ಹಳೇ ಮೈಸೂರು ಭಾಗದಲ್ಲಿ ರಾಜಕೀಯ ಜಟಾಪಟಿ; ಮೋದಿ ರೋಡ್ ಶೋ ಬೆನ್ನಲ್ಲೇ ದೇವೇಗೌಡ್ರು ಎಂಟ್ರಿ..!
ಪ್ರಧಾನಿ ನರೇಂದ್ರ ಮೋದಿಗೆ ಠಕ್ಕರ್ ಕೊಡುವ ದಳಪತಿಗಳು ಪ್ಲಾನ್ ನಡೆಸಿದ್ದು, ರೋಡ್ ಶೋ ನಡೆಸಲು ತಯಾರಿ ನಡೆಸಿದ್ದಾರೆ.
ಬೆಂಗಳೂರು,ಮಾರ್ಚ್17: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ರಾಜಕೀಯ ಪಕ್ಷಗಳು ಭರ್ಜರಿ ತಯಾರಾಇ ನಡೆಸಿವೆ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ದಿನೇ ದಿನೇ ಜೆಡಿಎಸ್ ಪ್ರಾಬಲ್ಯ ಕಡಿಮೆಯಾಗುತ್ತಿದ್ದು, ಇಲ್ಲಿ ಬಿಜೆಪಿ ಹಿಡಿತ ಸಾಧಿಸಲು ಮುಂದಾಗಿದೆ.
ಈಗಾಗಲೇ ಹಳೇ ಮೈಸೂರು ಭಾಗದ ಮೇಲೆ ಕಣ್ಣೀಟ್ಟಿರುವ ಚುನಾವಣಾ ಚಾಣಾಕ್ಷ ಅಮಿತ್ ಶಾ ರಣತಂತ್ರ ಹೆಣೆದಿದ್ದಾರೆ. ಇತ್ತ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಹಲವು ದಾಳಗಳು ಸಾಕಷ್ಟು ಪ್ರಯೋಗವಾಗ್ತಿದೆ. ಒಂದು ಕಡೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಣತೊಟ್ಟಿದ್ದಾರೆ.

ಈ ನಡುವೆ ಆಡಳಿತರೂಢ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನ ನಡೆಸಿದ್ದು, ಮಂಡಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮೂಲಕ ದೊಡ್ಡ ಸಮಾವೇಶವನ್ನ ನಡೆಸಿದ್ದಾರೆ. ಅದೇ ಅಲ್ಲದೇ ಮೋದಿ ಮಂಡ್ಯದಲ್ಲಿ ರೋಡ್ ಶೋ ಮಾಡುವ ಮೂಲಕ ಇಡೀ ಮಂಡ್ಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಇತ್ತ ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ಕೊಡಲು ದಳಪತಿಗಳ ಸಿದ್ದತೆ ಜೋರಾಗಿದ್ದು, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕಂತಾ ದೊಡ್ಡಗೌಡ್ರು ಚುನಾವಣಾ ಅಖಾಡಕ್ಕೆ ಎಂಟ್ರಿ ಆಗ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಬ್ಬರ ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ದೇವೇಗೌಡ್ರು ಪ್ಲಾನ್ ಮಾಡಿದ್ದಾರೆ.
ಇನ್ನೂ ಗೆಲ್ಲುವ ಕ್ಷೇತ್ರಗಳು ಸಮುದಾಯದ ಸೆಳೆತಕ್ಕೆ ಅಮಿತ್ ಶಾ ಮುಂದಾಗಿದ್ದಾರೆ. ಅದ್ರಲ್ಲೂ ಜೆಡಿಎಸ್ ಭದ್ರಕೋಟೆ ಹಳೇ ಮೈಸೂರು ಭಾಗದಲ್ಲಿ ಕೇಸರಿ ಪತಾಕೆ ಹಾರಿಸಬೇಕಂತಾ ನಾನಾ ಕಸರತ್ತು ಮಾಡ್ತಿದ್ದಾರೆ. ಇದಕ್ಕೆ ಟಕ್ಕರ್ ಕೊಡಲು ದೇವೇಗೌಡರು ಹೊಸ ಸೂತ್ರ ರಚನೆ ಮಾಡಿ ವೇದಿಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಭದ್ರಗೊಳಿಸಿ, ಒಕ್ಕಲಿಗ ಸಮುದಾಯ ಮತ್ತು ಹಳೇ ಮೈಸೂರು ಭಾಗದಲ್ಲಿ ಕಣ್ಣಿಟ್ಟಿದ್ದ ಬಿಜೆಪಿ ತಂತ್ರಕ್ಕೆ ದಳಪತಿಗಳು ಠಕ್ಕರ್ ನೀಡೊದಕ್ಕೆ ಸಿದ್ದರಾಗಿದ್ದು, ಮಂಡ್ಯದಲ್ಲಿ ರೋಡ್ ಶೋ ಮಾಡಿದ ಪ್ರಧಾನಿ ಮೋದಿ ತಂತ್ರಕ್ಕೆ ಪ್ರತಿತಂತ್ರಕ್ಕೆ ದೊಡ್ಡಗೌಡ್ರ ನೇತೃತ್ವದಲ್ಲಿ ಸುಮಾರು 100 ಕಿಮಿ ರೋಡ್ ಶೋ ನಡೆಸಲು ಮುಂದಾಗಿದ್ದಾರೆ.
ಮಾರ್ಚ್ 26 ರಂದು ಕುಂಬಳಗೂಡಿನಿಂದ ಮೈಸೂರಿನವರೆಗೂ ದೇವೇಗೌಡ್ರ ರೋಡ್ ಶೋ ನಡೆಸಿ ಮೈಸೂರಿನಲ್ಲಿ ನಡೆಯುವ ಪಂಚರತ್ನ ರಥಯಾತ್ರೆ ಸಮಾರೋಪದಲ್ಲಿ ಮಾಜಿ ಪ್ರಧಾನಿ ದೇವೇಗೌಡ್ರು ಭಾಗಿಯಾಗಲಿದ್ದಾರೆ.ಮಾಜಿ ಪ್ರಧಾನಿಗಳ ರೋಡ್ ಶೋ ಹಾದು ಹೋಗಲಿರುವ ಪ್ರತಿ ಕ್ಷೇತ್ರದಲ್ಲಿ ಜವಾಬ್ದಾರಿ ತೆಗೆದುಕೊಂಡಿರುವ ಸ್ಥಳೀಯ ನಾಯಕರು ಮತ್ತು ಜಿಲ್ಲಾಧ್ಯಕ್ಷರು ರೋಡ್ ಶೋ ಯಶಸ್ವಿಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
ಇನ್ನೂ ಹಳೇಮೈಸೂರು ಭಾಗದಲ್ಲಿ ಮತ್ತಷ್ಟು ಬಿಗಿಹಿಡಿತ, ಕಾಂಗ್ರೆಸ್, ಬಿಜೆಪಿ ಕಣ್ಣಿಟ್ಟಿರುವ ಭಾಗವನ್ನು ಮತ್ತಷ್ಟು ಭದ್ರಗೊಳಿಸುವುದು ದಳಪತಿಗಳ ಲೆಕ್ಕಾಚಾರವಾಗಿದೆ. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಚುನಾವಣಾ ತಂತ್ರವಾಗಿ ಬಳಸಿಕೊಳ್ಳುವುದಕ್ಕೆ ಬ್ರೇಕ್ ಹಾಕುವುದು ಸೇರಿದಂತೆ ರೋಡ್ ಶೋ ಹಾದು ಹೋಗುವ ಕಡೆ ದೇವೇಗೌಡರ ಆಢಳಿತದಲ್ಲಿ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಗಳ ಬಗ್ಗೆ ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ.
ದಳಪತಿಗಳ ರೋಡ್ ಶೋ ಮೂಲಕ ಪಂಚರತ್ನ ರಥಯಾತ್ರೆಯನ್ನು ಮತ್ತಷ್ಟು ಪ್ರಚಾರ ಮಾಡುವುದು, ಪಕ್ಷ ಸಂಘಟನೆ, ಅಸಮಧಾನಗಳಿಗೆ ಫುಲ್ ಸ್ಟಾಪ್ ಹಾಕುವುದು ಸೇರಿದಂತೆ ವಿಪಕ್ಷಗಳ ಪ್ಲಾನ್ ಗೆ ಮಾಸ್ಟರ್ ಪ್ಲಾನ್ ರೂಪಿಸುವಲ್ಲಿ ಜೆಡಿಎಸ್ ನಾಯಕರು ಯಶಸ್ವಿಯಗ್ತಾರಾ? ಹಾಗೂ ದೊಡ್ಡಗೌಡರ ಎಂಟ್ರಿಯಿಂದಾಗಿ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಯ ಬೀರಲಿದೆ ಎಂದು ಕಾದುನೋಡ್ಬೇಕಾಗಿದೆ.












Click it and Unblock the Notifications