ರಾಜ್ಯೋತ್ಸವ ವಿಶೇಷ; ಸ್ಪಷ್ಟವಾಗಿ ಕನ್ನಡ ಮಾತಾಡಿ, ಬಹುಮಾನ ಗೆಲ್ಲಿ
ಬೆಂಗಳೂರು, ಅಕ್ಟೋಬರ್ 19: ದೇಶಾದ್ಯಂತ ಕನ್ನಡ ಮಾತನಾಡುವವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ದೇಶಾದ್ಯಂತ ಕನ್ನಡಿಗರಿಗೆ ಕರೆ ನೀಡಲಾಗಿದೆ. ಅಕ್ಟೋಬರ್ 28 ರಂದು 1 ಲಕ್ಷಕ್ಕೂ ಹೆಚ್ಚು ಜನರು ಕನ್ನಡ ಹಾಡುಗಳನ್ನು ಹಾಡಲಿದ್ದು, ಕನ್ನಡದ ಬಗ್ಗೆ ಮಾತನಾಡಲಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಸುನೀಲ್ ಕುಮಾರ್, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ಒಂದು ವಾರದ ಕನ್ನಡ ಅಭಿಯಾನವನ್ನು ಘೋಷಿಸಿದರು. ಇದರಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವವರಿಗೆ ವಿಶೇಷ ಸ್ಪರ್ಧೆಯನ್ನು ಸಹ ಏರ್ಪಡಿಲಾಗಿದೆ.
'ಮಾತಾಡು ಮಾತಾಡು ಕನ್ನಡ' ಎಂಬ ಈ ಅಭಿಯಾನದಲ್ಲಿ ಅಕ್ಟೋಬರ್ 28 ರಂದು ಕರ್ನಾಟಕದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರು ಕನ್ನಡ ಹಾಡುಗಳನ್ನು ಹಾಡುವುದನ್ನು ನೋಡಬಹುದು. ಇದರಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಸಹ ಹಾಡುಗಳನ್ನು ಹಾಡಲಿದ್ದಾರೆ.

ಈ ಅಭಿಯಾನ ಜನರು ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಮತ್ತು ಸಹೋದ್ಯೋಗಿಗಳೊಂದಿಗೆ ಕಚೇರಿಗಳಲ್ಲಿ ಕನ್ನಡವನ್ನು ಬಳಸಲು ಪ್ರೋತ್ಸಾಹಿಸುತ್ತದೆ.
"ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ 1ರಂದು ಅಲ್ಲ. ನಾವು ಭಾಷೆಯನ್ನು ಆಚರಿಸಬೇಕು ಮತ್ತು ದೈನಂದಿನ ಜೀವನದಲ್ಲಿ ಇತರ ಭಾಷೆಗಳಲ್ಲಿ ಕನ್ನಡ ಬಳಕೆಯನ್ನು ಮಾಡಬೇಕು. ಆದ್ದರಿಂದ ಜನರು ಕನ್ನಡದಲ್ಲಿ ಸಂಭಾಷಿಸುವ ವಿಡಿಯೋಗಳನ್ನು ಜನರು ಕಳುಹಿಸಬಹುದು" ಎಂದು ಸುನಿಲ್ ಕುಮಾರ್ ಹೇಳಿದರು.
ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವವರಿಗೆ ಮತ್ತು ವೀಡಿಯೊವನ್ನು ಇಲಾಖೆಗೆ ಕಳುಹಿಸುವವರನ್ನು ಆಯ್ಕೆ ಮಾಡಿ 50,000 ರೂ. ಬಹುಮಾನವನ್ನು ಸಹ ನೀಡಲಾಗುತ್ತದೆ. ಜಗತ್ತಿನಾದ್ಯಂತ ಜನರು ಭಾಗವಹಿಸಲು ಅರ್ಹರು. ಈ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ 14 ದೇಶಗಳು ಕೈಜೋಡಿಸಿವೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ಅನ್ಯ ಭಾಷೆಯ ಪದಗಳನ್ನು ಬಳಸದೇ ನಿರರ್ಗಳವಾಗಿ ಕನ್ನಡದಲ್ಲಿ 4 ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಬೇಕು.
ಮಾತನಾಡಿದ ವಿಡಿಯೋವನ್ನು ಕಳುಹಿಸಬೇಕು. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಪ್ರಥಮ ಬಹುಮಾನ 10,000 ರೂ,. ದ್ವಿತೀಯ ಬಹುಮಾನ 5000 ರೂ, ಮತ್ತು ತೃತೀಯ ಬಹುಮಾನ 3000 ರೂ. ಆಗಿದೆ.
ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯಮಟ್ಟದ ಪ್ರಥಮ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 30,000 ರೂ.ಗಳು ಮತ್ತು ತೃತೀಯ ಬಹುಮಾನ 20,000 ರೂ. ಆಗಿದೆ.
ಆಸಕ್ತರು ಅಕ್ಟೋಬರ್ 28ರೊಳಗೆ ವಿಡಿಯೋ ಸೆಲ್ಫಿ ತೆಗೆದು ಕಳುಹಿಸಬೇಕು. ಅಕ್ಟೋಬರ್ 30ರಂದು ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.ರಾಜ್ಯದಲ್ಲಿ ಇರುವ ಕನ್ನಡಿಗರು, ಕನ್ನಡೇತರ ಭಾಷಿಕರು ಪ್ರೀತಿ ಅಭಿಮಾನದಿಂದ ಕನ್ನಡದಲ್ಲಿ ಮಾತನಾಡಬೇಕು. ನವೆಂಬರ್ ಕೊನೆಯವರೆಗೂ ಅದು ಮುಂದುವರಿಸಬೇಕು. ಆದರೆ, ಇದು ಕಡ್ಡಾಯ ಅಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ,ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Recommended Video
ಭಾಷೆ, ಸಂಸ್ಕೃತಿ, ಉಡುಗೆ ಮೂಲಕ ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇದರಿಂದ ಭಾಷೆಯ ಮಹತ್ವವೂ ಗೊತ್ತಾಗುತ್ತದೆ. ಹಜಾಗತೀಕರಣದ ಪರೊಣಾಮ ನೆಲದ ಭಾಷೆ ಹಿಂದಕ್ಕೆ ಸರಿದು ಅನ್ಯ ಭಾಷೆ ಮುನ್ನೆಲೆಗೆ ಬಂದಿದೆ. ಇದನ್ನು ಯುವ ಪೀಳಿಗೆಗೆ ತಿಳಿಸಬೇಕು ಎಂಬ ಉದ್ದೇಶದಿಂದಲೇ ಈ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲ ವ್ಯಕ್ತಿಗಳಿಗೂ ಮತ್ತು ಮನೆಗಳಿಗೂ ಕನ್ನಡ ಭಾಷೆಯ ಮಹತ್ವ ತಿಳಿಸುವುದೇ ನಮ್ಮ ಗುರಿಯಾಗಿದೆ ಎಂದು ಅವರು ತೀಲೀಸಿದ್ದಾರೆ. ಒಂದು ವಾರ ಕಾಲ ಇಂಗ್ಲೀಷ್ ಮತ್ತು ಇತರ ಭಾಚೆಗಳ ಬಳಕೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸಬೇಕು. ಈ ಅಭಿಮಯಾನಕ್ಕೆ 24 ರಂದು ಚಾಲನೆ ನೀಡಲಾಗುವುದು. ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದ ಗಳ ಜನರು ಜನರು ವಾರದಲ್ಲಿ 100 ಕನ್ನಡ ವಾಕ್ಯಗಳನ್ನು ಕಲಿಯುವ ಮೂಲಕ ಕನ್ನಡದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.












Click it and Unblock the Notifications