ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು
Recommended Video

ಬೆಂಗಳೂರು, ಏಪ್ರಿಲ್ 30 : ಇದನ್ನು ಮತ್ತೆ ಹೇಳಬೇಕಾದ ಅಗತ್ಯವೇ ಇಲ್ಲ. ಆದರೂ ಹೇಳಲೇಬೇಕು. ಅದೇನಪ್ಪಾ ಅಂದ್ರೆ, ಈ ವರ್ಷ ಕೂಡ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ ಮತ್ತು ಕುಡಿಮೀಸೆಯ ಹುಡುಗರು ಅವರಿಗಿಂತ ಸ್ವಲ್ಪ ಹಿಂದೆ ಬಿದ್ದಿದ್ದಾರೆ.
ಅದೇನೇ ಇರಲಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವರ್ಷವಿಡೀ ಪಟ್ಟ ಪರಿಶ್ರಮಕ್ಕೆ ಇಂದು ಫಲಿತಾಂಶ ದೊರೆತಿದೆ. ತಮ್ಮ ಭವಿತವ್ಯದ ಕನಸುಗಳನ್ನು ಹೊತ್ತ ಸ್ಟುಡೆಂಟ್ ಗಳು ವಿವಿಧ ವೃತ್ತಿಪರ ಕೋರ್ಸ್ ಮಾಡುವತ್ತ ಗಮನ ಹರಿಸಲಿದ್ದಾರೆ.
ಇಲ್ಲಿ, ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಅತೀಹೆಚ್ಚು ಅಂಕ ಗಳಿಸಿದವರ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ. ಹೆಚ್ಚು ಅಂಕ ಗಳಿಸಿದವರು ಬೀಗಬೇಕಾಗಿಲ್ಲ, ಅವರಿಗಿಂತ ತುಸು ಕಡಿಮೆ ಅಂಕ ಗಳಿಸಿದವರು ಬಾಗಬೇಕಾಗಿಲ್ಲ. ಪರೀಕ್ಷೆ ಮತ್ತು ಅಂಕಗಳು ಜೀವನದ ಒಂದು ಭಾಗ ಅಷ್ಟೇ. ಜೀವನ ಇನ್ನೂ ತುಂಬಾ ದೊಡ್ಡದಿದೆ. ತೇರ್ಗಡೆಯಾದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು.

ವಿಜ್ಞಾನ ವಿಭಾಗ
ಪ್ರಥಮ ಸ್ಥಾನ : ಕೃತಿ ಮುತಗಿ
ಕಾಲೇಜು : ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬಸವೇಶ್ವರ ನಗರ, ಬೆಂಗಳೂರು
ಅಂಕ : 597 (600)
ದ್ವಿತೀಯ ಸ್ಥಾನ : ಮೋಹನ್ ಎಸ್ಎಲ್
ಕಾಲೇಜು : ಮಾಸ್ಟರ್ಸ್ ಪಿಯು ಕಾಲೇಜು, ಹೊಯ್ಸಳನಗರ, ಬೀರನಹಳ್ಳಿ, ಹಾಸನ
ಅಂಕ : 595 (600)
ತೃತೀಯ : ಅಂಕಿತಾ ಪಿ
ಕಾಲೇಜು : ಗೋವಿಂದ ದಾಸ ಪಿಯು ಕಾಲೇಜು, ಸುರತ್ಕಲ್, ಮಂಗಳೂರು
ಅಂಕ : 595 (600)
ವಾಣಿಜ್ಯ ವಿಭಾಗ
ಪ್ರಥಮ ಸ್ಥಾನ : ವರ್ಷಿಣಿ ಎಂ ಭಟ್
ಕಾಲೇಜು : ವಿದ್ಯಾಮಂದಿರ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
ಅಂಕ : 595 (600)
ದ್ವಿತೀಯ ಸ್ಥಾನ : ಅಮೃತಾ ಎಸ್ಆರ್
ಕಾಲೇಜು : ಎಎಸ್‌ಸಿ ಪಿಯು ಕಾಲೇಜು, ರಾಜಾಜಿನಗರ, ಬೆಂಗಳೂರು
ಅಂಕ : 595 (600)
ತೃತೀಯ : ಪೂರ್ವಿತಾ ಆರ್
ಕಾಲೇಜು : ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ, ಬೆಂಗಳೂರು
ಅಂಕ : 594 (600)
ಕಲಾ ವಿಭಾಗ
ಪ್ರಥಮ ಸ್ಥಾನ : ಸ್ವಾತಿ ಎಸ್
ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ
ಅಂಕ : 595 (600)
ದ್ವಿತೀಯ ಸ್ಥಾನ : ರಮೇಶ ಎಸ್ ವಿ
ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ
ಅಂಕ : 593 (600)
ತೃತೀಯ : ಗೊರವರ ಕಾವ್ಯಾಂಜಲಿ
ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ
ಅಂಕ : 588 (600)












Click it and Unblock the Notifications