ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 08: ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅನ್ನು ಇಂದು ಸದನದಲ್ಲಿ ಮಂಡಿಸಿದ್ದಾರೆ. ನಿರೀಕ್ಷೆಯಂತೆಯೇ ಸಾಲಮನ್ನಾ ಯೋಜನೆಗಾಗಿ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು ಅನುದಾನ ಮೀಸಲಿಟ್ಟಿದ್ದಾರೆ.

ಸಹಕಾರ ಬ್ಯಾಂಕುಗಳಿಲ್ಲಿನ ಸಾಲಮನ್ನಾಕ್ಕೆ ಈ ಆರ್ಥಿಕ ವರ್ಷದಲ್ಲಿ (2019-20) 6150 ಕೋಟಿ ಹಣ ಮೀಸಲಿಡಲಾಗಿದೆ. ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಪ್ರಕ್ರಿಯೆ ಇದೇ ವರ್ಷ ಜೂನ್‌ನಲ್ಲಿ ಮುಗಿಯಲಿದೆ ಎಂದು ಕುಮಾರಸ್ವಾಮಿ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಖಾಸಗಿ ಬ್ಯಾಂಕುಗಳಲ್ಲಿನ ಕೃಷಿ ಸಾಲಮನ್ನಾಕ್ಕೂ ಹಣ ಮೀಸಲಿಡಲಾಗಿದ್ದು, ಈ ಆರ್ಥಿಕ ವರ್ಷದಲ್ಲಿ 6500 ಕೋಟಿ ಹಣವನ್ನು ಖಾಸಗಿ ಬ್ಯಾಂಕಿನ ಕೃಷಿ ಸಾಲಮನ್ನಾಕ್ಕಾಗಿ ಮೀಸಲಿಡಲಾಗಿದೆ. ಖಾಸಗಿ ಬ್ಯಾಂಕಿನಲ್ಲಿನ ಕೃಷಿ ಸಾಲಮನ್ನಾ ಪ್ರಕ್ರಿಯೆಯು 2019-20 ಕ್ಕೆ ಮುಗಿಯುತ್ತದೆ ಎಂದು ಕುಮಾರಸ್ವಾಮಿ ಬಜೆಟ್‌ನಲ್ಲಿ ಹೇಳಿದ್ದಾರೆ.

Karnataka budget 2019: 12650 crore grant for famers loan waive off

ಕುಮಾರಸ್ವಾಮಿ ಬಜೆಟ್‌: ಶಿಕ್ಷಣ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?ಕುಮಾರಸ್ವಾಮಿ ಬಜೆಟ್‌: ಶಿಕ್ಷಣ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ

ಈ ವರೆಗೆ ಒಟ್ಟು 23,150 ಕೋಟಿ ಮೀಸಲು

ಈ ವರೆಗೆ ಒಟ್ಟು 23,150 ಕೋಟಿ ಮೀಸಲು

ಅಲ್ಲಿಗೆ ಈ ಆರ್ಥಿಕ ವರ್ಷದಲ್ಲಿ ಕುಮಾರಸ್ವಾಮಿ ಅವರು ರೈತರ ಬೆಳೆ ಸಾಲಕ್ಕಾಗಿ 12650 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದಂತಾಗಿದೆ. ಕಳೆದ ವರ್ಷ 10500 ಕೋಟಿ ಹಣವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಅಲ್ಲಿಗೆ ಎರಡು ವರ್ಷದಲ್ಲಿ ಸಾಲಮನ್ನಾಕ್ಕಾಗಿ ಒಟ್ಟು 23,150 ಕೋಟಿ ಹಣವನ್ನು ಸಾಲಮನ್ನಾಕ್ಕಾಗಿ ನೀಡಲಾಗಿದೆ.

ಸಾಲಮನ್ನಾ ಪ್ರಕ್ರಿಯೆ ಬಗ್ಗೆ ಸಿಎಂ ಮಾಹಿತಿ

ಸಾಲಮನ್ನಾ ಪ್ರಕ್ರಿಯೆ ಬಗ್ಗೆ ಸಿಎಂ ಮಾಹಿತಿ

ಸಾಲಮನ್ನಾ ಯೋಜನೆ ಬಗ್ಗೆ ಹೆಚ್ಚು ಒತ್ತು ನೀಡಿ ಮಾತನಾಡಿದ ಕುಮಾರಸ್ವಾಮಿ, ಯೋಜನೆ ಅನುಷ್ಠಾನದಲ್ಲಿ ಸರ್ಕಾರವು ಎದುರಿಸಿದ ತೊಡರುಗಳು, ತಂತ್ರಜ್ಞಾನದ ಸಹಾಯದೊಂದಿಗೆ ಅದನ್ನು ನಿವಾರಿಸಿದ ಬಗ್ಗೆ ವಿವರಿಸಿದರು. ರೈತರ ಸಾಲಮನ್ನಾಕ್ಕಾಗಿ ಆಯೋಗ ಸ್ಥಾಪನೆ ಮಾಡುವುದಾಗಿಯೂ ಕುಮಾರಸ್ವಾಮಿ ಹೇಳಿದ್ದಾರೆ.

ಕೃಷಿ ಸಂಬಂಧಿ ಯೋಜನೆಗೆ 46,853 ಕೋಟಿ

ಕೃಷಿ ಸಂಬಂಧಿ ಯೋಜನೆಗೆ 46,853 ಕೋಟಿ

ಸಾಲಮನ್ನಾ ಹೊರತು ಪಡಿಸಿ ಕೃಷಿ ಮತ್ತು ಅದರ ಸಂಬಂಧಿತ ಯೋಜನೆಗಳಿಗೆ ಒಟ್ಟು 46,853 ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರವನ್ನು ಟೀಕಿಸಿದ ಕುಮಾರಸ್ವಾಮಿ

ಕೇಂದ್ರವನ್ನು ಟೀಕಿಸಿದ ಕುಮಾರಸ್ವಾಮಿ

ರಾಜ್ಯದಲ್ಲಿನ ಬರದ ಬಗ್ಗೆಯೂ ಉಲ್ಲೇಖಿಸಿದ ಕುಮಾರಸ್ವಾಮಿ, ನಾವು ಕೇಂದ್ರವನ್ನು 2500 ಕೋಟಿ ಬರ ನೆರವು ಕೇಳಿದ್ದೆವು, ಆದರೆ ಕೇಂದ್ರವು ಕೇವಲ 900 ಕೋಟಿ ನೀಡಿದೆ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದರು.

English summary
Kumaraswamy today presented Karnataka budget 2019. He announce 12,650 crore rupees grant for farmers loan waive off for this fiscal year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X