ಜೆಡಿಎಸ್ ಶಾಸಕರ ವೈಕುಂಠ ಸಮಾರಾಧನೆ ಪೊಸ್ಟರ್ ವೈರಲ್!
ಬೆಂಗಳೂರು ಜೂ. 11: ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಇಬ್ಬರು ಶಾಸಕರು ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಆ ಶಾಸಕರ 'ವೈಕುಂಠ ಸಮಾರಾಧನೆ'ಯ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಬಾರಿ ವೈರಲ್ ಆಗಿವೆ.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ ವೈಕುಂಠ ಸಮಾರಾಧನೆಯ ಪೋಸ್ಟರ್ ಮಾಡಿಸಿ ಆಕ್ರೋಶ ಹೊರಹಾಕಿದ್ದಾರೆ. ಸ್ವಪಕ್ಷಕ್ಕೆ ದ್ರೋಹ ಬಗೆದು ಬೇರೆ ಪಕ್ಷಗಳ ಗೆಲುವಿಗೆ ಕಾರಣರಾದರೆಂದು ಹೊರಡಿಸಿದ ಜೆಡಿಎಸ್ ನ ಕೋಲಾರದ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ ಅವರ ವೈಕುಂಠ ಸಮಾರಾಧಾನೆ ಪೋಸ್ಟರ್ ಗಳು ಎಲ್ಲೆಡೆ ಚರ್ಚೆ ಆಗಿವೆ.

2 ಪೋಸ್ಟರ್ ನಲ್ಲಿ ಏನಿದೆ?:
ಅಡ್ಡಮತದಾನದಿಂದ ಆಕ್ರೋಶಗೊಂಡಿರುವ ಜೆಡಿಎಸ್ ಕಾರ್ಯಕರ್ತರು ಪೋಸ್ಟರ್ ಗಳಲ್ಲಿ ಜೂ.21ರಂದು ಮಂಗಳವಾರ ಶಾಸಕ ಸ್ವಕ್ಷೇತ್ರದಲ್ಲಿ ಕೈಲಾಸ ಸಮಾರಾಧಾನೆ ಹಮ್ಮಿಕೊಂಡಿದ್ದೇವೆ ಎಂದು ಆಹ್ವಾನಿಸಿದ್ದಾರೆ. ಶಾಸಕ ಕೆ.ಶ್ರೀನಿವಾಸ ಗೌಡ ಕೋಲಾರ ಕ್ಷೇತ್ರ ವಾಸಿ ಮತ್ತು ಎಸ್. ಆರ್ ಶ್ರೀನಿವಾಸ್ ಗುಬ್ಬಿ ಕ್ಷೇತ್ರದ ವಾಸಿಯಾಗಿದ್ದಾರೆ. ಇಬ್ಬರು ಅಡ್ಡ ಮತದಾನ ಮಾಡಿದ ದಿನವೇ ನಿಧನರಾಗಿದ್ದಾರೆ ಎಂಬರ್ಥದಲ್ಲಿ ಪೋಸ್ಟರ್ ಸಿದ್ದಪಡಿಸಿದ್ದಾರೆ. ಇಂತಿ- ಶಾಸಕರ ದುಃಕತೃಪ್ತ ಕುಟುಂಬ ವರ್ಗ ಮತ್ತು ಸ್ವಕ್ಷೇತ್ರಗಳ ಗ್ರಾಮಸ್ಥರು ಹಾಗೂ ಬಂಧುಗಳು ಎಂದು ಮುದ್ರಣ ಮಾಡಿಸಿದ್ದಾರೆ.

ಈ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿ ಬಂದಿವೆ. ಪೋಸ್ಟರ್ ನೋಡಿ ಕೆಲವರು ನಕ್ಕು ಸುಮ್ಮನಾದರೆ, ಇನ್ನು ಕೆಲವರು ಇದು ಜೆಡಿಎಸ್ ಕಾರ್ಯಕರ್ತರ ಅತಿರೇಕದ ವರ್ತಿಸಿದ್ದಾರೆ. ಇದರಿಂದ ಶಾಸಕರು ಕುಟುಂಬದವರು ಮನಸ್ಸನ್ನು ಘಾಸಿಗೊಳಿಸಿದಂತಾಗುತ್ತದೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಅನೇಕ ಅಸಮಾಧಾನದ, ಸ್ವಾರ್ಥದ ಬೆಳವಣಿಗೆಗಳು ನಡೆದಿವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಶಾಕಸರ ತಪ್ಪೇನು?
ಶುಕ್ರವಾರ ಬೆಳಗ್ಗೆ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಆರಂಭವಾಗಿದೆ. ಇದಕ್ಕು ಮುನ್ನವೇ ಇತರ ಶಾಸಕರಂತೆ ಈ ಕೆ.ಶ್ರೀನಿವಾಸ ಗೌಡ ಮತ್ತು ಎಸ್. ಆರ್ ಶ್ರೀನಿವಾಸ್ ಅವರು ಜೆಡಿಎಸ್ ನ ಎಚ್. ಡಿ. ಕುಮಾರಸ್ವಾಮಿ ಅವರ ಜತೆಗೆ ಯಶವಂತಪುರದ ತಾಜ್ ವೆಸ್ಟೆಂಡ್ ನಲ್ಲಿ ತಂಗಿದ್ದರು. ಮೊದಲೇ ನಿರ್ಧರಿಸಿದಂತೆ ಎಲ್ಲರೂ ಒಟ್ಟಾಗಿ ವಿಧಾನಸೌಧಕ್ಕೆ ತೆರಳಿ ಮತ ಚಲಾಯಿಸಿದ್ದಾರೆ.

ಈ ವೇಳೆ ಕೋಲಾರದ ಕೆ. ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಗೆ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ ಅವರು ಬಿಜೆಪಿ ಬೆಂಬಲಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ. ಇದು ಬೆಂಗಳೂರು ಸೇರಿದಂತೆ ಸ್ವಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸಂಜೆಯಾಗುತ್ತಿದ್ದಂತೆ ಆಕ್ರೋಶಭರಿತ ಕಾರ್ಯಕರ್ತರು ಶಾಸಕರ ವಾಹನ ತಡೆದಿದ್ದಾರೆ. ಕೋಲಾರ, ಗುಬ್ಬಿ ಸೇರಿದಂತೆ ಕೆಲವೆಡೆ ಪ್ರತಿಭಟನೆಯೂ ನಡೆದಿದೆ. ಸಾಲದೆಂಬಂತೆ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈಕುಂಠ ಸಮಾರಾಧನೆಯ ಪೋಸ್ಟರ್ ಹೊರಡಿಸಿದ್ದಾರೆ.












Click it and Unblock the Notifications