• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುತೂಹಲ ಮೂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಳೆಯ ಅಧಿಕೃತ ಕಾರ್ಯಕ್ರಮ ಪಟ್ಟಿ!

|
Google Oneindia Kannada News

ಬೆಂಗಳೂರು, ಜು. 25: ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಬೆಳಗಾವಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಳೆ ಹಾನಿ ಹಾಗೂ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಯಡಿಯೂರಪ್ಪ ಅವರು ದೆಹಲಿಯಿಂದ ಹೈಕಮಾಂಡ್ ಸೂಚನೆಯ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ. ಸಂಜೆಯೊಳಗೆ ಹೈಕಮಾಂಡ್‌ನಿಂದ ಸೂಚನೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಹೈಕಮಾಂಡ್ ಸೂಚನೆಯಿಂದ ಗೊತ್ತಾಗುತ್ತದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಚಿವಾಲಯದಿಂದ ಮುಖ್ಯಮಂತ್ರಿಯವರ ಅಧಿಕೃತ ಕಾರ್ಯಕ್ರಮದ ವಿವರ ಪ್ರಕಟಿಸಲಾಗಿದೆ. ಸಹಜವಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪಟ್ಟಿ ಪ್ರತಿದಿನ ಸಂಜೆ ಪ್ರಕಟವಾಗುತ್ತದೆ. ಆದರೆ ಇಂದು ಮಾತ್ರ ನಾಳೆಯ ಕಾರ್ಯಕ್ರದ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಅವರ ಬೆಳಗಾವಿ ಪ್ರವಾಸದಲ್ಲಿರುವಾಗಲೇ ಪ್ರತಿದಿನಕ್ಕಿಂತ ಬೇಗನೆ ಪ್ರಕಟಿಸಲಾಗಿರುವುದು ಕುತೂಹಲ ಮೂಡಿಸಿದೆ. ಇಂದು ಸಂಜೆ ಹೈಕಮಾಂಡ್‌ನಿಂದ ಸೂಚನೆ ಬಂದಂತೆ ನಡೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಹೇಳಿದ್ದಾರೆ. ಆದರೂ ಬೇಗನೆ ನಾಳೆಯ(ಜುಲೈ 26) ಕಾರ್ಯಕಲಾಪಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದು ಕೂಡ ರಾಜಕೀಯ ತಂತ್ರಗಾರಿಕೆ ಎಂದೇ ಹೇಳಲಾಗುತ್ತಿದೆ.

ಅಷ್ಟಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಳೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಏನೇನು ಕಾರ್ಯಕ್ರಮಗಳಿವೆ? ಮುಂದಿದೆ ಮಾಹಿತಿ!

ಸಿಎಂ ನಾಳೆಯ ಮೊದಲ ಕಾರ್ಯಕ್ರಮ

ಸಿಎಂ ನಾಳೆಯ ಮೊದಲ ಕಾರ್ಯಕ್ರಮ

ಮುಖ್ಯಮಂತ್ರಿಗಳ ನಾಳೆಯ ಕಾರ್ಯಕಲಾಪಗಳ ಪಟ್ಟಿಯನ್ನು ಹಿಂದಿನ ದಿನ ಸಂಜೆ ಅಥವಾ ರಾತ್ರಿ ಹಾಕುವುದು ಸಂಪ್ರದಾಯ. ಒಂದೊಮ್ಮೆ ಮುಖ್ಯಮಂತ್ರಿಗಳ ನಿಗದಿತ ಕಾರ್ಯಕ್ರಮದಲ್ಲಿ ಬದಲಾವಣೆ ಆದಾಗ ಮಾತ್ರ ತಕ್ಷಣವೇ ಬದಲಾವಣೆಯ ಪ್ರವಾಸ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ಆದರೆ ನಾಳೆಯ ಕಾರ್ಯಕ್ರಮದ ಪಟ್ಟಿಯನ್ನು ಇಂದು ಬೆಳಗ್ಗೆಯೆ ಸಿಎಂ ಕಾರ್ಯಾಲಯ ಬಿಡುಗಡೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.


ನಾಳೆ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಕಾರ್ಗಿಲ್ ವಿಜಯ ದಿವಸ-2021 ಕಾರ್ಯಕ್ರಮವಿದೆ. ನಾಳೆ ಬೆಳಗ್ಗೆ 09.50 ರಿಂದ 10.10ರವರೆಗೆ ನಡೆಯುತ್ತಿದೆ. ಬೆಂಗಳೂರಿನ ನೆಹರು ತಾರಾಲಯದ ಎದುರಿನ ಇಂದಿರಾ ಗಾಂಧಿ ಸಂಗೀತ ಕಾರಂಜಿ ಉದ್ಯಾನವನದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ನಡೆಯಲಿದೆ. ಇದು ಪ್ರತಿ ವರ್ಷ ನಡೆಯುವ ಕಾರ್ಯಕ್ರಮವಾಗಿದೆ. 20 ನಿಮಿಷಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಆಯೋಜಿಸಿದೆ. ಅದಾದ ಬಳಿಕ ಮತ್ತೊಂದು ಮಹತ್ವದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸುವ ಅಧಿಕೃತ ಕಾರ್ಯಕ್ರಮವಿದೆ.

ಯಡಿಯೂರಪ್ಪ 2ನೇ ಕಾರ್ಯಕ್ರಮ

ಯಡಿಯೂರಪ್ಪ 2ನೇ ಕಾರ್ಯಕ್ರಮ

ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದ ಬಳಿಕ ಮತ್ತೊಂದು ಮಹತ್ವದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ. ಬೆಳಗ್ಗೆ 11ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ವಾಂಕೆಟ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಸಾಮಾನ್ಯವಾಗಿ ಸಾಧನಾ ಸಮಾವೇಶ ಎಂದು ಅರಮನೆ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮ ಮಾಡುವುದು ಸಹಜ. ಆದರೆ ವಿಧಾನಸೌಧದ ಬ್ವಾಂಕ್ವೆಟ್ ಹಾಲ್‌ನಲ್ಲಿ ಸರಳವಾಗಿ ಹಾಗೂ ಸಾಂಕೇತಿಕವಾಗಿ ಬಿಜೆಪಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಮಾಡಲಾಗುತ್ತಿದೆ. ಇಷ್ಟೊಂದು ಸರಳವಾಗಿ ಮಾಡುತ್ತಿರುವ ಕಾರ್ಯಕ್ರಮವೂ ನಡೆಯುವುದು ಅನುಮಾನವಾಗಿದೆ. ಅದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ.

ಹೈಕಮಾಂಡ್ ಸಂದೇಶದ ಬಗ್ಗೆ ಸಿಎಂ ಹೇಳಿಕೆ

ಇಂದು ಸಂಜೆ ಹೈಕಮಾಂಡ್‌ನಿಂದ ಸಂದೇಶ ಬರಲಿದೆ ಎಂಬ ಹೇಳಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ನಾಳೆ ಏನಾಗುತ್ತದೆ ಎಂಬುದು ಅವರಿಗೂ ಗೊತ್ತಿಲ್ಲ ಎಂಬುದು ಅವರ ಮಾತಿನಿಂದಲೇ ವ್ಯಕ್ತವಾಗುತ್ತಿದೆ. ಆದರೂ ನಾಳೆಯ ಕಾರ್ಯಕ್ರಮ ಪಟ್ಟಿಯನ್ನು ಬೇಗನೆ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಮೊದಲನೆಯದಾಗಿ ಹೈಕಮಾಂಡ್‌ನಿಂದ ಏನೆ ಸಂದೇಶ ಬಂದರೂ ನಾಳೆಯ ಎರಡು ಕಾರ್ಯಕ್ರಮಗಳನ್ನು ಮುಗಿಸಿಯೇ ಯಡಿಯೂರಪ್ಪ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಹೈಕಮಾಂಡ್ ಸೂಚನೆ ಪಾಲಿಸುವುದಾಗಿ ಯಡಿಯೂರಪ್ಪ ಅವರೂ ಹೇಳಿದ್ದಾರೆ. ಆದರೂ ಯಡಿಯೂರಪ್ಪ ಅವರ ನಾಳೆಯ ನಡೆ ಕುತೂಹಲ ಮೂಡಿಸಿದೆ.

ಅಷ್ಟಕ್ಕೂ ನಾಳೆ ಏನಾಗಲಿದೆ?

ಅಷ್ಟಕ್ಕೂ ನಾಳೆ ಏನಾಗಲಿದೆ?

ಅಷ್ಟಕ್ಕೂ ನಾಳೆ ಏನಾಗಲಿದೆ ಎಂಬ ಕುತೂಹಲ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ. ಇಂದು ಸಂಜೆ ರಾಜೀನಾಮೆ ಕೊಡುವಂತೆ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಸಂದೇಶ ರವಾನೆ ಮಾಡಿದಲ್ಲಿ ಸರ್ಕಾರ ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶ ಮಾಡುತ್ತಾರಾ? ಅಥವಾ ಹೈಕಮಾಂಡ್ ರಾಜೀನಾಮೆ ಕೊಡಬೇಡಿ. ನೀವೆ ಮುಖ್ಯಮಂತ್ರಿಯಾಗಿ ಮುಂದುವರೆಯಿರಿ ಎಂದು ಸಂದೇಶ ಕಳುಹಿಸುತ್ತದೆಯಾ? ಹಾಗಾದಲ್ಲಿ ರಾಜ್ಯ ಬಿಜೆಪಿಯಲ್ಲಿ ಏನಾಗಬಹುದು ಎಂಬ ಚರ್ಚೆ ಇದೀಗ ರಾಜಕೀಯ ಆಸಕ್ತರಲ್ಲಿ ಜೋರಾಗಿದೆ.

ಒಟ್ಟಾರೆ ನಾಳೆಯ ದಿನ ರಾಜ್ಯ ರಾಜಕೀಯದಲ್ಲಿ ಮಹತ್ವದ ದಿನವಾಗಿ ದಾಖಲಾಗುವುದಂತೂ ಸತ್ಯ. ಒಂದೊಮ್ಮೆ ಯಡಿಯೂರಪ್ಪ ಅವರಿಗೆ, "ರಾಜೀನಾಮೆ ಕೊಡಿ" ಎಂದು ಹೈಕಮಾಂಡ್ ಸಂದೇಶ ರವಾನಿಸಬಹುದು ಅಥವಾ "ರಾಜೀನಾಮೆ ಕೊಡಬೇಡಿ" ಎಂದು ಸಂದೇಶ ರವಾನಿಸಬಹುದು. ಏನೇ ಆದರೂ ಯಡಿಯೂರಪ್ಪ ಅವರ ಪರವಾಗಿ ಮತ್ತೊಮ್ಮೆ ರಾಜ್ಯಾದ್ಯಂತ ಅನುಕಂಪದ ಅಲೆ ಏಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಈ ಎಲ್ಲವನ್ನೂ ಯೋಚಿಸಿಯೇ ಸಿಎಂ ಯಡಿಯೂರಪ್ಪ ಅವರ ನಾಳೆಯ ಕಾರ್ಯಕ್ರಮದ ಪಟ್ಟಿ ಬೇಗನೆ ಬಿಡುಗಡೆ ಮಾಡಲಾಗಿದೆ ಎಂಬ ವಿಶ್ಲೇಷಣೆ ಮಾಲಾಗುತ್ತಿದೆ. ಒಟ್ಟಾರೆ ರಾಜಕೀಯದಲ್ಲಿ ಯಾವುದನ್ನೂ ತಳ್ಳಿಹಾಕುವಂತಿಲ್ಲ. ಯಾವುದನ್ನು ಊಹಿಸುವಂತೆಯೂ ಇಲ್ಲ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ನಾಳೆ ಏನಾಗಬಹುದು? ಎಂಬುದು ಜನ-ಸಾಮಾನ್ಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.

English summary
It is interesting that the official list of tomorrow's(July 26) program of Chief Minister Yediyurappa released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X