• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್ ಸಿದ್ದರಾಮಯ್ಯ

By Mahesh
|

ಬೆಂಗಳೂರು, ಜುಲೈ 30: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ (39) ಅವರು ಕರಳುಬೇನೆ ಕಾಯಿಲೆಗೆ ತುತ್ತಾಗಿ ಚೇತರಿಕೆ ಕಾಣದೆ ಶನಿವಾರ ನಿಧನರಾಗಿದ್ದಾರೆ. ಬೆಲ್ಜಿಯಂನ ಯೂನಿವರ್ಸಿಟಿ ಆಸ್ಪತ್ರೆಯ ಐಸಿಯುನಲ್ಲಿ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

'ರಾಕೇಶ್ ರಲ್ಲಿ ಹೆಪಟೋ ರೆನಾಲ್ ಸಿಂಡ್ರೋಮ್ ಬೆಳವಣಿಗೆ ಕಂಡು ಬಂದಿತ್ತು. 72 ಗಂಟೆಗಳ ತೀವ್ರ ನಿಗಾ ನಂತರ ಏನಾದರೂ ಹೇಳಬಹುದು' ಎಂದು ಐಸಿಯು ಮುಖ್ಯಸ್ಥ ಫಿಲಿಫೆ ಜೊರೆನ್ಸ್ ತಿಳಿಸಿದ್ದರು. ನಿರಂತರ ಡಯಾಲಿಸಿಸ್ ನಡೆಸಲಾಗುತ್ತಿತ್ತು.[ಬಾರದ ಲೋಕಕ್ಕೆ ರಾಕೇಶ್, ಮೈಸೂರಲ್ಲಿ ನೀರವ ಮೌನ!]

ವಿವಿಧ ಅಂಗಾಂಗಗಳ ವೈಫಲ್ಯ ತಡೆಯಲು ಸತತ ಯತ್ನ ಕೂಡಾ ವಿಫಲವಾದ ಕಾರಣ ರಾಕೇಶ್ ಅಸುನೀಗಿದ್ದಾರೆ.[ರಾಕೇಶ್ ಅನಾರೋಗ್ಯ ಕರ್ನಾಟಕ 'ಸಿಎಂ' ಟ್ವೀಟ್ ಬಗ್ಗೆ ಆಕ್ಷೇಪ]

ಸಿದ್ದರಾಮಯ್ಯ ಅವರ ಕಿರಿಯ ಪುತ್ರ ಡಾ. ಯತೀಂದ್ರ, ಕುಟುಂಬದ ಡಾಕ್ಟರ್ ರವಿಕುಮಾರ್ ಹಾಗೂ ಮತ್ತೊಬ್ಬ ತಜ್ಞ ವೈದ್ಯರು ಬೆಲ್ಜಿಯಂನಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಗುರುವಾರದಂದು ಬ್ಸುಸೆಲ್ ತಲುಪಿದ್ದರು. ರಾಕೇಶ್ ಅವರ ತಾಯಿ ಪಾರ್ವತಿ, ಪತ್ನಿ ಸ್ಮಿತಾ ಹಾಗೂ ರಾಕೇಶ್ ಅವರ ಗೆಳೆಯರು ಆಸ್ಪತ್ರೆಯಲ್ಲಿದ್ದಾರೆ.

ರಾಕೇಶ್ ಗೆ ಪ್ಯಾಂಕ್ರಿಯಾಸ್ ಸಮಸ್ಯೆ ಇತ್ತು

ರಾಕೇಶ್ ಗೆ ಪ್ಯಾಂಕ್ರಿಯಾಸ್ ಸಮಸ್ಯೆ ಇತ್ತು

ಈ ಹಿಂದೆ 2000 ಇಸವಿಯಲ್ಲಿ ಅಪಘಾತವೊಂದರಲ್ಲಿ ಪೆಟ್ಟು ತಿದ್ದಿದ್ದ ರಾಕೇಶ್ ಅವರಿಗೆ ಕರುಳು ಬೇನೆ ಆರಂಭವಾಗಿತ್ತು, ಇದಕ್ಕಾಗಿ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬೆಲ್ಜಿಯಂ ಪ್ರವಾಸದ ವೇಳೆ epigastric ನೋವು ಉಲ್ಬಣವಾಗಿತ್ತು.

ಪ್ಯಾಂಕ್ರಿಯಾಸ್ ಸಮಸ್ಯೆ

ಪ್ಯಾಂಕ್ರಿಯಾಸ್ ಸಮಸ್ಯೆ

epigastric ನೋವು ಉಲ್ಬಣವಾದ ಮೇಲೆ ರಕ್ತ ಹೆಪ್ಪುಗಟ್ಟುವಿಕೆ, ಕಿಡ್ನಿ ವೈಫಲ್ಯ, ವಿವಿಧ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಲ್ಲಂಥ ತೀವ್ರ ಆಘಾತಕಾರಿ ಪರಿಸ್ಥಿತಿ ರಾಕೇಶ್ ಗಿತ್ತು. ಆದರೆ, ರಾಕೇಶ್ ಗೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೂ ಚೇತರಿಕೆ ಕಾಣಲು ಆಗಲಿಲ್ಲ.

ಪಚನ ಕ್ರಿಯೆಗೆ ಮಾರಕವಾಗಬಲ್ಲ ಸಮಸ್ಯೆ

ಪಚನ ಕ್ರಿಯೆಗೆ ಮಾರಕವಾಗಬಲ್ಲ ಸಮಸ್ಯೆ

ಪಚನ ಕ್ರಿಯೆಗೆ ಮಾರಕವಾಗಬಲ್ಲ ಪ್ಯಾಂಕ್ರಿಯಾಸ್ ಸಮಸ್ಯೆಗೆ ರಾಕೇಶ್ ಅವರಿಗೆ ಅಲ್ಕೋಹಾಲ್ ಪ್ರಮಾಣ ಅಧಿಕವಾದ ಕಾರಣ ಪರಿಸ್ಥಿತಿ ತೀವ್ರವಾಗಿರಬಹುದು, ಅಥವಾ ಕರುಳಿಗೆ ನೋವುಂಟಾಗುವಂಥ ಸಂದರ್ಭ ಒದಗಿರಬಹುದು, ಅವರಿಗೆ ಆಯುರ್ವೇದ ಚಿಕಿತ್ಸೆ ಕೂಡಾ ನೀಡಲಾಗುತ್ತಿತ್ತು. ಆದರೆ, ರಾಕೇಶ್ ಅವರ ದೇಹ ಸ್ಥಿತಿ ಬಹುಅಂಗಾಂಗ ವೈಫಲ್ಯ ಸ್ಥಿತಿ ತಲುಪಲು ಏನು ಕಾರಣ ತಿಳಿದಿಲ್ಲ ಎಂದು ಡಾ. ಅಬ್ದುಲ್ ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.

ಬೂಮ್ ನಗರದಲ್ಲಿ ರಾಕೇಶ್ ಗೆ ನೋವುಂಟಾಯಿತು

ಬೂಮ್ ನಗರದಲ್ಲಿ ರಾಕೇಶ್ ಗೆ ನೋವುಂಟಾಯಿತು

ರಾಕೇಶ್ ಅವರ ಪತ್ನಿ ಸ್ಮಿತಾ ಕಡೆ ಸಂಬಂಧಿಕರು ಜರ್ಮನಿಯಲ್ಲಿದ್ದು, ಅವರನ್ನು ಕಾಣಲು ರಾಕೇಶ್ ತೆರಳಿದ್ದರು. ಫ್ರಾನ್ಸ್, ಬೆಲ್ಜಿಯಂ ಪ್ರವಾಸ ನಿರತರಾಗಿದ್ದಾಗ ಕಿಬ್ಬೊಟ್ಟೆಯಲ್ಲಿ ತೀವ್ರನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಗೆಳೆಯರ ನೆರವಿನಿಂದ ಆಸ್ಪತ್ರೆಗೆ ಸೇರಿದ್ದಾರೆ. ಬೆಲ್ಜಿಯಂನ ಬೂಮ್ ನಗರದಲ್ಲಿ ನಡೆಯುತ್ತಿದ್ದ ಎಲೆಕ್ಟ್ರಾನಿಕ್ ಮ್ಯೂಸಿಕ್ ಹಬ್ಬಕ್ಕಾಗಿ ಟುಮಾರೋ ಲ್ಯಾಂಡಿಗೆ ರಾಕೇಶ್ ಹೋಗಿದ್ದರು ಎಂದು ಗೆಳೆಯರು ಹೇಳಿದ್ದಾರೆ.

ಉತ್ತರಾಧಿಕಾರಿಯನ್ನು ಕಳೆದುಕೊಂಡ ಸಿದ್ದರಾಮಯ್ಯ

ಉತ್ತರಾಧಿಕಾರಿಯನ್ನು ಕಳೆದುಕೊಂಡ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಮೈಸೂರಿನ ವರುಣಾ ಕ್ಷೇತ್ರದಲ್ಲಿ ರಾಕೇಶ್ ಅವರು ಸಕ್ರಿಯವಾಗಿ ಪ್ರಚಾರ ನಡೆಸಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಹೀರೋ ಆಗಲು ಯತ್ನಿಸಿ ವಿಫಲರಾಗಿದ್ದ ರಾಕೇಶ್ ಅವರು ತಮ್ಮ ವೃತ್ತಿ ಬದುಕನ್ನು ರಾಜಕೀಯದಲ್ಲಿ ಕಾಣಲು ಬಯಸಿದ್ದರು. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ನಿಲ್ಲಲಿದ್ದಾರೆ ಎಂಬ ಕನಸು ಈಗ ಭಗ್ನವಾಗಿದೆ.

English summary
Rakesh Siddaramaiah, elder son of Chief minister Siddaramaiah who was on ventilator support at the Antwerp University Hospital in Belgium passed away today (July 30) due to multiple organ failure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X