಲೀಂ)
ಬೆಳಗಾವಿ ಗ್ರಾಮಾಂತರ: ಬಸವರಾಜ್ ಶೇಗಾವಿ
ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್
ಬಳ್ಳಾರಿ ಗ್ರಾಮಾಂತರ: ಕೆ. ಮಲ್ಲಿಕಾರ್ಜುನ್
ಬೀದರ್: ಅಬ್ದುಲ್ ಮನ್ನಾನ್ ಸೇಠ್
ಚಾಮರಾಜನಗರ: ಜೆ. ಯೋಗೇಶ್
ಚಿಕ್ಕಮಗಳೂರು: ಹೆಚ್.ಪಿ. ಮಂಜೇಗೌಡ
ದಕ್ಷಿಣ ಕನ್ನಡ: ಪದ್ಮರಾಜ್ ಆರ್. ಪೂಜಾರಿ
ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ
ಧಾರವಾಡ ಗ್ರಾಮಾಂತರ: ಚಂದ್ರಶೇಖರ್ ಜುಟ್ಟಲ್
ಗದಗ: ವಾಸಣ್ಣ ಕುರ್ಡಗಿ
ಕಲಬುರಗಿ: ಡಾ. ಕಿರಣ್ ಎ. ದೇಶಮುಖ್
ಹಾಸನ: ಶಶಿಧರ್ ಜಿ. ಬಿ.
ಹಾವೇರಿ: ಸಂಜೀವ್ ಕುಮಾರ್ ನೀರಲಗಿ
ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ್ ವಿ. ಡಂಗನವರ್
ಕೊಡಗು: ಧರ್ಮಜ ಉತ್ತಪ್ಪ
ಕೋಲಾರ: ಎನ್. ನಾರಾಯಣಸ್ವಾಮಿ
ಕೊಪ್ಪಳ: ಎಂ. ಮಲ್ಲಿಕಾರ್ಜುನ ನಾಗಪ್ಪ
ಮಂಡ್ಯ: ಕುಮಾರ್ ಕೊಪ್ಪ
ಮೈಸೂರು ನಗರ: ಆರ್. ಮೂರ್ತಿ
ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ
ರಾಯಚೂರು: ಕೆ. ಶಾಂತಪ್ಪ
ರಾಮನಗರ: ಸಿ.ಎನ್. ವೆಂಕಟೇಶ್
ಶಿವಮೊಗ್ಗ: ಹೆಚ್.ಸಿ. ಯೋಗೇಶ್
ಉಡುಪಿ: ಕಿಶನ್ ಕುಮಾರ್ ಹೆಗ್ಡೆ
ಉತ್ತರ ಕನ್ನಡ: ಗಜಾನನ ತಿಮ್ಮ ನಾಯ್ಕ್
ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ್


Click it and Unblock the Notifications
