‘ಹಲೋ ಕಾಂಗ್ರೆಸ್...’ ಹಿಂಗೆ ಹೇಳಿದ್ದು ಯಾರು?

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿದ್ದು, ಒಂದು ಕಡೆ ಬಿಜೆಪಿ & ಇನ್ನೊಂದು ಕಡೆ ಕಾಂಗ್ರೆಸ್ ನೇರ ಯುದ್ಧಕ್ಕೆ ಬಿದ್ದಿವೆ. ಯಾಕಂದ್ರೆ ಈಗಾಗಲೇ ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಆಗಿದೆ. ಹೀಗಿದ್ದಾಗ ಕಾಂಗ್ರೆಸ್ ನಾಯಕರಿಗೆ ಸೋಲಿನ ರುಚಿ ತೋರಿಸಲು ಬಿಜೆಪಿಯ ರಣತಂತ್ರ ಜೋರಾಗಿದೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾ ಯುದ್ಧ ಜೋರು ಜೋರಾಗುತ್ತಿದೆ. ಅದರಲ್ಲೂ ಇದೀಗ 'ಹಲೋ ಕಾಂಗ್ರೆಸ್...' ಅಂತಾ ಕರೆದಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ವಿರುದ್ಧ ಹೇಳಿರುವುದು ಏನು ಗೊತ್ತೆ?

ಅಂದಹಾಗೆ ಮೊದಲಿಗೆ ಕಾಂಗ್ರೆಸ್ ಒಂದು ಟ್ವೀಟ್ ಮಾಡಿತ್ತು, 'ಈ @Tejasvi_Surya ಎಂಬ ಎಳೆ ಕೂಸಿನಂತಹ ಸಂಸದ • ಕೋವಿಡ್ ಬಂದಾಗ ಫುಟ್ಬಾಲ್ ಆಡೋಕೆ ಹೋಗಿದ್ದರು! • ನೆರೆ ಬಂದಾಗ ದೋಸೆ ತಿನ್ನೋಕೆ ಹೋಗಿದ್ದರು! • ಕನ್ನಡಿಗರಿಗೆ ಅನ್ಯಾಯವಾದಾಗ ಎಮರ್ಜೆನ್ಸಿ ಎಕ್ಸಿಟ್ ನಲ್ಲಿ ಹಾರೋಕೆ ಹೋಗಿದ್ದರು! • ಕನ್ನಡಿಗ ಯುವಕರು ಉದ್ಯೋಗ ಕೇಳುತ್ತಿದ್ದಾಗ ನಾಪತ್ತೆಯಾಗಿದ್ದರು! ಆದರೆ ಈಗ ಬೀದಿ ಜಗಳದ ವಿಷಯಕ್ಕೆ ಮಾತ್ರ ಓಡೋಡಿ ಬಂದಿದ್ದಾರೆ! ಸಂಸದನಾಗಿ ತನ್ನ ಹೊಣೆಗಾರಿಕೆ ಮರೆತು ಮಕ್ಕಳಾಟ ಆಡುವವರನ್ನು ಈ ಬಾರಿ ಜನತೆ ತಿರಸ್ಕರಿಸಿ ಮನೆಗೆ ಕಳಿಸುವುದು ನಿಶ್ಚಿತ.' ಎಂದು ಬಿಜೆಪಿ ನಾಯಕರ ಕಾಲೆಳೆದಿತ್ತು ಕಾಂಗ್ರೆಸ್. ಈ ಬಗ್ಗೆ ಇದೀಗ ಬಿಜೆಪಿ ಕೂಡ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.

Karnataka BJP Challenges To Congress Over The MP Tejasvi Surya Matter

'ಹಲೋ ಕಾಂಗ್ರೆಸ್...'

ಬಗ್ಗೆ ಇದೀಗ ಬಿಜೆಪಿ ಟ್ವೀಟ್ ಮಾಡಿದ್ದು, 'ಹಲೋ @INCKarnataka, ದೇಶಕಟ್ಟುವ ಸಂಸದರನ್ನು ಪ್ರಶ್ನಿಸುವ ನೀವು, ದೇಶ ಒಡೆಯುವ ತುಕ್ಡೆ ಗ್ಯಾಂಗ್ ಮನಸ್ಥಿತಿ ಇರುವ @DKSureshINC ಅವರನ್ನು ಪ್ರಶ್ನಿಸುವ ಧೈರ್ಯ ಯಾವಾಗ ಮಾಡುತ್ತೀರಿ? ನಮ್ಮ ಯುವ ಸಂಸದರಾದ @Tejasvi_Surya ಅವರ ಸಾಧನೆಗಳು ನಿಮ್ಮ ಪಾಲಿನ ಚಿರ ಯುವಕ @RahulGandhi ಯವರ ವಯಸ್ಸಿಗಿಂತಲೂ ಹೆಚ್ಚು.' ಎಂದು ತಿರುಗೇಟು ನೀಡಿದೆ. ಹಾಗೇ ಇದರ ಜೊತೆಗೆ ಸಾಲು ಸಾಲು ಪ್ರಶ್ನೆಗಳನ್ನು ಕೂಡ ಇದೀಗ ಕರ್ನಾಟಕ ಕಾಂಗ್ರೆಸ್‌ಗೆ ಬಿಜೆಪಿ ಕೇಳಿದೆ.

'➡️ ಕೋವಿಡ್‌ ಸಮಯದಲ್ಲಿ ಬೆಂಗಳೂರು ಜನರ ಸೇವೆ ಮಾಡುವಾಗ ನೀವು ಎಲ್ಲಿ ಅಡಗಿದ್ದಿರಿ? ➡️ ವೀಸಾಗಾಗಿ ಚೆನ್ನೈಗೆ ಹೋಗಬೇಕಾದ ಕನ್ನಡಿಗರ ಸಂಕಷ್ಟವನ್ನು ಕೊನೆಗಾಣಿಸಿ, ನಮ್ಮ ಸಂಸದರುಗಳು ಬೆಂಗಳೂರಿನಲ್ಲಿಯೇ ಅಮೇರಿಕಾ ರಾಯಭಾರಿ ಕಚೇರಿ ತರಲು ಶ್ರಮಿಸಿದರು. ಈ ವಿಚಾರದಲ್ಲಿ ನೀವೇಕೆ ಪ್ರಯತ್ನಿಸಲಿಲ್ಲ..? ➡️ ಐ.ಬಿ.ಪಿ.ಎಸ್‌ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಬಹುದು ಎಂಬ ಆದೇಶವನ್ನು ಹೊರಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು ಸಹ ನಮ್ಮ ಸಂಸದರುಗಳೇ. ಕಾಂಗ್ರೆಸ್ಸಿಗರೇ, ನೀವೇಕೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಿಲ್ಲ..? ➡️ ಬೆಂಗಳೂರಿಗೆ ಉಪನಗರ ರೈಲು ಯೋಜನೆ, ಮೆಟ್ರೋ ತರುವಲ್ಲಿ ಸಹ ನಮ್ಮ ಹೆಮ್ಮೆಯ ಸಂಸದರ ಪಾತ್ರ ಬಹಳಷ್ಟಿದೆ. ಇದಕ್ಕೆ ನಿಮ್ಮ ಕೊಡುಗೆ ಏನು?' ಎಂದು ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದೆ ಬಿಜೆಪಿ.

Karnataka BJP Challenges To Congress Over The MP Tejasvi Surya Matter

ಅಂತಿಮವಾಗಿ 'ನಮ್ಮ ಸಂಸದರು ತಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿ ಮತ್ತೊಮ್ಮೆ ಜನರ ಬಳಿ ಆತ್ಮವಿಶ್ವಾಸದಿಂದ ಮತ ಯಾಚನೆ ಮಾಡುತ್ತಿದ್ದಾರೆ. ಆದರೆ ನಿಮ್ಮ ಅವಸ್ಥೆ ನೋಡಿ, ನಿಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ. ಇದಕ್ಕಿಂತ ದುರಂತ ಇನ್ನೊಂದಿದೆಯೇ?' ಎಂದು ಪ್ರಶ್ನೆ ಮಾಡಿದೆ ಬಿಜೆಪಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+