ಕಲಬುರಗಿಯಲ್ಲಿ ಮೇ 6ರಂದು ಉದ್ಯೋಗ ಮೇಳ

Posted By:
Subscribe to Oneindia Kannada

ಕಲಬುರಗಿ, ಮೇ 03 : ಕಲಬುರಗಿಯಲ್ಲಿ ಮೇ 6ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ.

ಬೆಂಗಳೂರಿನ ಜಿ 4ಎಸ್ ಸೆಕ್ಯೂರ್ ಸಲ್ಯೂಷನ್ಸ್ (ಇಂಡಿಯಾ) ಕಂಪೆನಿ ಭದ್ರತಾ ಸಿಬ್ಬಂದಿ ನೇಮಕಕ್ಕೆ ಮತ್ತು ಅಪೋಲೋ ಹೋಂ ಕೇರ್ ಸ್ಟಾಫ್ ನರ್ಸ್ ಹುದ್ದೆ ಭರ್ತಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಿವೆ. [72 ವಲಯ ಅರಣ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ]

jobs

ಸ್ಟಾಫ್ ನರ್ಸ್ ಹುದ್ದೆ ನೇಮಕಾತಿಗೆ ಆಗಮಿಸುವವರು ಎಎನ್ಎಂ, ಜಿಎನ್ಎಂ, ಬಿಎಸ್‍ಸಿ ಅಥವ ಎಂಎಸ್ಸಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ರಿಂದ 32 ವರ್ಷ. ಭದ್ರತಾ ಸಿಬ್ಬಂದಿ ನೇಮಕಾತಿಗೆ ಆಗಮಿಸುವವರು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿ-4ಎಸ್ ಕಂಪನಿಯ 9008302349 ಹಾಗೂ ಅಪೋಲೊ ಹೋಂ ಕೇರ್‌ನ 7022096999 ಸಂಖ್ಯೆಗೆ ಕರೆ ಮಾಡಬಹುದಾಗಿದೆ. 080-42157070/42147070, 08472-274846 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಉದ್ಯೋಗವಕಾಶಗಳು

* ಕೇಂದ್ರ ಲೋಕಸೇವಾ ಆಯೋಗ ಭಾರತ ಅರಣ್ಯ ಸೇವೆ (ಐಎಫ್‌ಎಸ್)ಯಲ್ಲಿ 110 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ. [ವಿವರಗಳಿಗೆ ಕ್ಲಿಕ್ ಮಾಡಿ]

* ಬೆಂಗಳೂರು ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಜರ್‌ಗಳಾಗಿ ಕಾರ್ಯನಿರ್ವಹಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಮೇ 13, 2016 ಅರ್ಜಿ ಸಲ್ಲಿಸಲು ಕೊನೆಯ ದಿನ. [ವಿವರಗಳು ಇಲ್ಲಿವೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
G4S Security Services India Pvt. Ltd. and Apollo home care services organized Job fair in district employment exchange office Kalaburagi on May 6, 2016.
Please Wait while comments are loading...