ಅಸಮಾನ್ಯ ದೇವೇಗೌಡ್ರ 'ರಾಜಕೀಯ' ಕುಣಿಕೆಯಲ್ಲಿ ಬಿಜೆಪಿ, ಕಾಂಗ್ರೆಸ್

ಬಿಬಿಎಂಪಿ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿಯವರು ಕನಸಿನಲ್ಲೂ ಸದ್ಯದ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಊಹಿಸಿರಲಿಕ್ಕಿಲ್ಲ. ತನ್ನ ಅಸಾಮಾನ್ಯ ರಾಜಕೀಯ ನಡೆಯಿಂದ ಜೆಡಿಎಸ್ ವರಿಷ್ಠ ದೇವೇಗೌಡರು ಕಮಲದ ಪಕ್ಷವನ್ನು ಬೆಚ್ಚಿ ಬೀಳಿಸಿರುದಂತೂ ನಿಜ.

ಬಹುಮತಕ್ಕೆ ಬೇಕಾಗಿರುವ ಮೂರು ಸೀಟನ್ನು ಪಕ್ಷೇತರರಿಂದ ಪಡೆದರಾಯಿತು ಎಂದು ಹನಿಮೂನ್ ಮೂಡ್ ನಲ್ಲಿದ್ದ ಬಿಜೆಪಿಯವರಿಗೆ ದೇವೇಗೌಡ ಮತ್ತು ಕುಮಾರಸ್ವಾಮಿ ರಾತ್ರೋರಾತ್ರಿ ಜಮೀರ್ ಅಹಮದ್, ಕುಪೇಂದ್ರ ರೆಡ್ಡಿ, ಭೈರತಿ ಬಸವರಾಜ್ ಮೂಲಕ ನಡೆಸಿದ ರಾಜಕೀಯ ತಂತ್ರಗಾರಿಕೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಗೆದ್ದದ್ದು ಹದಿನಾಲ್ಕು ಸ್ಥಾನವಾದರೂ ಈಗಿರುವ ಬಿಬಿಎಂಪಿ ಸ್ಥಿತಿಯಲ್ಲಿ ಹೇಗೆ ರಾಜಕೀಯ ಮಾಡಬಹುದು ಎನ್ನುವುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಧುರೀಣರಿಗೆ ದೇವೇಗೌಡ ತನ್ನ ರಾಜಕೀಯದ ಅನುಭವವದ ಮೂಲಕ ತೋರಿಸಿಕೊಟ್ಟಿದ್ದಾರೆ, (ಗೌಡ್ರು ಮುದ್ದೆಯನ್ನಲ್ಲ ಜನರನ್ನೇ ನುಂಗಿದ್ದಾರೆ)

ತಂತ್ರಗಾರಿಕೆ ರೂಪಿಸುವಲ್ಲಿ ತಾನೆಂಥ ಅಸಮಾನ್ಯ ಎನ್ನುವುದನ್ನು ದೇವೇಗೌಡ್ರು ಮತ್ತೆ ಮಗುದೊಮ್ಮೆ ರಾಜ್ಯದ ರಾಜಕೀಯ ಮುಖಂಡರಿಗೆ ರುಜುವಾತು ಪಡಿಸಿದ್ದಾರೆ. ನೂರು ಸ್ಥಾನವನ್ನು ಗೆದ್ದಿದ್ದರೂ ಮೂರು ಸ್ಥಾನಕ್ಕಾಗಿ ಜೆಡಿಎಸ್ ನಾಯಕರ ಬಾಗಿಲ ಬಳಿ ಕಾಯುವಂತಾಗಿರುವುದು ಸದ್ಯದ ಬಿಜೆಪಿಯ ಅಯೋಮಯ ಪರಿಸ್ಥಿತಿ.

ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವಿಲ್ಲ ಎಂದು ಚುನಾವಣೆಯ ಪ್ರಚಾರದ ವೇಳೆ ಹೇಳಿಕೆ ನೀಡಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನವರಿಗೆ ತನ್ನ ಶಕ್ತಿ ಏನೆಂದು ಗೌಡ್ರು ಸರಿಯಾಗಿ ತೋರಿಸಿಕೊಟ್ಟಿದ್ದಾರೆ. ತನ್ನ ಚಾಣಾಕ್ಷತನ, ರಾಜಕೀಯ ಪಟ್ಟಿನ ಮುಂದೆ ಎಲ್ಲರೂ ಶೂನ್ಯ ಎನ್ನುವುದನ್ನು ಗೌಡ್ರು ಮಗುದೊಮ್ಮೆ ಸಾಬೀತು ಪಡಿಸಿದ್ದಾರೆ.

ಪವಿತ್ರ ಮೈತ್ರಿಯೋ, ಅಪವಿತ್ರವೋ, ಬಿಬಿಎಂಪಿ ಮೇಯರ್ ಯಾರು? ಏನಿದ್ದರೂ ದೇವೇಗೌಡರದ್ದೇ ಅಂತಿಮ ನಿರ್ಧಾರ..

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

ಕೇವಲ ಹದಿನಾಲ್ಕು ಸ್ಥಾನ ಗೆದ್ದ ನಂತರ, ಫಲಿತಾಂಶದ ಬಗ್ಗೆ ವಾಖ್ಯಾನಿಸುತ್ತಾ ನಮ್ಮದು ಏನಿದ್ದರೂ ಗ್ರಾಮೀಣ ಪಕ್ಷ, ಬೆಂಗಳೂರಿನ ಜನತೆ ಭ್ರಷ್ಟರಿಗೆ ಇನ್ನಷ್ಟು ಭ್ರಷ್ಟಾಚಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಕುಮಾರಸ್ವಾಮಿ ನೋವಿನಿಂದ ನುಡಿದಿದ್ದರು.

ರಾಜಧಾನಿಯಲ್ಲಿ ಜೆಡಿಎಸ್ ಪ್ರಭಾವ

ರಾಜಧಾನಿಯಲ್ಲಿ ಜೆಡಿಎಸ್ ಪ್ರಭಾವ

ಜೆಡಿಎಸ್ ಪ್ರಭಾವ ರಾಜಧಾನಿಯಲ್ಲಿ ಕಮ್ಮಿಯಾಗುತ್ತಿದೆ ಎಂದೇ ಸಾರ್ವಜನಿಕವಾಗಿ ಭಾವಿಸಲಾಗಿತ್ತು. ಆದರೆ ಬದಲಾದ ಸಂಖ್ಯಾ ಲೆಕ್ಕಾಚಾರ, ಕಮಲದ ಪಕ್ಷದ ನಾಯಕರ ಓವರ್ ಕಾನ್ಫಿಡೆನ್ಸ್, ದೇವೇಗೌಡರ ರಾಜಕೀಯ ಬ್ರೇನ್, ರಾಜಧಾನಿಯಲ್ಲಿ ಬಿಜೆಪಿಗೆ ಅಸ್ತಿತ್ವ ನೀಡಬಾರದು ಎನ್ನುವ ಕಾಂಗ್ರೆಸ್, ಈ ಎಲ್ಲಾ ಅಂಶಗಳು ಮತ್ತೆ ಜೆಡಿಎಸ್ ಪಕ್ಷವನ್ನು 'ಕಿಂಗ್ ಮೇಕರ್' ಸ್ಥಾನದಲ್ಲಿ ನಿಲ್ಲಿಸಿದೆ.

ದೇವೇಗೌಡರ ನಡೆ

ದೇವೇಗೌಡರ ನಡೆ

ದೇವೇಗೌಡರ ನಡೆ ಏನೇ ಇರಲಿ ಚುನಾವಣೆಗೆ ಮುನ್ನ ವಿರೋಧಿಗಳನ್ನು ಏಕವಚನದಲ್ಲಿ ಹೀಯಾಳಿಸಿಕೊಂಡಿದ್ದ ರಾಜಕೀಯ ಪಕ್ಷಗಳು 'ಬೆಂಗಳೂರು ಅಭಿವೃದ್ದಿಯೇ ನಮ್ಮ ಗುರಿ' ಎನ್ನುವ ಸಂಶಯಾಸ್ಪದ ಟ್ಯಾಗ್ ಲೈನ್ ಮೂಲಕ ಒಂದಾಗಲೇ ಬೇಕಾಗಿದೆ. ಅಥವಾ ಜೆಡಿಎಸ್ ಸಹವಾಸವೇ ಬೇಡವೆಂದು ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಇರುವ ಬೇರೆ ದಾರಿಯೆಂದರೆ ಮತ್ತೆ ಚುನಾವಣೆಗೆ ಹೋಗುವುದು..

ಕಳಸಾ ಬಂಡೂರಿ ಯೋಜನೆ

ಕಳಸಾ ಬಂಡೂರಿ ಯೋಜನೆ

ಜೆಡಿಎಸ್ ಜೊತೆ ಚುನಾವಣೆಗೆ ಮುನ್ನ ಒಪ್ಪಂದ ಮಾಡಿಕೊಂಡಿದ್ದ ಬಿಜೆಪಿಯವರ ವರಸೆ ಫಲಿತಾಂಶ ಬಂದ ನಂತರ ಬದಲಾಯಿತು ಎನ್ನುವುದು ಆಪಾದನೆ. ಜೊತೆಗೆ ಕಳಸಾ ಬಂಡೂರಿ ಯೋಜನೆಯ ಸಂಬಂಧ ನಡೆಯುತ್ತಿರುವ ಹೋರಾಟ ಮತ್ತು ಸರ್ವಪಕ್ಷದ ಸಭೆಯಲ್ಲಿ ಗೌಡ್ರು ಬಂದಿಲ್ಲ ಎನ್ನುವ ಕಾರಣಕ್ಕಾಗಿ ದೇವೇಗೌಡ್ರನ್ನು ಸಾರ್ವಜನಿಕವಾಗಿ ಹೀಯಾಳಿಸಿದ್ದ ಬಿಜೆಪಿ ಮುಖಂಡರಿಗೆ ಗೌಡ್ರು ತಾನೇನೆಂದು ತೋರಿಸಿಕೊಟ್ಟಿದ್ದಾರೆ.

ಬಿಜೆಪಿ ಮುಖಂಡರು

ಬಿಜೆಪಿ ಮುಖಂಡರು

ಜೆಡಿಎಸ್ ರಾಜಕೀಯ ದಾಳದ ಮುಂದೆ ಏನು ಮಾಡಬೇಕೆಂದು ತೋಚದೇ ಕೇಂದ್ರ ಸಚಿವ ಸದಾನಂದ ಗೌಡ ಜೆಡಿಎಸ್ ವರಿಷ್ಠರ ಮನೆಗೆ ಹೋದರೆ, ಕುಮಾರಸ್ವಾಮಿಯವರನ್ನು ಹುಡುಕಿಕೊಂಡು ಅಶೋಕ್ ಹೋಗುವಂತಾಯಿತು.

ಪಕ್ಷೇತರ ಅಭ್ಯರ್ಥಿಗಳು

ಪಕ್ಷೇತರ ಅಭ್ಯರ್ಥಿಗಳು

ಗೆದ್ದ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಬಾಗಿಲು ಬಡಿದರೂ, ಸ್ಥಳೀಯ ಶಾಸಕರ ಅನುಮತಿ ಬೇಕು, ಜೊತೆಗೆ ತಮ್ಮನ್ನು ಅವಮಾನಿಸಿ ಕಳುಹಿಸಿದರು. ಹಾಗಾಗಿ ನಾವು ಕಾರಣಕ್ಕೂ ಬಿಜೆಪಿ ಪರವಾಗಿ ಮತಹಾಕುವುದಿಲ್ಲ ಎನ್ನುವುದು ಕೆಲವು ಪಕ್ಷೇತರ ಅಭ್ಯರ್ಥಿಗಳ ಭಾನುವಾರ ರಾತ್ರಿವರೆಗಿನ ನಿಲುವು. ಮುಂದೇನೋ ಗೊತ್ತಿಲ್ಲ..

 ಬದಲಾದ ಬಿಬಿಎಂಪಿ ರಾಜಕೀಯ ಪರಿಸ್ಥಿತಿ

ಬದಲಾದ ಬಿಬಿಎಂಪಿ ರಾಜಕೀಯ ಪರಿಸ್ಥಿತಿ

ಬದಲಾದ ಬಿಬಿಎಂಪಿ ರಾಜಕೀಯ ಪರಿಸ್ಥಿತಿಯಲ್ಲಿ ಜಾತಿ ರಾಜಕಾರಣ ಕೂಡಾ ಅಡಗಿದೆ ಎನ್ನುವ ಮಾತೂ ಇದೆ. ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಆರ್ ಅಶೋಕ್ ಅವರ ಪ್ರಾಬ್ಯಲ್ಯವನ್ನು ತಡೆಗಟ್ಟಬೇಕು ಎನ್ನುವ ಕಾರ್ಯತಂತ್ರವೂ ಬಿಜೆಪಿ - ಜೆಡಿಎಸ್ - ಕಾಂಗ್ರೆಸ್ ವಲಯದಲ್ಲಿದೆ ಎನ್ನುವ ಆಫ್ ದಿ ರೆಕಾರ್ಡ್ ಸುದ್ದಿಯೂ ಹರಿದಾಡುತ್ತಿದೆ.

ದೇವೇಗೌಡ ಕಿಂಗ್ ಮೇಕರ್

ದೇವೇಗೌಡ ಕಿಂಗ್ ಮೇಕರ್

ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ - ಜೆಡಿಎಸ್ ಒಂದಾಗಿವೆ ಎನ್ನುವುದು ಮೇಲ್ನೋಟದ ಸತ್ಯವಾದರೂ, ಸೆಪ್ಟಂಬರ್ ಐದರಂದು ದೇವೇಗೌಡ್ರು ಉರುಳಿಸುವ ಅಂತಿಮ ದಾಳ ಏನು ಎನ್ನುವುದು ರಾಷ್ಟ್ರೀಯ ಪಕ್ಷವೆರಡೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+