ಕುಮಾರಸ್ವಾಮಿ ಸರ್ಕಾರ 100 ದಿನ ಸಂಭ್ರಮಕ್ಕೆ ಬಿಜೆಪಿ 'ಕುಟುಕು ಕವನ'
ಬೆಂಗಳೂರು, ಆಗಸ್ಟ್ 30: ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸಿದ್ದಕ್ಕೆ ಪ್ರತಿಪಕ್ಷ ಹನಿಗನವದ ಮೂಲಕ ಸರ್ಕಾರವನ್ನು ಕುಟುಕಿದೆ.
ಕುಮಾರಸ್ವಾಮಿ ಅವರ ಸರ್ಕಾರದ ನೂರನೇ ದಿನದ ಸಂಭ್ರಮಕ್ಕೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ 'ಅಪವಿತ್ರ ಮೈತ್ರಿಯಲ್ಲಿನ ತೀವ್ರ ಭಿನ್ನಮತದ ನಡುವೆಯೂ ನಿಮ್ಮ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ಅಭಿನಂದನೆಗಳು' ಎಂದು ಕಾಲೆಳೆದಿದೆ.

ಸರ್ಕಾರದ ಸ್ಥಿತಿಯ ಬಗ್ಗೆ ಮೂರು ಸಾಲಿನ ಹನಿಗವನವನ್ನೂ ಬರೆದಿರುವ ಬಿಜೆಪಿ
'ದಿನಗಳು ನೂರು,
ಹೋದಲೆಲ್ಲ ಕಣ್ಣೀರು,
ಅಭಿವೃದ್ಧಿಗೆ ಎಳ್ಳುನೀರು! ಎಂದು ಮೂರು ಸಾಲಿನಲ್ಲೇ ಸರ್ಕಾರವನ್ನು ಕುಟುಕಿದೆ.
ದಿನಗಳು ನೂರು,
— BJP Karnataka (@BJP4Karnataka) August 30, 2018
ಹೋದಲೆಲ್ಲ ಕಣ್ಣೀರು,
ಅಭಿವೃದ್ಧಿಗೆ ಎಳ್ಳುನೀರು!
ಮಾನ್ಯ ಕುಮಾರಸ್ವಾಮಿಯವರೇ,
ಅಪವಿತ್ರ ಮೈತ್ರಿಯಲ್ಲಿನ ತೀವ್ರ ಭಿನ್ನಮತದ ನಡುವೆಯೂ ನಿಮ್ಮ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ಅಭಿನಂದನೆಗಳು. ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ರಾಜ್ಯದ ಅಭಿವೃದ್ಧಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇವೆ.
ನೂರು ದಿನಗಳಾದರೂ ಸರ್ಕಾರ ಇನ್ನೂ ಕಾರ್ಯಪ್ರವೃತ್ತವೇ ಆಗಿಲ್ಲ ಎಂದು ದೂರಿರುವ ಬಿಜೆಪಿ 'ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ರಾಜ್ಯದ ಅಭಿವೃದ್ಧಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇವೆ' ಎಂದಿದೆ.












Click it and Unblock the Notifications