ಬೊಮ್ಮಾಯಿ ಬಜೆಟ್ : ‘ಸಾಕಪ್ಪ ಸಾಕು ಕಿವಿ ಮೇಲೆ ಹೂವು’ ಅಭಿಯಾನ ಪ್ರಾರಂಭಿಸಿದ ಕಾಂಗ್ರೆಸ್

ಕಾಂಗ್ರೆಸ್ ‘ಸಾಕಪ್ಪ ಸಾಕು ಕಿವಿಮೇಲೆ ಹೂವು’ ಎಂಬ ಪೋಸ್ಟರ್ ಗಳನ್ನ ಅಂಟಿಸುವ ಮೂಲಕ ಅಭಿಮಾನವನ್ನ ಆರಂಭಿಸಿದೆ.

ಬೆಂಗಳೂರು,ಫೆಬ್ರವರಿ18: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡನೆಯ ವೇಳೆ ಕಾಂಗ್ರೆಸ್‌ ನಾಯಕರು ಕಿವಿಗೆ ಹೂವು ಇಟ್ಟುಕೊಂಡು ವಿಭಿನ್ನವಾಗಿ ಸದನಕ್ಕೆ ಆಗಮಿಸಿ ಸರ್ಕಾರದ ವಿರುದ್ದ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಕಾಂಗ್ರೆಸ್ ಬೀದಿಗಿಳಿದು ಕಿವಿ ಮೇಲೆ ಹೂವು ಎಂಬ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದೆ.

ನಿನ್ನೆ (ಶುಕ್ರವಾರ) ಸದನದಲ್ಲಿ ಸರ್ಕಾರ ಮಂಡಿಸಿದ ಬಜೆಟ್ ಕುರಿತು ಜನರ ಕಿವಿಯಲ್ಲಿ ಹೂವು ಇಡಲು ಸರ್ಕಾರ ರೆಡಿಯಾಗಿದೆ ಎಂದು ವಿರೋಧ ವ್ಯಕ್ತಡಿಸಿದ್ದ ಕಾಂಗ್ರೆಸ್, ಇಂದು(ಶನಿವಾರ) ಬೆಂಗಳೂರು ನಗರ ಮತ್ತು ಮಂಗಳೂರಿನ ಹಲವೆಡೆ ಬಿಜೆಪಿ ಸಾಧನೆಯ ಗೋಡೆಯ ಪೇಂಟಿಂಗ್‌ಗಳ ಮೇಲ್ಭಾಗದಲ್ಲಿ 'ಕಿವಿ ಮೇಲೆ ಹೂವ' ಎಂಬ ಬರಹದ ಪೋಸ್ಟರ್‌ ಗಳು ಹಚ್ಚುವ ಮೂಲಕ ಅಭಿಮಾನವನ್ನ ಆರಂಭಿಸಿದೆ.

 Karnataka Budget 2023 : Congress Started Sakappa Saku Kivi Mele Huwa Campaign Against BJP

ಇನ್ನೂ ನಗರ ಭಾಗದಲ್ಲಿ ಬಿಜೆಪಿ ಸಾಧನೆಯ ಪೋಸ್ಟರ್ ಗಳನ್ನ ಅಂಟಿಸಿದ್ದು, ಆ ಪೋಸ್ಟರ್ ಮೇಲೆ ಕಾಂಗ್ರೆಸ್ 'ಸಾಕಪ್ಪ ಸಾಕು ಕಿವಿಮೇಲೆ ಹೂವು' ಎಂಬ ಪೋಸ್ಟರ್ ಗಳನ್ನ ಅಂಟಿಸುವ ಮೂಲಕ ಅಭಿಮಾನವನ್ನ ಆರಂಭಿಸಿದೆ. ಇನ್ನೂ ಕಳೆದದ ಚುನಾವಣೆಯಲ್ಲಿ ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಕಳೆದ ಬಜೆಟ್ ನಲ್ಲಿ 50% ಕೂಡ ದಾಟಿಲ್ಲ, ಈ ಬಜೆಟ್ ಕೇವಲ ಭಾಷಣದ ಬಜೆಟ್ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಡಿಸಿದ್ದಾರೆ.

 Karnataka Budget 2023 : Congress Started Sakappa Saku Kivi Mele Huwa Campaign Against BJP

ಶುಕ್ರವಾರ ರಾಜ್ಯ ಬಜೆಟ್ ಮಂಡನೆ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್‌ ಶಾಸಕರು ತಮ್ಮ ಕಿವಿಯ ಮೇಲೆ ಹೂವುಗಳನ್ನು ಇಟ್ಟುಕೊಂಡು ಬಿಜೆಪಿ ಜನರನ್ನು ಫೂಲ್ ಮಾಡುತ್ತಿದೆ ಸದಸನಲ್ಲಿ ಟೀಕಿಸಿದ್ದು, ವಿಭಿನ್ನ ರೀತಿಯಲ್ಲಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+