ಯಾವ ಜಾತಿ ವಿದ್ಯಾರ್ಥಿಗಳು ಎಷ್ಟು ಫಲಿತಾಂಶ ಪಡೆದಿದ್ದಾರೆ?
Recommended Video

ಬೆಂಗಳೂರು, ಏಪ್ರಿಲ್ 30: ಪಿಯು ಫಲಿತಾಂಶ ಇಂದು ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 685713 ಲಕ್ಷ ವಿದ್ಯಾರ್ಥಿಗಳಲ್ಲಿ 408421 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 59.56% ಫಲಿತಾಂಶ ಈ ಬಾರಿ ಬಂದಿದೆ.
ಕಳೆದ ಬಾರಿ ಹೆಚ್ಚು ಫಲಿತಾಂಶ ಪಡೆದಿದ್ದ ಉಡುಪಿಯನ್ನು ಹಿಂದಕ್ಕಿಕ್ಕಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಪ್ರತಿಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮುಂದೆ ಇದ್ದು ಒಟ್ಟು ಬಾಲಕರ ಫಲಿತಾಂಶ 52.30% ಇದ್ದರೆ ಬಾಲಕಿಯರದ್ದು 67.11% ಆಗಿದೆ.
ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಈ ಬಾರಿಯೂ ಗ್ರಾಮಾಂತರ ವಿದ್ಯಾರ್ಥಿಗಳು ಹಿಂದೆ ನೂಕಿದ್ದು, ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ 59.45% ಆಗಿದ್ದರೆ ಗ್ರಾಮಾಂತರದ್ದು 67.11% ಆಗಿದೆ.
ಪ್ರತಿ ವರ್ಷದಂತೆ ಪಿಯು ಬೋರ್ಡ್, ಜಾತಿವಾರು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದೆ. ಯಾವ ಜಾತಿಯ ವಿದ್ಯಾರ್ಥಿಗಳು ಎಷ್ಟು ಅಂಕ ಪಡೆದಿದ್ದಾರೆಂದು ಪ್ರಕಟಿಸುವುದನ್ನು ನಿಲ್ಲಿಸಬೇಕೆಂದು ಹಲವು ಮನವಿಗಳು ಬಂದಿದ್ದರೂ ಪಿಯು ಬೋರ್ಡ್ ತನ್ನ ಈ ಪದ್ಧತಿಯನ್ನು ಮುಂದುವರೆಸಿಕೊಂಡೇ ಬಂದಿದೆ. ಮುಂದಿನಿಂದಾದರೂ ಜಾತಿವಾರು ಫಲಿತಾಂಶವನ್ನು ಪ್ರಕಟಿಸುವುದನ್ನು ಕೈಬಿಡಬೇಕೆನ್ನುವುದೇ ನಮ್ಮ ಆಶಯ.
ಎಲ್ಲಾ ಜಾತಿಯ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದರು ಅದರಲ್ಲಿ ಯಾವ ಜಾತಿಯ ವಿದ್ಯಾರ್ಥಿಗಳ ಫಲಿತಾಂಶ ಹೇಗಿದೆ ತಿಳಿಯಲು ಮುಂದೆ ಓದಿ...

1,21,429 ವಿದ್ಯಾರ್ಥಿಗಳು ಹಾಜರು
1,21,429 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಉತ್ತೀರ್ಣರಾಗಿರುವುದು 59,606 ವಿದ್ಯಾರ್ಥಿಗಳು. ಶೇಕಡಾವಾರ ಫಲಿತಾಂಶ 49.09. ಕಳೆದ ಬಾರಿ 40.68 ಪ್ರತಿಶತ ವಿದ್ಯಾರ್ಥಿಗಳು ಪಾಸಾಗಿದ್ದರು.

ಕಳೆದ ಬಾರಿಗಿಂತ ಉತ್ತಮ ಫಲಿತಾಂಶ
ಪರಿಶಿಷ್ಟ ಪಂಗಡದ 42,427 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 21,888 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರಿಶಿಷ್ಟ ಪಂಗಡದ ಈ ಬಾರಿಯ ಒಟ್ಟು ಫಲಿತಾಂಶ 51.59%. ಕಳೆದ ವರ್ಷ 43.18% ಫಲಿತಾಂಶ ಬಂದಿತ್ತು.

ಉತ್ತಮ ಫಲಿತಾಂಶ
ಸಿ-1 ವಿಭಾಗದ ಜಾತಿಯ 43,612 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಉತ್ತೀರ್ಣವಾಗಿದ್ದು 25097. ಇವರ ಒಟ್ಟು ಫಲಿತಾಂಶ 57.55%. ಕಳೆದ ವರ್ಷ ಸಿ-1 ಕ್ಯಾಟಗೆರಿಯ ಫಲಿತಾಂಶ 49.58 ಇತ್ತು.

ಅತಿ ಹೆಚ್ಚು ಹಾಜರಾದವರು ಇವರೇ
ಅತಿ ಹೆಚ್ಚು ಮಂದಿ ಪರೀಕ್ಷೆಗೆ ಹಾದವರು 2-ಎ ಕ್ಯಾಟಗರಿಗೆ ಸೇರಿದ ವಿದ್ಯಾರ್ಥಿಗಳು. ಈ ಬಾರಿ 1,38,655 2-ಎ ಕ್ಯಾಟಗರಿಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಉತ್ತೀರ್ಣವಾಗಿರುವುದು 88,750. ಶಕಡಾವಾರು ಫಲಿತಾಂಶ 64.01%.

ಶೇಕಡಾವಾರು ಫಲಿತಾಂಶದಲ್ಲಿ ಹೆಚ್ಚಳ
2-ಬಿ ಕ್ಯಾಟಗರಿಗೆ ಸೇರಿದ 71,469 ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಉತ್ತೀರ್ಣವಾಗಿರುವುದು 39,127 ವಿದ್ಯಾರ್ಥಿಗಳು. ಶೇಕಡಾವಾರು ಫಲಿತಾಂಶ 54.75. ಕಳೆದ ವರ್ಷ ಇವರ ಫಲಿತಾಂಶ 48.13% ಇತ್ತು.

ಅತ್ಯುತ್ತಮ ಫಲಿತಾಂಶ
ಜಾತಿವಾರು ಲೆಕ್ಕಾಚಾರದಲ್ಲಿ 3-ಎ ವಿದ್ಯಾರ್ಥಿಗಳು ಹೆಚ್ಚು ಮಂದಿ ಪಾಸಾಗಿದ್ದಾರೆ. ಪರೀಕ್ಷೆ ಕೂತವರ ಸಂಖ್ಯೆ 73,869. ಉತ್ತೀರ್ಣವಾಗಿರುವುದು 49,682. ಶೇಕಡಾವಾರು ಫಲಿತಾಂಶ 67.26%. ಕಳೆದ ವರ್ಷ 59.85%.

ಫಲಿತಾಂಶದಲ್ಲಿ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ 3-ಬಿ ಕ್ಯಾಟಗರಿಯ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ. ಈ ಬಾರಿ 3-ಬಿ ಕ್ಯಾಟಗರಿಯ 1,12,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 70179 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟು ಫಲಿತಾಂಶ 62.58%. ಕಳೆದ ವರ್ಷ 55.50% ಫಲಿತಾಂಶ ಪಡೆದಿದ್ದರು.

ಉತ್ತಮ ಫಲಿತಾಂಶ
ಸಾಮಾನ್ಯ ವರ್ಗದ 82,185 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 54,142 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರ ಒಟ್ಟು ಶೇಕಡಾವಾರು ಫಲಿತಾಂಶ 65.88%. ಕಳೆದ ವರ್ಷ 60.99% ಫಲಿತಾಂಶ ಪಡೆದಿದ್ದರು.












Click it and Unblock the Notifications