ಕರ್ನಾಟಕ ಬಂದ್; ಹಠಮಾರಿ ಸಿಎಂ, ನಮ್ಮ ನಡುವಿನ ಫೈಟ್

ಬೆಂಗಳೂರು, ಡಿಸೆಂಬರ್ 3; "ಡಿಸೆಂಬರ್ 5ರ ಕರ್ನಾಟಕ ಬಂದ್‌ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ನಮ್ಮ ನಡುವಿನ ಫೈಟ್" ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಲು ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಡಿಸೆಂಬರ್ 5ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಈಗಾಗಲೇ ಬಂದ್‌ಗೆ ಸಿದ್ಧತೆ ನಡೆಸುತ್ತಿದೆ.

ಬಂದ್ ಕುರಿತು ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, "ಬಹಳ ಗಂಭೀರವಾದ ವಿಚಾರದಲ್ಲಿ ನಾವು ಕರ್ನಾಟಕ ಬಂದ್ ಕರೆದಿದ್ದೇವೆ. ಡಿಸೆಂಬರ್ 5ರಂದು ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ನಡೆಯಲಿದೆ" ಎಂದರು.

Karnataka Bandh Fight Between Yediyurappa And Vatal Nagaraj

"ಈ ಬಂದ್ ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನದಾಗಿ ಯಡಿಯೂರಪ್ಪ ಮತ್ತು ನಮ್ಮ ನಡುವಿನ ಫೈಟ್. ಬಹಳ ಹಠಮಾರಿ ಮುಖ್ಯಮಂತ್ರಿ. ಇದರಿಂದ ಅನ್ಯಾಯ ಆಗುತ್ತದೆ ಎಂದರೆ ಏನಾದರೂ ಆಗಲಿ ನೋಡಿಕೊಳ್ಳುವೆ ಎನ್ನುವ ಹಠಮಾರಿ" ಎಂದು ವಾಟಾಳ್ ನಾಗರಾಜ್ ದೂರಿದರು.

"ನಿಗಮ ಸ್ಥಾಪನೆ ಮಾಡುವ ತೀರ್ಮಾನ ಕೈಗೊಂಡಾಗ ಅವರ ಬಿಜೆಪಿ ಪಕ್ಷದ ನಾಯಕರು, ಶಾಸಕರು, ಮಂತ್ರಿಗಳು ಕನ್ನಡಿಗರಿಗೆ ಅನ್ಯಾಯ ಆಗುತ್ತದೆ ಎಂದು ಮಾತನಾಡಿಲ್ಲ. ವಿರೋಧ ಪಕ್ಷಗಳ ಮೇಲೆ ನಿರೀಕ್ಷೆ ಇತ್ತು. ಅವರು ಸಹ ಮಾತನಾಡಿಲ್ಲ" ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.

"ಈಗಿನ ಚುನಾವಣೆ ಎಂಬುದು ಯಾರನ್ನು ಬೇಕಾದರೂ ಮಾರಾಟ ಮಾಡಬಹುದು ಎಂದು ಆಗಿದೆ. ಅಧಿಕಾರ ಬೇಕು ಎಂದರೆ ವಿಧಾನಸೌಧ, ಸುವರ್ಣ ವಿಧಾನಸೌಧವನ್ನು ಮಾರಾಟ ಮಾಡುತ್ತಾರೆ. ಇದನ್ನು ವಿರೋಧಿಸುವ, ಅಡ್ಡಿ ಪಡಿಸುವ ರಾಜಕಾರಣಿ ಇಲ್ಲೂ ಈಗ ಇಲ್ಲ" ಎಂದು ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

"ಯಡಿಯೂರಪ್ಪ ಮಹಾ ದ್ವೇಷಿ. ಅವರಿಗೆ ದ್ವೇಷ ಬಿಟ್ಟರೆ ಬೇರೆ ಏನೂ ಇಲ್ಲ. 24 ಗಂಟೆಯೂ ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ತೆಗಿಬೇಕು, ಅಧಿಕಾರದಿಂದ ತೆಗೆದರೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಚಿಂತನೆ ನಡೆಸುತ್ತಾರೆ. ಇವರಿಗೆ ತತ್ವ, ಸಿದ್ಧಾಂತ ಯಾವುದೂ ಇಲ್ಲ" ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

"ಕನ್ನಡ ಒಕ್ಕೂಟ ಬಂದ್ ಕರೆದಿರುವುದು ಅವರಿಗೆ ಸವಾಲು ಆಗಿ ಬಿಟ್ಟಿದೆ. ಮರಾಠ ಅಭಿವೃದ್ಧಿ ನಿಗಮ ರಚನೆ ಆದೇಶ ವಾಪಸ್ ಪಡೆಯಲು ನವೆಂಬರ್ 30ರ ಗಡುವು ನೀಡಲಾಗಿತ್ತು. ಆದರೆ, ಅವರು ಅದನ್ನು ವಾಪಸ್ ಪಡೆಯಲಿಲ್ಲ" ಎಂದು ವಾಟಾಳ್ ನಾಗರಾಜ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+