Karnataka Rains: ಚಂಡಮಾರುತ ಸೃಷ್ಟಿ, ರಾಜ್ಯದ 21 ಜಿಲ್ಲೆಗಳಿಗೆ ಭಾರೀ ಮಳೆ ಅಬ್ಬರ! ಯೆಲ್ಲೋ ಅಲರ್ಟ್

ಬೆಂಗಳೂರು, ಏಪ್ರಿಲ್ 03: ಸಮುದ್ರದ ಎರಡು ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸ್ಪಷ್ಟ ಚಂಡಮಾರುತ ಪರಿಚಲನೆ ದಾಖಲಾಗಿದೆ. ಈ ಕಾರಣದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ 05 ದಿನ ಏಪ್ರಿಲ್ 8ರವರೆಗೆ ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆ ಅಬ್ಬರಿಸಲಿದೆ. ಕರ್ನಾಟಕದಲ್ಲಿ ಇಂದಿನಿಂದ ಏಪ್ರಿಲ್ 6ರವರೆಗೆ (ಗುರುವಾರ-ಭಾನುವಾರ) 21 ಜಿಲ್ಲೆಗಳಿಗೆ ಭಾರೀ ಮಳೆ ಪ್ರಯುಕ್ತ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ರಾಜ್ಯದಲ್ಲಿ ಕೆಲವೆಡೆ ಬಿಸಿಲಿನ ತಾಪ ಹೆಚ್ಚಾಗಿತ್ತು, ಈ ಮಧ್ಯೆ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಸಾಧಾರಣದಿಂದ ಭಾರೀ ಮಳೆ ಆರ್ಭಟಿಸಲಿದೆ. ಪೂರ್ವ ಮುಂಗಾರು ಮಳೆ ಮತ್ತಷ್ಟು ಚುರುಕಾಗಲಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಅಬ್ಬರಿಸಲಿದೆ. ಸದರಿ ವರ್ಷ ಈವರೆಗೆ ಬಂದ್ ಪೂರ್ವ ಮುಂಗಾರು ಪೈಕಿ ಮುಂದಿನ 03 ದಿನ ಅಬ್ಬರಿಸುವ ಮಳೆ, ಅತ್ಯಧಿಕ ಮಳೆ ಎಂದು ಊಹಿಸಲಾಗಿದೆ.

Karnataka 21 Districts Will See Heavy Rain till April 6 Due to Cyclonic Circulation Yellow Alert by IMD

3.6 ಕಿಮೀ. ಎತ್ತರದಲ್ಲಿ ಚಂಡಮಾರುತದ ಬಿರುಗಾಳಿ

ಲಕ್ಷದ್ವೀಪ ವ್ಯಾಪ್ತಿಯ ಸಮುದ್ರ 0.9 ಕಿಲೋ ಮೀಟರ್ ಎತ್ತರದಲ್ಲಿ ಹಾಗೂ ಕೊಮೆರಿಯನ್ ಪ್ರದೇಶಗಳಲ್ಲಿ 3.6 ಕಿಲೋ ಮೀಟರ್ ಎತ್ತರದಲ್ಲಿ ಚಂಡಮಾರುತದ ಗಾಳಿ ಸೃಷ್ಟಿಯಾಗಿದೆ. ಕೆಲವು ಗಂಟೆಗಳ ಹಿಂದೆ ವಾಯುಭಾರ ಕುಸಿತಗೊಂಡಿದ್ದು, ಇದೀಗ ಸ್ಪಷ್ಟ ಚಂಡಮಾರುತವಾಗಿ ಬದಲಾಗಿದೆ. ಈ ಕಾರಣದಿಂದ ದಕ್ಷಿಣ ಭಾರತದ ಮೂರು ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆ ಆಗಮಿಸಲಿದೆ. ಕರ್ನಾಟಕದಲ್ಲೂ ಸೈಕ್ಲೋನ್ ಎಫೆಕ್ಟ್‌ ಅತ್ಯಧಿಕ ಪ್ರಮಾಣದಲ್ಲಿ ಉಂಟಾಗಲಿದೆ.

ಯೆಲ್ಲೋ ಅಲರ್ಟ್ ಜಿಲ್ಲೆಗಳು ಯಾವುವು?

ರಾಜ್ಯದಲ್ಲಿ ಭಾರೀ ಮಳೆ ಕಾಣುವ ಜಿಲ್ಲೆಗಳನ್ನು ನೋಡುವುದಾರೆ, ಏಪ್ರಿಲ್ 6ರವರೆಗೆ ಕೆಲವೆಡೆ ಎರಡು ದಿನ, ಕೆಲವು ಭಾಗಗಳಲ್ಲಿ ಮೂರು ದಿನಗಳ ಕಾಲ ನಿರಂತರ ಮಳೆ ಆಗಲಿದೆ. ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಒಂದೇ ದಿನ ಭಾರೀ ಮಳೆ ಬರಲಿದೆ. ಹೀಗಾಗಿ ಒಟ್ಟು 21 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಿರುವುದಾಗಿ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

Karnataka 21 Districts Will See Heavy Rain till April 6 Due to Cyclonic Circulation Yellow Alert by IMD

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕನಿಷ್ಠ ಒಂದರಿಂದ ಮೂರು ದಿನಗಳ ಕಾಲ ಬೇರೆ ಬೇರೆ ಸಮಯದಲ್ಲಿ ಜೋರು ಗಾಳಿ ಸಹಿತ ಭಾರೀ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಸಹಿತ ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka 21 Districts Will See Heavy Rain till April 6 Due to Cyclonic Circulation Yellow Alert by IMD

ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಮೀ.ಗೆ ಏರಿಕೆ

ರಾಜ್ಯದ ಒಳನಾಡಿನಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಮಳೆ ಆಗಮನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಂಪು ವಾತಾವರಣ ಕಂಡು ಬರಲಿದೆ. ಈಗಾಗಲೇ ಬುಧವಾರದಿಂದ ವಿವಿಧ ಜಿಲ್ಲೆಗಳಲ್ಲಿ ರಾತ್ರಿ ತಂಪು ಗಾಳಿ ಬೀಸಲು ಆರಂಭಿಸಿದೆ. ಇನ್ನೂ ತಾಪಮಾನದಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಕುಸಿತವಾಗುವ ಸಾಧ್ಯತೆ ಇದೆ. ಬಿಸಿಲಿನಿಂತ ತತ್ತರಿಸಿದ ರಾಜ್ಯದ ಕರಾವಳಿ, ಒಳನಾಡು ಹಾಗೂ ಮಲೆನಾಡು ಭಾಗದ ಜನರಿಗೆ ಮುಂದಿನ ಒಂದು ವಾರ ನಿಟ್ಟುಸಿರು ಬಿಡುವಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+