ಫಿನಾಯಿಲ್ ಕುಡಿಸಿದ ಪ್ರಕರಣ: ಮೂವರು ವಿದ್ಯಾರ್ಥಿನಿಯರ ಬಂಧನ

Written By:
Subscribe to Oneindia Kannada

ಕಲಬುರಗಿ, ಜೂನ್, 25: ಕೇರಳ ಮೂಲದ ವಿದ್ಯಾರ್ಥಿನಿಗೆ ಫಿನಾಯಿಲ್ ಕುಡಿಸಿ ದೌರ್ಜನ್ಯ ಎಸಗಿದ ಆರೋಪದಡಿ ಮೂವರು ವಿದ್ಯಾರ್ಥಿನಿಯರನ್ನು ಕಲಬುರಗಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕಾಲೇಜಿನ ಹಾಸ್ಟೇಲ್ ಗೆ ತೆರಳಿ ವಿಚಾರಣೆ ನಡೆಸಿದ ಬಳಿಕ ಮೂವರನ್ನು ಬಂಧಿಸಲಾಗಿದೆ. ನಾವು ಮೊದಲೇ ಮಾಹಿತಿ ಕಲೆಹಾಕಿದ್ದೇವು. ಆದರೆ ವಿದ್ಯಾರ್ಥಿನಿಯರು ಅವರ ಊರಿಗೆ ತೆರಳಿದ್ದ ಕಾರಣ ಆಗಮಿಸಿದ ತಕ್ಷಣ ಬಂಧನ ಮಾಡಲಾಗಿದೆ ಎಂದು ಕಲಬುರಗಿ ಎಸ್ ಪಿ ಶಶಿಕುಮಾರ್ ತಿಳಿಸಿದ್ದಾರೆ.[ಕೇರಳದ ವಿದ್ಯಾರ್ಥಿನಿಗೆ ಕಲಬುರಗಿಯಲ್ಲಿ ಕಿರುಕುಳ]

karnataka

ಲಕ್ಷ್ಮೀ, ಅಥಿರಾ, ಕ್ರಿಷ್ಣಾ ಎಂಬ ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಶಿಲ್ಪಾ ಎಂಬುವಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕೇರಳದ ಮಹಿಳಾ ಆಯೋಗ ಪ್ರಕರಣದ ಬಗ್ಗೆ ವಿವರಣೆ ಮತ್ತು ಮಾಹಿತಿ ಕೋರಿ ಕರ್ನಾಟಕ ಮಹಿಳಾ ಆಯೋಗಕ್ಕೆ ಪತ್ರ ಬರೆದಿದೆ.[ಸಾಮಾಜಿಕ ಭದ್ರತೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]

ಅಸ್ವಥಿ (19) ಎಂಬ ವಿದ್ಯಾರ್ಥಿನಿಗೆ ಕೇರಳದ ವಿದ್ಯಾರ್ಥಿಗಳೇ ಶೌಚಾಲಯ ಶುದ್ಧಿಗೆ ಬಳಸುವ ಕ್ಲೀನರ್ ಕುಡಿಸಿದ್ದರು. ಅಸ್ವಸ್ಥ ಗೊಂಡ ಯುವತಿಯನ್ನು ಕೋಳಿಕ್ಕೋಡ್ ಆಸ್ಪತ್ರೆಗೆ ದಾಖಲಾಗಿತ್ತು.

ಕಲಬುರಗಿಯ ಅಲ್ ಖಮರ್ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ನಡೆದಿfತು. ಘಟನೆ ನಡೆದು 5 ದಿನಗಳ ನಂತರ ತೀವ್ರ ಅಸ್ವಸ್ಥಗೊಂಡ ಅಸ್ವಥಿಯನ್ನು ಕಾಲೇಜು ಆಡಳಿತ ಮಂಡಳಿ ಮನೆಗೆ ಕಳಿಸಿಕೊಟ್ಟಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Kalaburagi police on Friday arrested three senior female students for allegedly ragging a student Ashwathy, who hails from Kerala. Lakshmi, Athira and Krishna, all students of Al-Qamar college of nursing in Kalaburagi , were arrested and remanded in judicial custody on Friday night.
Please Wait while comments are loading...