ಜೆಡಿಎಸ್‌ ನ ಅಭ್ಯರ್ಥಿಗಳ (JDS) ಎರಡನೇ ಪಟ್ಟಿ ರೆಡಿ: ಕಾದುನೋಡುವ ತಂತ್ರದ ಹಿಂದಿದ್ಯಾ ದಳಪತಿಗಳ ಲೆಕ್ಕಾಚಾರವೇನು?

ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ ವಿಚಾರದಲ್ಲಿ ಜೆಡಿಎಸ್‌ ಜಾಣನಡೆಯನ್ನ ಅನುಸರಿಸುತ್ತಿದೆ.

ಬೆಂಗಳೂರು,ಮಾರ್ಚ್18:‌ ಕರ್ನಾಟಕ ರಾಜ್ಯ ಚುನಾವಣಾ ಕಣ ರಂಗೇರುತ್ತಿದೆ. ಎಲೆಕ್ಷನ್ ಘೋಷಣೆಗೆ ಕೆಲವೇ ದಿನಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ಮತದಾರರ ಮನ ಗೆಲ್ಲಲು ಭರ್ಜರಿ ತಯಾರಿ ನಡೆಸಿವೆ. ಈ ನಡುವೆ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿರುವ ಜೆಡಿಎಸ್‌ ಗೆ ಎರಡನೇ ಪಟ್ಟಿಯೇ ದೊಡ್ಡ ಕಗ್ಗಂಟಾಗಿದೆ.

ಈಗಾಗಲೇ ಮಾರ್ಚ್‌ 15 ರೊಳಗೆ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ. ಆ ಪಟ್ಟಿಯಲ್ಲಿ ಹಾಸನ ಕ್ಷೇತ್ರ ಅಭ್ಯರ್ಥಿಯೂ ಸಹ ಫೈನಲ್‌ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು. ಇನ್ನೂ ಚುನಾವಣೆ ಸಮೀಪಿಸುತ್ತಿದ್ದಂತೆ ಸಾಕಷ್ಟು ಜನ ನಾಯಕರು ಪಕ್ಷ ತೊರೆಯುತ್ತಿದ್ದು, ಪಕ್ಷವನ್ನ ಈ ಬಾರಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದಳಪತಿಗಳು ಸಾಕಷ್ಟು ತಯಾರಿ ನಡೆಸಿದ್ದಾರೆ.

JDS Is Taking Time To Announce Second List Of Candidates

ಹಳೇ ಮೈಸೂರು ಭಾಗದಲ್ಲಿ ದಿನೇ ದಿನೇ ಹಿಡಿತ ಕೈ ತಪ್ಪುತ್ತಿರುವ ದಳಪತಿಗಳಿಗೆ ಹಳೇ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಎರಡನೇ ಪಟ್ಟಿ ತಯಾರಿಯಾಗಿದ್ದತು ಕಾದು ನೋಡುವ ತಂತ್ರಗಾರಿಕೆಯನ್ನ ದಳಪತಿಗಳು ಮೊರೆ ಹೋಗಿದ್ದಾರೆ.

ಎರಡನೇ ಪಟ್ಟಿ ಘೋಷಣೆ ವಿಚಾರದಲ್ಲಿ ಜೆಡಿಎಸ್‌ ಜಾಣನಡೆ ನಡೆಯುತ್ತಿದ್ದು,ಎಲ್ಲಾ ಕ್ಷೇತ್ರದಲ್ಲಿ ಸರ್ವೆ ನಡೆಸಿ ಎರಡ ನೇ ಪಟ್ಟಿ ಅಂತಿಮವಾಗಿ ಬಿಡುಗಡೆ ಮಾಡಲಿದೆ. ಈಗಾಗಾಲೇ ತರಾತುರಿಯಲ್ಲಿ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್‌ ನಡೆಯಿಂದ ರಾಜಕೀಯ ಎದುರಾಳಿಯಾಗಿರುವ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಲಾಭ ನಷ್ಟಗಳು ಕುರಿತು ಚರ್ಚೆಯಾಗುತ್ತಿದೆ ಎನ್ನಲಾಗಿದೆ.

ಇನ್ನೂ ಎರಡನೇ ಪಟ್ಟಿ ಬಿಡುಗಡೆಗೆ ಪಟ್ಟಿ ರೆಡಿಯಾಗಿದ್ದು, ಈ ಕುರಿತು ಜಿಲ್ಲಾ ಮಟ್ಟದಲ್ಲಿ ವರದಿ ಪಡೆದು ಅಭ್ಯರ್ಥಿ ಹೆಸರು ಫೈನಲ್‌ ಮಾಡಲಿದೆ. ಅದಲ್ಲದೆ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದ್ದು ,ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ,ಕಾಂಗ್ರೆಸ್‌ ಟಿಕೆಟ್‌ ಟಿಕೆಟ್‌ ಘೋಷಣೆಯ ಬಳಿಕ ಟಿಕೆಟ್‌ ವಂಚಿತರಾಗಿ ಅನ್ಯ ಪಕ್ಷದ ಅಸಮಾಧಾನಗೊಂಡ ನಾಯಕರು ಜೆಡಿಎಸ್‌ ನತ್ತ ಟಿಕೆಟ್‌ ಗಾಗಿ ಮುಖ ಮಾಡುವ ಸಾಧ್ಯತೆಗಳಿದ್ದು, ಅಂತಹ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿ ಪಕ್ಷವನ್ನ ಬಲಪಡಿಸಬೇಕು ಎಂಬ ಪ್ಲಾನ್‌ ದಳಪತಿಗಳು ನಡೆಸಿದ್ದಾರೆ.

JDS Is Taking Time To Announce Second List Of Candidates

ಕಾಂಗ್ರೆಸ್, ಬಿಜೆಪಿ ಟಿಕೆಟ್ ಘೋಷಣೆಯ ಹಿಂದಿರುವ ರಾಜಕೀಯ ಲೆಕ್ಕಾಚಾರಗಳೇನು?

* ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಗಳು ಕೊರತೆ

* ಬಿಜೆಪಿ,ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಆ ಆಕಾಂಕ್ಷೆಗಳು ಜೆಡಿಎಸ್‌ನತ್ತ ಮುಖ ಮಾಡುವ ಸಾಧ್ಯತೆ

* ಜೆಡಿಎಸ್‌ಗೆ ಅಭ್ಯರ್ಥಿ ಕೊರತೆ ಇರುವ ಕ್ಷೇತ್ರದಲ್ಲಿ ವಲಸೆ ಬರುವವರಿಗೆ ಟಿಕೆಟ್ ನೀಡಲು ಜೆಡಿಎಸ್ ಪ್ಲಾನ್

* ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಹಿಡಿತ ಸಾಧಿಸಲು ಅನುಕೂಲ

* ಅಭ್ಯರ್ಥಿ ಪ್ರಾಬಲ್ಯದಿಂದ ಗೆಲುವು ಸಾಧಿಸಿದರೆ ಪಕ್ಷಕ್ಕೆ ಲಾಭ

* ತಮ್ಮದಲ್ಲದ ಕ್ಷೇತ್ರಗಳಲ್ಲಿ ಈ ತಂತ್ರದಿಂದ ಮತ್ತಷ್ಟು ಲಾಭ ಪಡೆಯಲು ಜೆಡಿಎಸ್ ನಾಯಕರು ಚಿಂತನೆ

ಇನ್ನು ಬಗೆಹರಿಯದ ಹಾಸನ ಟಿಕೆಟ್‌ ಗೊಂದಲ

ಹಾಸನ ಟಿಕೆಟ್ ವಿಚಾರದಲ್ಲಿ ಭವಾನಿ ರೇವಣ್ಣ ಹಾಗೂ ಸ್ವರೂಪ್‌ ಪ್ರಕಾಶ್‌ ನಡುವೆ ಜಟಾಪಟಿ ಏರ್ಪಟ್ಟಿದ್ದು, ಟಿಕೆಟ್‌ ವಿಚಾರದಲ್ಲಿ ದಳಪತಿಗಳು ಹೊಸ ಸೂತ್ರ ಪ್ರಯೋಗ ಮಾಡಲು ಪ್ಲಾನ್‌ ಹಾಕಿಕೊಂಡಿದ್ದಾರೆ. ಪದೇ ಪದೇ ಮಾಜಿ ಮುಖ್ಯಮಂತ್ರಿ ಸಾಮಾನ್ಯ ಕಾರ್ಯಕರ್ತರಿಗೆ ಹಾಸಕ ಟಿಕೆಟ್‌ ಅಂತ ಹೇಳಿದ್ರು, ಅದೇ ಅಲ್ಲದೇ ಹಾಸನ ಟಿಕೆಟ್‌ ಕುರಿತು ನಾನು ಪಕ್ಷವನ್ನ ಕಳೆದುಕೊಳ್ಳಲ್ಲ ಎಂದು ಹೇಳಿದ್ದು, ಭವಾನಿ ಹಾಗೂ ಸ್ವರೂಪ್ ಅವರನ್ನ ಬಿಟ್ಟು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಲು ದಳಪತಿಗಳು ಪ್ಲಾನ್‌ ನಡೆಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+