ಒಕ್ಕಲಿಗ ಮೀಸಲಾತಿ ಹೆಚ್ಚಳ; ಇಂದು ಒಕ್ಕಲಿಗ ಸಚಿವರು,ಶಾಸಕರಿಂದ ಸಿಎಂ ಗೆ ಮನವಿ ಸಲ್ಲಿಕೆ
ಬೆಳಗಾವಿ,ಡಿಸೆಂಬರ್ 23: ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಮನವಿ ಸಲ್ಲಿಸುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಒಕ್ಕಲಿಗರ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸುವ ಸಂಬಂಧ ಚರ್ಚಿಸಲು ಬಿಜೆಪಿಯ ಒಕ್ಕಲಿಗ ಸಚಿವರು, ಶಾಸಕರು ಗುರುವಾರ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದು, ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆರ್ಥಿಕವಾಅಗಿ ದುರ್ಬಲ ವರ್ಗಗಳಿಗೆ ಇರುವ ಶೇ 10 ರ ಮೀಸಲಾತಿ ವ್ಯಾಪ್ತಿಗೆ ನಗರ ಪ್ರದೇಶದ ಒಕ್ಕಲಿಗರನ್ನು ತರಬೇಕು. ಪ್ರವರ್ಗ 3 ಎ ನಲ್ಲಿ ಈಗಿರುವ ಶೇ 4 ರಷ್ಟು ಮೀಸಲಾತಿ ಗ್ರಾಮೀಣ ಪ್ರದೇಶದ ಬಡ ಒಕ್ಕಲಿಗರಿಗಷ್ಟೇ ಸಿಗುತ್ತಿದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಮುದಾಯದ ಬದವರು, ಕೊಳಚೆ ಪ್ರದೇಶ ನಿವಾಸಿಗಳು ಮೀಸಲಾತಿಯಿಂದ ವಂಚಿತರಾಗಿದ್ದಾರೆ.
ಇಷ್ಟು ವರ್ಷಗಳು ಜನಾಂಗಕ್ಕೆ ಅನ್ಯಾಯ ಆಗಿರುವುದನ್ನ ಸರಿ ಪರಿಪಡಿಸಬೇಕು. ಒಕ್ಕಲಿಗರಿಗೆ ನ್ಯಾಯಯುತ ಮೀಸಲಾತಿ ಸಿಗಬೇಕು. ಪರಿಶಿಷ್ಟರ ಮೀಸಲಾತಿ ಹೆಚ್ಚಳ ಮಾಡಿದಂತೆ, ಒಕ್ಕಲಿಗರಿಗೂ ಮೀಸಲಾತಿ ಹೆಚ್ಚಿಸಬೇಕು. ಹಾಗೆ ಮಾಡಿದರೆ ಮಾತ್ರ ವಿದ್ಯಾಭ್ಯಾಸ, ಉದ್ಯೋಗದಲ್ಲಿ ಸಹಾಯವಾಗುತ್ತದೆ. ಜನಾಂಗದ ಜನಸಂಖ್ಯೆ ಆಧಾರದಲ್ಲಿ ನ್ಯಾಯ ಸಿಗಬೇಕು. ಇತರರಿಗೆ ಕೊಡಬೇಡಿ ಎನ್ನುವುದಿಲ್ಲ. ಬೇರೆಯವರಂತೆ ಬೀದಿಗಿಳಿದು ಹೋರಾಟ ನಡೆಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಂಪೂರ್ಣ ಭರವಸೆ ಇದೆ. ಈ ಬೇಡಿಕೆ ಈಡೇಸಿದರೆ ಸಮುದಾಯವೂ ಸರ್ಕಾರ ಬೆನ್ನಿಗೆ ನಿಲ್ಲುತ್ತದೆ ಎಂದರು.

ಇನ್ನೂ ಒಕ್ಕಲಿಗ ಉಪ ಪಂಗಡಗಳಾದ ಕುಂಚಿಟಿಗ,ಬಂಟಿರು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಜನವರಿ 4 ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ್ ಸ್ವಾಮೀಜಿ ಸೇರಿದಂತೆ ಸಮುದಾಯದ ಮೂವರು ಸ್ವಾಮೀಜಿಗಳನ್ನು ಭೇಟಿ ಮಾಡಲಾಗುವುದು. ಮೀಸಲಾತಿಯ ಮುಂದಿನ ನಡೆ ಕುರಿತು ಚರ್ಚಿಸಿ, ಮಾರ್ಗದರ್ಶನ ಪಡೆಯಲಾಗುವುದು ಎಂದರು
ನಾವೆಲ್ಲ ಒಟ್ಟಾಗಿ, ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು, ಶ್ರೀ ನಂಜಾವಧೂತ ಸ್ವಾಮಿಗಳು, ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಮತ್ತು ಒಕ್ಕಲಿಗ ಸಂಘದ ಅಭಿಪ್ರಾಯ ಪಡೆದು ಇಂದು ಸಭೆ ನಡೆಸಿದ್ದೇವೆ. ಒಕ್ಕಲಿಗರು ರಾಜ್ಯಕ್ಕೆ ಅನ್ನ ನೀಡುವ ಸಮುದಾಯದವರು. ಈ ಸಮುದಾಯದಲ್ಲಿ ಸಾಕಷ್ಟು ಬಡವರಿದ್ದಾರೆ. ಮೀಸಲಾತಿ ಸಿಕ್ಕಿದರೆ ವಿಧ್ಯಾಭ್ಯಾಸಕ್ಕೆ ಅನುಕೂಲ ಆಗುತ್ತದೆ ಕುಂಚಿಟಿಗರಿಗೆ ಸೆಂಟ್ರಲ್ ಒಬಿಸಿ ಯಲ್ಲಿ ಸೇರ್ಪಡೆ ಆಗಿಲ್ಲ. ಅದನ್ನು ಮನವಿಯಲ್ಲಿ ಸೇರಿಸುತ್ತೇವೆ.

ಮಂಗಳೂರಿನ ಬಂಟ್ ರನ್ನು ಅವರನ್ನೂ ಕೂಡ ಸೇರಿಸುವ ಕೆಲಸ ಆಗಬೇಕಿದೆ. 4% ಹಳ್ಳಿ ಯಲ್ಲಿರುವ ಒಕ್ಕಲಿಗರಿಗೆ ಸಿಗುತ್ತಿದೆ. ನಗರ ಪ್ರದೇಶದ ಒಕ್ಕಲಿಗರಿಗೆ ಇದರ ಸೌಲಭ್ಯ ಇಲ್ಲ. ಮೀಸಲಾತಿ ಯನ್ನು 4% ನಿಂದ 12% ಏರಿಸಲು ನಮ್ಮ ಹಕ್ಕೊತ್ತಾಯ ಇದೆ. ನಾವೆಲ್ಲ ಒಗ್ಗಟ್ಟಿನಿಂದ ನಮ್ಮ ಜನಾಂಗಕ್ಕೆ ಆದ ಅನ್ಯಾಯವನ್ನು ಸರಿಪಡಿಸಲು ನಾವೆಲ್ಲ ಕಂಕಣ ಬದ್ಧರಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ನಮ್ಮ ಮುಖ್ಯಮಂತ್ರಿಗಳ ಪರಿಗಣನೆ ಮಾಡುತ್ತಾರೆ ಎಂದು ಸಂಪೂರ್ಣ ಭರವಸೆ ಇದೆ ಎಂದರು.
ಇನ್ನೂ ಸಭೆಯಲ್ಲಿ ಸಚಿವರಾದ ಆರ್ ಅಶೋಕ, ಡಾ.ಸಿ.ಎನ್ ಅಶ್ವತ್ಥನಾರಾಯಣ, ಅರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಡಾ.ಸುದಾಕರ್, ನಾರಾಯಣಗೌಡ, ಶಾಸಕರಾದ ಕೃಷ್ಣಪ್ಪ, ಭೋಪಯ್ಯ, ಸುಕುಮಾರ ಶೆಟ್ಟಿ, ಡಾ.ರಾಜೇಶ ಗೌಡ, ಮಸಾಲೆ ಜಯರಾಂ, ರಾಜೇಶ ನಾಯ್ಕ, ನಾಗೇ ತುಳಸಿ ಮುನಿರಾಜು, ಸತೀಶ ರೆಡ್ಡಿ, ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications