Karnataka assembly elections 2023; ನಮಗೆ ಬೇಕಿರೋದು 123, ಬಾಕಿ 100 ನೀವು ಹಂಚಿಕೊಳ್ಳಿ: ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ 130 ಸೀಟು ಬರುತ್ತೆ ಅಂತ ಹೇಳಿದರು. ಎಲ್ಲಾ ಇಟ್ಟುಕೊಂಡೆ ಕಳೆದ ಬಾರಿ 78 ಬರಲಿಲ್ಲ. ಈಗ ಏನು ಇಲ್ಲದೇ ಏನು ಬರುತ್ತೆ ಎಂದು ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಕೋಲಾರ,ಫೆಬ್ರವರಿ14: ವಿಧಾನಸಭಾ ಚುನಾವಣೆಯಲ್ಲಿ ನಮಗೆ ಬೇಕಿರೋದು 123 ಸ್ಥಾನಗಳು ಬಾಕಿ ಉಳಿದ 100 ಸ್ಥಾನಗಳನ್ನ ನೀವು ಹಂಚಿಕೊಳ್ಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರ ಮಾಡುತ್ತೆ ಅದರಲ್ಲಿ ಯಾವುದೇ ಸಂಶಯವಿಲ್ಲ. ಪೂರ್ವದಿಂದ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ , ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ಬರುವುದು ಸತ್ಯ ಎಂದು ಹೇಳಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ತಪ್ಪಿ ಸಿಕ್ಕಿಕೊಂಡಿದ್ದಾರೆ. ಅವರಿಗೆ ಒಳಗೆ ಬರುವುದಕ್ಕೂ ಆಗ್ತಿಲ್ಲ, ಹೊರಗೆ ಹೋಗುವುದಕ್ಕೂ ಆಗ್ತಿಲ್ಲ. ಸಿದ್ದರಾಮಯ್ಯ ನಮಗೆ ಒಳ್ಳೆಯ ಸ್ನೇಹಿತರು,ಎಲ್ಲಾದ್ರೂ ಒಳ್ಳೆಯ ಕಡೆ ಸ್ಪರ್ಧೆ ಮಾಡಲಿ. ಯಾವ ಜಾಗ ಅಂತ ಕೇಳಿದ್ರೆ ಬಹಿರಂಗವಾಗಿ ಹೇಳಲ್ಲ, ಪೋನ್ ನಲ್ಲಿ ಕೇಳಿ ಹೇಳುತ್ತೇನೆ. ಅವತ್ತು ನಮ್ಮ ಮತು ಕೇಳಿ ನೀವು ಗೆದ್ರಿ, ಈಗ ನೀವು ನಮ್ಮ ಜೊತೆಯಲ್ಲಿ ಇಲ್ಲ ಆದರೂ ನಿಮಗೆ ಒಳ್ಳೆದಾಗಲಿ ಎಂದು ಹೇಳಿದರು.

ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಕೆಲಸ ಮಾಡಿದ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯರಿಗೆ ಬಂದಿದ್ದು ಬ್ಯಾನ್ ಮಾಡಿದ್ದ SDP, PFI ಮತಗಳು. ಮೈಸೂರು ಇತಿಹಾಸದಲ್ಲಿ ಅಂತಹ ಎಲೆಕ್ಷನ್ ನಡೆಯಲ್ಲ. 30 ಸಾವಿರದಿಂದ ಗೆಲ್ಲುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದರು, ನಾನು ನಿಲ್ಲಬೇಡಿ ಅಂತ ಹೇಳಿದ್ದೇ. ಎಲೆಕ್ಷನ್ ಗೆ 10 ದಿನ ಇರೋವಾಗಲೇ ನನ್ನ ಬಳಿ ಗೆಲ್ಲೋಲ್ಲ ಅಂತ ಹೇಳಿದ್ರು. ನಾನು ಸೋತುಬಿಡ್ತಿನಿ ಕಣಯ್ಯ ಎಲ್ರೂ ಒಂದಾಗಿದ್ದಾರೆ ಅಂತ ಹೇಳಿದ್ರು. ಧೈರ್ಯ ಬಿಡಬೇಡಿ ನಾವೆಲ್ಲಾ ಇದ್ದಿವಿ ಅಂತ ವಿಶ್ವಾಸ ನೀಡದ್ದೆ ಎಂದು ಹೇಳಿದರು.
ಚುನಾವಣೆ ಖರ್ಚಿಗಾಗಿ ಸಿದ್ದರಾಮಯ್ಯರಿಗಾಗಿ ನನ್ನ 60 ಲಕ್ಷ ರೂ ಸೈಟು ಮಾರಿ 30 ಲಕ್ಷ ಅವರ ಕೈಗೆ ಕೊಟ್ಟಿದ್ದೇನೆ. ನನಗೆ ಆ ವೇಳೆ ಮೂಗಿನಲ್ಲಿ ರಕ್ತ ಬಂದಿತ್ತು. ಅವತ್ತು ನಾನು ದೇವೇಗೌಡರ ಮಾತು ಕೇಳಿದ್ರೆ ಇವತ್ತು ಸಿದ್ದರಾಮಯ್ಯ ಇರುತ್ತಿರಲಿಲ್ಲ. ಅದೇ ರೀತಿ ಬಾದಾಮಿ ಕ್ಷೇತ್ರದಲ್ಲೂ ಇಂತಹ ಇತಿಹಾಸ ಇದೆ ಈಗ ಹೇಳೋಕೆ ಆಗಲ್ಲ. ಮುಸ್ಲಿಂ ಸಮಾಜದವರು ಕಡಿಮೆ ಬಲ ಇರೋರು. ನಮ್ಮ ಹತ್ರ ಹಣ ಇಲ್ಲಾ ಆದರೆ, ಸ್ವಾಭಿಮಾನ ಶಕ್ತಿ ಇದೆ. ಅದರಿಂದಲೇ ನಾಲ್ಕು ವರ್ಷದ MLC ಸ್ಥಾನವನ್ನ ಅವರ ಮುಖಕ್ಕೆ ಎಸೆದು ಬಂದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಜೆಡಿಎಸ್ ಬಹುಮತ ಬರೋದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಸಾಯಬೇಕಾದ್ರೆ ಕೊನೆ ಆಸೆ ಏನು ಅಂತ ಡಾಕ್ಟರ್ ಕೇಳಿದಂತಹ ಪರಿಸ್ಥಿತಿ ಸಿದ್ದರಾಮಯ್ಯದು.ಇವರು ಮುಖ್ಯಮಂತ್ರಿ ಇದ್ದಾಗ 130 ಸೀಟು ಬರುತ್ತೆ ಅಂತ ಹೇಳಿದರು. ಎಲ್ಲಾ ಇಟ್ಟುಕೊಂಡೆ ಕಳೆದ ಬಾರಿ 78 ಬರಲಿಲ್ಲ. ಈಗ ಏನು ಇಲ್ಲದೇ ಏನು ಬರುತ್ತೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications