'ಕನಕಪುರಕ್ಕೆ ಮಾರಿ, ಸ್ಟಾಲಿನ್ ನಾಡಿಗೆ ಉಪಕಾರಿ' ಈ ಡಿಕೆಶಿ, ಸ್ವಕ್ಷೇತ್ರಕ್ಕೆ ಕೊಡುಗೆ ಶೂನ್ಯ
ಬೆಂಗಳೂರು, ನವೆಂಬರ್ 20: ಕನಕಪುರದಲ್ಲಿ ಸುಮಾರು ಮೂರು ದಶಕಗಳ ಕಾಲ ದಬ್ಬಾಳಿಕೆ ನಡೆಸಿ ಜಗೀರನ್ನಾಗಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸ್ವಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಕರ್ನಾಟಕ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಬರಗಾಲದ ಸಂದರ್ಭದಲ್ಲೂ ಪ್ರಾಧಿಕಾರಗಳ ನಿರ್ದೇಶನ ಮೇರೆಗೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇತ್ತ ಉಪಮುಖ್ಯಮಂತ್ರಿ ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿಯೇ ನೀರಿಗೆ ಹಾಹಾಕಾರ ಎದ್ದಿದೆ. ಈ ಕುರಿತು ರಾಜ್ಯ ಬಿಜೆಪಿಯು ಟ್ವೀಟ್ ಮಾಡಿ ಖಾರವಾಗಿ ಪ್ರತಿಕ್ರಿಯಿಸಿದೆ.

ಸರ್ಕಾರದ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿರುವ 'ಬ್ರ್ಯಾಂಡ್ ಬೆಂಗಳೂರು' ಹೆಸರಿನಲ್ಲಿ ಪಿಕ್ನಿಕ್ ಮಾಡುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಕನಕಪುರಕ್ಕೆ ಮಾರಿ, ಸ್ಟಾಲಿನ್ ನಾಡಿಗೆ ಉಪಕಾರಿ' ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ಜರಿದಿದೆ.
ಕನಕಪುರಕ್ಕೆ ಡಿಕೆಶಿ ಕೊಡುಗೆ ಶೂನ್ಯ:ಬಿಜೆಪಿ
ಕಾವೇರಿ ನದಿ ನೀರನ್ನು ಬೇಕಾಬಿಟ್ಟಿಯಾಗಿ ನೆರೆ ರಾಜ್ಯಕ್ಕೆ ಹರಿಬಿಟ್ಟ ಕಾರಣ, ಡಿ.ಕೆ. ಶಿವಕುಮಾರ್ ತವರು ಕನಕಪುರದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಅಲ್ಲಿಯ ಜನರು ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಕಳೆದ 30 ವರ್ಷ ದಬ್ಬಾಳಿಕೆ ನಡೆಸಿ ಕನಕಪುರವನ್ನು ಜಹಗೀರಾಗಿ ನಿರ್ಮಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರು ಕನಕಪುರಕ್ಕೆ ನೀಡಿರುವ ಕೊಡುಗೆ ಶೂನ್ಯ ಎಂದು ಆರೋಪಿಸಿದೆ.
ಡಿಕೆ ಶಿವಕುಮಾರ್ ಅವರೇ, ಇನ್ನಾದರೂ ಮತ ನೀಡಿದ ಜನತೆಗೆ ಸ್ವಲ್ಪವಾದರೂ ಸೇವೆ ಸಲ್ಲಿಸಿ, ಅವರ ಕಷ್ಟಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ ಎಂದು ಬಿಜೆಪಿ ಸಲಹೆ ನೀಡುವ ಮೂಲಕ ಎಚ್ಚರಿಸಿದೆ.

ಕಾವೇರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಕ್ತ ವಾದ ಮಂಡಿಸುವಲ್ಲಿ ವಿಫಲವಾಗಿದೆ ಎಂದು ವಿಪಕ್ಷಗಳು ಸೇರಿದಂತೆ ಕನ್ನಡಪರ ಸಂಘಟನೆಗಳು ದೂರಿವೆ. ಸಾಲದೆಂಬಂತೆ ಪದೇ ಪದೆ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ಸಿಕ್ಕಿದೆ. ಅದರನ್ವಯ ಸರ್ಕಾರ ಕಾವೇರಿ ನೀರನ್ನು ಹರಿಸುತ್ತಿದೆ.
ಕನಕಪುರದಲ್ಲಿಯೇ ನೀರಿಗೆ ಹಾಹಾಕಾರ
ಇದರ ಪರಿಣಾಮವೆಂಬಂತೆ ಉಪಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ನೀರಿನ ಹಾಹಾಕಾರ ಎದ್ದಿದೆ. ತಾಲೂಕಿನ ಕಸಬಾ ಕಲ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಮಸಂದ್ರ ಸರ್ಕಲ್ ವ್ಯಾಪ್ತಿಯಲ್ಲಿ ನೀರು ಪೂರೈಕೆಯ ಮೋಟಾರು ಕಟ್ಟಿತ್ತು. ಜನರ ಕುಡಿಯಲು ನೀರಿಲ್ಲದೇ ಪರದಾಡಿದರು. ಇದು ತಾಲೂಕು ಪಂಚಾಯಿತಿಯ ಆಡಳಿತ ಹೇಗಿದೆ ಎಂಬುದನ್ನು ತೋರಿಸುತ್ತದೆ.
ಇನ್ನೂ ಕಳೆದೊಂದು ದಶಕದಿಂದ ಗ್ರಾಮದ ಒಳಚರಂಡಿ ಶುದ್ಧೀಕರಿಸದ ಕಾರಣ ಸೊಳ್ಳೆ, ನೋಣಗಳ ಆವಾಸಸ್ಥಾನವಾಗುವಂತೆ ಮಾಡಲಾಗಿದೆ. ಇದು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಭೀರುವಂತೆ ಮಾಡಿದೆ. ಈ ನಿರ್ಲಕ್ಷ್ಯಕ್ಷಜನ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮ ಮೂವರು ಪಂಚಾಯಿತಿಗೆ ಆಯ್ಕೆ ಆದರೂ ಮೂಲ ಸಮಸ್ಯೆಗಳು ಮಾತ್ರ ಮುಂದುವರಿದಿವೆ. ಸಾಲದೆಂಬಂತೆ ಇದೀಗ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಕಾರಣ ಇಟ್ಟುಕೊಂಡ ಬಿಜೆಪಿ ಉಪಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದೆ.












Click it and Unblock the Notifications