ಬಿಟ್ ಕಾಯಿನ್ ಹಗರಣಕ್ಕೆ ಮರುಜೀವ..!ಪೊಲೀಸ್, ರಾಜಕಾರಣಗಳ ಮಕ್ಕಳಿಂದಲೇ ವ್ಯವಹಾರ..!? ಶುರುವಾಗಿದೆ ನಡುಕ..!

ಬೆಂಗಳೂರು,ಜುಲೈ 05: ಮತ್ತೆ ಬಿಟ್ ಕಾಯಿನ್ ಸದ್ದು ಜೋರಾಗತೊಡಗಿದೆ. ಈ ಸದ್ದು ಕೆಲವ್ರಿಗೆ ಎದುರಿಸುರು ಬಿಡುವಂತೆ ಮಾಡ್ತಿದೆ. ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ರಾಜಕೀಯ ಬಿರುಗಾಳಿ ಸೃಷ್ಟಿಸಿದ್ದ ಬಹುಕೋಟಿ ಬಿಟ್‌ ಕಾಯಿನ್‌ ಹಗರಣದ ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೋಟಿ ಕೋಟಿ ರಹಸ್ಯವನ್ನ ಭೇದಿಸಿ, ವ್ಯವಹಾರದಲ್ಲಿ ಭಾಗಿಯಾದವ್ರ ಮುಖವಾಡ ಕಳಚಲು ಪ್ಲ್ಯಾನ್ ಮಾಡ್ತಿದೆ.

ಹೌದು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜಕೀಯವಾಗಿ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಬಿಟ್‌ ಕಾಯಿನ್‌ ಹಗರಣದ ತನಿಖೆ ಆರಂಭಿಸಿರುವ ಎಸ್‌ಐಟಿ ಗೆ ಸವಾಲಾಗಿದ್ದು, ಈ ಪ್ರಕರಣದ ಮುಖ್ಯ ಆರೋಪಿ ಹ್ಯಾಕರ್‌ ಶ್ರೀಕಿ ವಿಚಾರಣೆ ನಡೆಸಿದ್ದ 'ಬಿಟ್‌ ಫಿನಿಕ್ಸ್‌ 'ಜಾಲತಾಣ ಹ್ಯಾಕ್‌ ಮಾಡಿ 5000 ಸಾವಿರ ಬಿಟ್‌ ಕಾಯಿನ್‌ ದೋಚಿದ್ದ ಅಂಶವನ್ನು ದೋಷಾರೋಪ ಪಟ್ಟಿಯಲ್ಲಿ ಸಿಸಿಬಿ ಪೊಲೀಸರು ಉಲ್ಲೇಖಿಸಿದ್ದರು.

Karnataka Bitcoin Scam: Suspicions on Police, Politicians Children Involved in Scam: Create Panic

ಇನ್ನೂ ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ಹಲವು ರಾಜಕೀಯ ನಾಯಕರ ಹೆಸರುಗಳು ಕೇಳಿಬಂದಿದ್ದು, ಈ ಹಿಂದೆ ಆಡಳಿದಲ್ಲಿದ್ದ ಬಿಜೆಪಿ ನಾಯಕರ ವಿರುದ್ದವಾಗಿ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದ್ದು, ತನಿಖೆಗೆ ಪಟ್ಟು ಹಿಡಿದಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹ್ಯಾಕರ್‌ ಶ್ರೀಕಿಯನ್ನು ಬಳಸಿಕೊಂಡು ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳು, ರಾಜಕಾರಣಿಗಳು ಹಾಗೂ ಹಿರಿಯ ಪೋಲಿಸ್‌ ಅಧಿಕಾರಿಗಳು ಬಿಟ್‌ ಕಾಯಿನ್‌ಗಳನ್ನು ಪಡೆದಿರುವ ಅನುಮಾನಗಳಿದ್ದು. ಈ ಎಸ್‌ಐಟಿ ತನಿಖೆಯಿಂದ ಇನ್ನಷ್ಟು ಕುತೂಹಲ ಹೆಚ್ಚಲು ಕಾರಣವಾಗಿದೆ.

ಇನ್ನೂ ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ತನಿಖಾಧಿಕಾರಿಗಳನ್ನ ನೇಮಕ ಮಾಡಿದ್ದು, ಹಲವು ನಾಯಕರಿಗೆ ನಡುಕ ಶುರುವಾಗಿದೆ. ಇತ್ತ ದೊಡ್ಡ ನಾಯಕರ ಪ್ರಭಾವದಿಂದಾಗಿ ಹಿಂದಿನ ಸರ್ಕಾರದಲ್ಲಿ ಸರಿಯಾಗಿ ತನಿಖೆ ನಡೆದಿಲ್ಲ ಎಂದು ಹೇಳಲಾಗಿದ್ದು, ತನಿಖಾಧಿಕಾರಿಯಾಗಿ ಡಿವೈಎಸ್ಪಿ ಶ್ರೀನಿವಾಸ್‌ ನೇಮಕಗೊಂಡಿದ್ದಾರೆ. ಬಿಟ್‌ ಕಾಯಿನ್‌ ಹಗರಣದ ಕುರಿತು ತನಿಖಾ ತಂಡ ಈಗಾಗಲೇ ಪ್ರಕರಣ ಕುರಿತ ಸಂಪೂರ್ಣ ದಾಖಲೆ ಒದಗಿಸುವಂತೆ ಸಿಸಿಬಿಗೆ ಕೋರಿದೆ.

ಇನ್ನೂ ಸಿಸಿಬಿಯಿಂದ ದಾಖಲೆ ಬಂದ ಬಳಿಕ ಪ್ರಮುಖ ಆರೋಪಿ ಶ್ರೀಕಿ, ಸಿಸಿಬಿ ತನಿಖಾಧಿಕಾರಿಗಳ ಮುಂದೆ ನೀಡಿರುವ ಸ್ವ ಇಚ್ಛಾ ಹೇಳಿಕೆ ಸೇರಿ ಇತರೆ ದಾಖಲೆಗಳನ್ನು ಪರಿಶೀಲಿಸಲಿದೆ. ಈ ಎಲ್ಲಾ ಪರಿಶೀಲನೆಯ ಬಳಿಕ ಯಾವ ನಿರ್ದಿಷ್ಟ ಅಂಶದ ಮೇರೆಗೆ ತನಿಖೆ ನಡೆಯಬೇಕು ಎಂಬುದರತ್ತ ಗಮನಹರಿಸಲಿದೆ ಎಂದು ಮೂಲಗಳು ಹೇಳಿವೆ

5000 ಸಾವಿರ ಬಿಟ್‌ ಕಾಯಿನ್‌ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 1,200 ಕೋಟಿ ರೂ.ಗೆ ಸಮ. ಆದರೆ, ಈ ಬಿಟ್‌ ಕಾಯಿನ್‌ಗಳು ಏನಾದವು? ಯಾರಿಗೆಲ್ಲಾ ವರ್ಗಾವಣೆಗೊಂಡಿದ್ದವು ಎಂಬುದರ ಬಗ್ಗೆ ಸಂಫೂರ್ಣ ತನಿಖೆಯನ್ನು ಸಿಸಿಬಿ ನಡೆಸಿರಲಿಲ್ಲ. ಹೀಗಾಗಿ, 5000 ಬಿಟ್‌ ಕಾಯಿನ್‌ಗಳ ರಹಸ್ಯ ಭೇದಿಸಿ ವ್ಯವಹಾರದಲ್ಲಿ ಭಾಗಿಯಾದವ್ರ ಮುಖವಾಡ ಕಳಚಲು ಎಸ್‌ಐಟಿಯ ಮೊದಲ ಟಾಸ್ಕ್‌ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+