ಐಎಸ್‌ಐಎಸ್ ಸೇರಿದ್ದ ಕರ್ನಾಟಕದ ಮೂವರ ಸಾವು?
ಬೆಂಗಳೂರು, ಜೂ. 10 : ಜಗತ್ತಿನಲ್ಲಿ ಉಗ್ರರ ಜಾಲ ಹರಡಲು ಪ್ರಯತ್ನ ನಡೆಸುತ್ತಿರುವ ಐಎಸ್ಐಎಸ್ ಸಂಘಟನೆ ಸೇರಿದ್ದ ಕರ್ನಾಟಕದ ಮೂವರು ಯುವಕರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸಿರಿಯಾ ಅಥವ ಇರಾಕ್‌ನಲ್ಲಿ ಇವರು ಮೃತಪಟ್ಟಿರಬಹುದು ಎಂದು ಗುಪ್ತಚರ ಇಲಾಖೆ ಶಂಕಿಸಿದೆ.
ಫಯಾಜ್ ಮೊಹಮದ್, ಅಬ್ದುಲ್ ಖುದ್ದೂಸ್ ಮತ್ತು ಉಮರ್ ಸುಭಾನ್ ಎಂಬ ರಾಜ್ಯದ ಮೂವರು ಸಿರಿಯಾಕ್ಕೆ ಪ್ರವೇಶಿಸಿದ್ದು, ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಇವರಲ್ಲಿ ಇಬ್ಬರು ಬೆಂಗಳೂರಿನವರಾದರೆ,ಇನ್ನೊಬ್ಬರು ವಿಜಯಪುರದವರು ಎಂಬುದು ಸದ್ಯದ ಮಾಹಿತಿ. [ಮೆಹದಿ ವಿರುದ್ಧ 36,986 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ]

ಈ ಮೂವರು 2013ರಿಂದ ನಾಪತ್ತೆಯಾಗಿದ್ದು ಸಿರಿಯಾ ಅಥವ ಇರಾಕ್ ತಲುಪಿರುವ ಸಾಧ್ಯತೆ ಇದೆ. ನೇರವಾಗಿ ಸಿರಿಯಾಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಯಮನ್ ಅಥವ ಸೌದಿ ಅರೇಬಿಯಾದ ಮೂಲಕ ಸಿರಿಯಾ ತಲುಪಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. [ಹುಷಾರ್... ಬೆಂಗಳೂರು, ಕೊಲ್ಕತ್ತಾ ಉಗ್ರರ ತಾಣ]
ಕುಟುಂಬಕ್ಕೆ ಮಾಹಿತಿ ನೀಡಿಲ್ಲ : ಬೆಂಗಳೂರು ಪೊಲೀಸರು ಹೇಳುವ ಪ್ರಕಾರ ಯುವಕರ ಮರಣದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿಲ್ಲ. ಯುವಕರು ಮೃತಪಟ್ಟಿರುವ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. ಆದ್ದರಿಂದ ಕುಟುಂಬದವರಿಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ನವದೆಹಲಿಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಕೇಳಿದ್ದೇವೆ. ಮೂವರು ಯುವಕರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಅವರು ಮೃತಪಟ್ಟಿದ್ದಾರೆಯೇ? ಅಥವ ಜೀವಂತವಾಗಿದ್ದಾರೆಯೇ? ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications