ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ; ಈ ಬಾರಿ ಹಾಸನ ಟಿಕೆಟ್‌ ಯಾರಿಗೆ? ಕಾರ್ಯಕರ್ತರಿಂದ ಬಂದ ಒತ್ತಾಯವೇನು?

ಅವರನ್ನು ಅನರ್ಹಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿದಿದ್ದು, ಸದ್ಯ ಹಾಸನ ಜೆಡಿಎಸ್‌ ನಲ್ಲಿ ರಾಜಕೀಯ ಚಟುನವಟಿಗಳು ಗರಿಗೆದರಿವೆ

ಹೌದು, ಸುಳ್ಳು ಮಾಹಿತಿ ಸಲ್ಲಿಕೆ ಹಿನ್ನಲೆ ಅರ್ನಹಗೊಂಡಿರುವ ಪ್ರಜ್ವಲ್‌ ರೇವಣ್ಣ ಅವರು 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹೇಳಲಾಗಿದ್ದು, ಸದ್ಯ ಪ್ರಜ್ವಲ್ ಅನರ್ಹ ಬೆನ್ನಲ್ಲೇ ಹಾಸನ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡರು ಸ್ವರ್ಧೆ ವಿಚಾರ ಮುನ್ನಲೆಗೆ ಬಂದಿದೆ.

JDS Workers Demand Devegowda to Contest from Hassan Lok Sabha Constituency

ಈ ಹಿಂದೆ ಮೊಮ್ಮೊಗನಿಗಾಗಿ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಕ್ಷೇತ್ರವನ್ನ ತ್ಯಾಗ ಮಾಡಿದ್ರು, ಇದೀಗ ಪ್ರಜ್ವಲ್‌ ರೇವಣ್ಣ ಅನರ್ಹಗೊಂಡ ಬೆನ್ನಲ್ಲೇ ದೇವೇಗೌಡರೇ ಸ್ಪರ್ಧೆ ಮಾಡಬೇಕು ಎಂದು ಹಾಸನ ಜಿಲ್ಲಾ ಕಾರ್ಯಕರ್ತರಿಂದ ಒತ್ತಾಯ ಕೇಳಿ ಬಂದಿದೆ. 2024ರ ಲೋಕಸಭಾ ಚುನಾವಣೆಗೆ ಹಾಸನದಿಂದ ದೇವೇಗೌಡರು ಸ್ಪರ್ಧೆ ಮಾಡಬೇಕು. ದೇವೇಗೌಡ ಅವರದ್ದು ಇದು ಕೊನೆ ಚುನಾವಣೆಯಾಗಿದೆ. ಅದ್ದರಿಂದ ಹಾಸನದಿಂದ ಗೆಲ್ಲಿಸಿ ದೇವೇಗೌಡರನ್ನು ಲೋಕಸಭೆಗೆ ಕಳಿಸಲು ಮುಖಂಡರು, ಕಾರ್ಯಕರ್ತರು ನಿರ್ಧಾರಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಕಣಕ್ಕಿಳಿಯಬೇಕು ಎಂದು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಹಾಸನ ಕ್ಷೇತ್ರ ಜೆಡಿಎಸ್‌ ನ ಭದ್ರಕೋಟೆಯಾಗಿದ್ದು, ದಿನೇ ದಿನೇ ತನ್ನ ಅಸ್ವಿತ್ವವನ್ನ ಕಳೆದುಕೊಳ್ಳುತ್ತಿರುವ ಜೆಡಿಎಸ್‌ ಇದೀಗ 2024 ರ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ.

JDS Workers Demand Devegowda to Contest from Hassan Lok Sabha Constituency

ಸದ್ಯ ಪ್ರಜ್ವಲ್‌ ರೇವಣ್ಣ ಅವರನ್ನ ಸಂಸದ ಸ್ಥಾನದಿಂದ ಹೈಕೋರ್ಟ್‌ ಅಸಿಂಧುಗೊಳಿಸಿದ್ದು, ಇತ್ತ ಕೈ ಕೋರ್ಟ್‌ ಆದೇಶದ ವಿರುದ್ದ ಸುಪ್ರೀ ಕೋರ್ಟ್‌ ನತ್ತ ಮುಖಮಾಡಲಿದ್ದಾರೆ. ಅಲ್ಲದೇ ಪ್ರಜ್ವಲ್ ಅನರ್ಹ ವಿಚಾರವನ್ನೇ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತವೆ . ಇದರಿಂದ ಪ್ರಜ್ವಲ್ ಸ್ಪರ್ಧೆ ಮಾಡಿದರೆ ಹಾಸನದಲ್ಲಿ ಜೆಡಿಎಸ್​​ಗೆ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಹೀಗಾಗಿ ಗೌಡರು ಹಾಸನದಿಂದ ಸ್ಪರ್ಧೆ ಮಾಡಿದರೆ ಒಳ್ಳೆಯದು ಎನ್ನುವುದು ಹಾಸನ ಜಿಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.

ಇನ್ನೂ ಹಾಸನ ವಿಧಾನಸಭಾ ಚುನಾವಣೆಯ ವೇಳೆ ಟಿಕೆಟ್‌ ಗಾಗಿಯೂ ಸಹ ದೇವೇಗೌಡರ ಕುಟುಂಬದಲ್ಲಿ ಹೈಡ್ರಾಂ ನಡೆದಿತ್ತು. ಒಂದು ವೇಳೆ ಪ್ರಜ್ವಲ್​ ರೇವಣ್ಣಗೆ ಸುಪ್ರಿಂಕೋರ್ಟ್​ನಲ್ಲಿ ಹಿನ್ನಡೆಯಾದರೆ, ದೇವೇಗೌಡೆರ ಅವರು ಹಾಸನದಿಂದ ಸ್ಪರ್ಧೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಇತ್ತ ಸುಪ್ರೀಕೋರ್ಟ್‌ ಈಗಾಗಲೇ ಹೈಕೋರ್ಟ್‌ ಆದೇಶವನ್ನ ತಡೆಹಿಡಿದರೂ ಸಹ ದೇವೇಗೌಡರೇ ಸ್ಪರ್ಧೆ ಮಾಡಲಿ ಎಂದು ಜೆಡಿಎಸ್‌ ಜಿಲ್ಲಾ ನಾಯಕರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+