‘ರಾಜ್ಯದ ಕಾಂಗ್ರೆಸ್ ನಾಯಕರು ಪ್ರಸ್ತುತ ಈ ಕೆಳಗಿನ ಚಿಂತೆಗಳಲ್ಲಿ ಮುಳುಗಿದ್ದಾರೆ...’
ವಾರ್ ಅಂದ್ರೆ ವಾರ್, ಅದು ಪಕ್ಕಾ ವಾರ್! ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿ ನೋಡಿ ಈ ಮಾತನ್ನ ಹೇಳಲೇಬೇಕು. ಯಾಕಂದ್ರೆ ಇಬ್ಬರ ನಡುವೆ ಫೈಟ್ ಜೋರಾಗಿದೆ. ಅದ್ರಲ್ಲೂ ಒಬ್ಬರ ಮೇಲೆ ಮತ್ತೊಬ್ಬರು ಗಂಭೀರ ಆರೋಪಗಳ ಹೊರಿಸಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕಾಂಗ್ರೆಸ್ ಒಳಗೆ ಸಿಎಂ ಕುರ್ಚಿ ವಿಚಾರಕ್ಕೆ ಕಿಚ್ಚು ಹೊತ್ತಿದ್ದು, ಬಿಜೆಪಿ ಇದೀಗ ಆ ಕಿಚ್ಚಿನ ಜೊತೆಗೆ ಹೊಸ ರಣತಂತ್ರ ರೂಪಿಸಿದಂತೆ ಕಾಣುತ್ತಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಸಿಎಂ ಯಾರಾಗ್ತಾರೆ? ಅನ್ನೋ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಆಗಿ ಆಯ್ಕೆಯಾಗಿದ್ದರೂ ಈ ಬಗ್ಗೆ ಚರ್ಚೆ ನಿಂತಿಲ್ಲ. ಅದ್ರಲ್ಲೂ ಸಿಎಂ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾತುಗಳ ನಡುವೆ, ಕಮಲ ಪಾಳಯ ಹೊಸ ಅಸ್ತ್ರ ಪ್ರಯೋಗ ಮಾಡಿದೆ.

'ರಾಜ್ಯದ ಕಾಂಗ್ರೆಸ್ ನಾಯಕರು ಈ ಕೆಳಗಿನ...'
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ರಾಜ್ಯದ @INCKarnataka ನಾಯಕರು ಪ್ರಸ್ತುತ ಈ ಕೆಳಗಿನ ಚಿಂತೆಗಳಲ್ಲಿ ಮುಳುಗಿದ್ದಾರೆ. ▪️ಸಿಎಂ ಸಿದ್ದರಾಮಯ್ಯ - ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಚಿಂತೆ. ▪️ ಡಿಸಿಎಂ ಡಿ. ಕೆ. ಶಿವಕುಮಾರ್ - ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಹೇಗೆ ಎಂಬ ಚಿಂತೆ. ▪️ ಪ್ರಿಯಾಂಕ್ ಖರ್ಗೆ - ಸಿದ್ದರಾಮಯ್ಯರವರ ಕೆ.ಇ.ಎ. ಪರೀಕ್ಷಾ ಅಕ್ರಮವನ್ನು ಸಿ.ಬಿ.ಐ. ಗೆ ವಹಿಸಿದರೆ ಏನು ಮಾಡುವುದೆಂಬ ಚಿಂತೆ. ▪️ಡಾ|| ಪರಮೇಶ್ವರ್ - ತಮ್ಮ ಸಿಎಂ ಆಸೆಗೆ ಡಿ. ಕೆ. ಶಿವಕುಮಾರ್ ತಣ್ಣೀರೆರಚಿದರೆ ಏನು ಮಾಡುವುದು ಎಂಬ ಚಿಂತೆ. ಕಾಂಗ್ರೆಸ್ ನಾಯಕರೆಲ್ಲರೂ ತಮ್ಮ ಸ್ವಾರ್ಥದ ರಾಜಕಾರಣದ ಬಗ್ಗೆ ಚಿಂತಿಸುತ್ತಿದ್ದಾರೆ ಹೊರತು ಯಾರಿಗೂ ರಾಜ್ಯದ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ!!' ಎಂದು ಆರೋಪ ಮಾಡಿದೆ ಬಿಜೆಪಿ.
ರಾಜ್ಯದ @INCKarnataka ನಾಯಕರು ಪ್ರಸ್ತುತ ಈ ಕೆಳಗಿನ ಚಿಂತೆಗಳಲ್ಲಿ ಮುಳುಗಿದ್ದಾರೆ.
— BJP Karnataka (@BJP4Karnataka) November 4, 2023
▪️ಸಿಎಂ ಸಿದ್ದರಾಮಯ್ಯ - ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಚಿಂತೆ.
▪️ ಡಿಸಿಎಂ ಡಿ. ಕೆ. ಶಿವಕುಮಾರ್ - ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಹೇಗೆ ಎಂಬ ಚಿಂತೆ.
▪️ ಪ್ರಿಯಾಂಕ್ ಖರ್ಗೆ - ಸಿದ್ದರಾಮಯ್ಯರವರ ಕೆ.ಇ.ಎ. ಪರೀಕ್ಷಾ…
'₹508 ಕೋಟಿಯ ಭರ್ಜರಿ ಲಂಚ ಪಡೆದು...'
ಹಾಗೇ ಮತ್ತೊಂದು ಟ್ವೀಟ್ ಮಾಡಿದ ಬಿಜೆಪಿ, '₹508 ಕೋಟಿಯ ಭರ್ಜರಿ ಲಂಚ ಪಡೆದು ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಎಷ್ಟು ಕಳುಹಿಸಲಾಗಿತ್ತು ಎಂಬುದನ್ನೂ @INCKarnataka ಉತ್ತರಿಸಬೇಕು. ತೆಲಂಗಾಣದಲ್ಲೂ ಚುನಾವಣೆ ಘೋಷಣೆಯ ಬಳಿಕ @DKShivakumar ಆಪ್ತರ ಮನೆಯಲ್ಲೂ ಸೇರಿ ಈಗಾಗಲೇ ₹40 ಕೋಟಿಗೂ ಅಧಿಕ ಜಪ್ತಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳ ಬಳಿ ಬಚ್ಚಿಟ್ಟಿದ್ದ ನೂರು ಕೋಟಿಗೂ ಅಧಿಕ, ಜತೆಗೆ ಪಂಚರಾಜ್ಯಗಳಿಗೆ ಕಾಂಗ್ರೆಸ್ ಇನ್ನೆಷ್ಟು ಕಳಿಸಿದೆ ಎಂಬುದನ್ನು ಸಿಎಂ ಮತ್ತು ಸಿಎಂ ಆಗುವ ಅಭಿಲಾಷೆಯಲ್ಲಿರುವ ಎಲ್ಲರೂ ಮೊದಲು ಉತ್ತರಿಸಬೇಕು.' ಎಂದು ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಬಿಜೆಪಿ ಸವಾಲು ಹಾಕಿದೆ.
₹508 ಕೋಟಿಯ ಭರ್ಜರಿ ಲಂಚ ಪಡೆದು ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಎಷ್ಟು ಕಳುಹಿಸಲಾಗಿತ್ತು ಎಂಬುದನ್ನೂ @INCKarnataka ಉತ್ತರಿಸಬೇಕು.
— BJP Karnataka (@BJP4Karnataka) November 4, 2023
ತೆಲಂಗಾಣದಲ್ಲೂ ಚುನಾವಣೆ ಘೋಷಣೆಯ ಬಳಿಕ @DKShivakumar ಆಪ್ತರ ಮನೆಯಲ್ಲೂ ಸೇರಿ ಈಗಾಗಲೇ ₹40 ಕೋಟಿಗೂ ಅಧಿಕ ಜಪ್ತಿ… pic.twitter.com/DZR4LcUtjn












Click it and Unblock the Notifications