2018ರ ಚುನಾವಣೆಗೆ ಯಡಿಯೂರಪ್ಪ ತಂಡ ಸಿದ್ಧ

Posted By:
Subscribe to Oneindia Kannada

ಬೆಂಗಳೂರು, ಮೇ 26 : 2018ರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರದ ಗದ್ದುಗೆ ಏರುವ ಗುರಿ ಹೊಂದಿರುವ ಕರ್ನಾಟಕ ಬಿಜೆಪಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದೆ. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೊತೆ ಚರ್ಚಿಸಿ ರಾಜ್ಯದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಪಿ.ಅರುಣ್ ಕುಮಾರ್ ಅವರನ್ನು ನೇಮಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ನೇಮಕವಾಗಿದ್ದಾರೆ. ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. [150 ಸ್ಥಾನ ಪಡೆಯಲು ಯಡಿಯೂರಪ್ಪ ತಂತ್ರವೇನು?]

yeddyurappa

ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ 7 ಒಕ್ಕಲಿಗ, 5 ಲಿಂಗಾಯಿತ, 5 ಬ್ರಾಹ್ಮಣ, 6 ಎಸ್‌ಸಿ, 2 ಎಸ್‌ಟಿ, 2 ಕುರುಬ, 1 ಮುಸ್ಲಿಂ, 11 ಮಂದಿ ಹಿಂದುಳಿದ ವರ್ಗದ ನಾಯಕರಿಗೆ ಅವಕಾಶ ನೀಡಲಾಗಿದೆ. [ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಅರುಣ್ ಕುಮಾರ್]

ರಾಜ್ಯ ಪ್ರಧಾನ ಕಾರ್ಯದರ್ಶಿಗಳು

* ಅರವಿಂದ ಲಿಂಬಾವಳಿ
* ಶೋಭಾ ಕರಂದ್ಲಾಜೆ
* ಸಿ.ಟಿ.ರವಿ
* ಎನ್.ರವಿಕುಮಾರ್
* ಅರುಣ್ ಕುಮಾರ್ (ಸಂಘಟನೆ)

ಉಪಾಧ್ಯಕ್ಷರು : ಗೋವಿಂದ ಕಾರಜೋಳ, ಶ್ರೀರಾಮುಲು, ನಾಗರತ್ನ ಕುಪ್ಪಿ, ಬಾಬೂರಾವ್ ಚೌವ್ಹಾಣ್, ಭಾನುಪ್ರಕಾಶ್, ಎಂ.ನಾಗರಾಜು, ಬಿ.ಸೋಮಶೇಖರ್, ನಿರ್ಮಲ ಕುಮಾರ್ ಸುರಾನಾ, ಪಿ.ಸಿ.ಮೋಹನ್, ಅನಂತ ಕುಮಾರ ಹಗ್ಡೆ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. [ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]

ಕಾರ್ಯದರ್ಶಿಗಳು
* ಶಂಕರಪ್ಪ
* ಜಗದೀಶ್ ಹಿರೇಮನಿ
* ಕರಡಿ ಸಂಗಣ್ಣ
* ತೇಜಸ್ವಿನಿ
* ಸುರೇಶ್ ಅಂಗಡಿ
* ಸುರೇಶ್ ಗೌಡ
* ಪೂರ್ಣಿಮಾ ಶ್ರೀನಿವಾಸ್
* ತಿಂಗಲೆ ವಿಕ್ರಮಾರ್ಜುನ ಹೆಗಡೆ
* ಮುನಿರಾಜು ಗೌಡ
* ಎಂ.ಜಯದೇವ

ಮಾಧ್ಯಮ ವಕ್ತಾರರು : ಪಕ್ಷದ ಮಾಧ್ಯಮ ವಕ್ತಾರರಾಗಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ಗೊ.ಮಧುಸೂಧನ್ ನೇಮಕಗೊಂಡಿದ್ದಾರೆ. ಮಾಧ್ಯಮ ಸಂಚಾಲಕರಾಗಿ ಶಾಂತರಾಮ್ ಅವರು ನೇಮಕವಾಗಿದ್ದಾರೆ. ಮಾಧ್ಯಮ ಸಹ ವಕ್ತಾರರಾಗಿ ಮುಂಜುಳಾ, ಭಾರತಿ ಶೆಟ್ಟಿ, ಮಾಳವಿಕ ಅವಿನಾಶ್, ಮೋಹನ್ ಲಿಂಬಿಕಾಯಿ ಅವರನ್ನು ನೇಮಕ ಮಾಡಲಾಗಿದೆ.

ವಿವಿಧ ಮೋರ್ಚಾಗಳ ಅಧ್ಯಕ್ಷರು
* ಮಹಿಳಾ ಮೋರ್ಚಾ - ಭಾರತಿ ಮುರುಗನ್
* ಸ್ಲಂ ಮೋರ್ಚಾ - ಜಯಪ್ರಕಾಶ ಅಂಬಾರ್ಕರ್
* ಅಲ್ಪ ಸಂಖ್ಯಾತ ಮೋರ್ಚಾ - ಬಿ.ಜಿ.ಪುಟ್ಟಸ್ವಾಮಿ
* ಎಸ್ಸಿ ಮೋರ್ಚಾ - ಡಿ.ಎಸ್.ವೀರಯ್ಯ
* ಎಸ್‌.ಟಿ.ಮೋರ್ಚಾ - ರಾಜುಗೌಡ ನಾಯ್ಕ್
* ರೈತ ಮೋರ್ಚಾ - ವಿಜಯ ಶಂಕರ್
* ಯುವ ಮೋರ್ಚಾ - ಪ್ರತಾಪ್ ಸಿಂಹ
* ಒಬಿಸಿ ಮೋರ್ಚಾ - ಪುಟ್ಟಸ್ವಾಮಿ

bjp

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP president B.S.Yeddyurappa named his team of office-bearers. On May 26, 2016 Yeddyurappa announced the new team of vice presidents, general secretaries and spokespersons. Here are the list.
Please Wait while comments are loading...