ಚಿತ್ರಗಳು : ಕರ್ನಾಟಕದ ರಾಜಕೀಯ ನಾಯಕರ ಯೋಗ ಪ್ರದರ್ಶನ
ಬೆಂಗಳೂರು, ಜೂ. 22 : ಭಾನುವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕರ್ನಾಟಕದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲಾ-ಕಾಲೇಜು, ಆಟದ ಮೈದಾನ, ಸಭಾಂಗಣ ಸೇರಿದಂತೆ ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ಯೋಗ ಪ್ರದರ್ಶನ ನಡೆಯಿತು.
ಸರ್ಕಾರಿ ಮತ್ತು ಖಾಸಗಿ ಶಾಲಾ- ಕಾಲೇಜುಗಳು, ವಿವಿಧ ಸಂಘ-ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನ, ರಾಜಕೀಯ ಪಕ್ಷದ ಕಚೇರಿಗಳು ಭಾನುವಾರ ಯೋಗದಿನಕ್ಕೆ ಸಾಕ್ಷಿಯಾಗಿದ್ದವು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಯೋಗ ಮಾಡಿದರು. [ಚಿಣ್ಣರೊಂದಿಗೆ ಬೆರೆತು ಯೋಗ ಗುರುವಾದ ನರೇಂದ್ರ ಮೋದಿ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಂಠೀರವ ಕ್ರೀಡಾಂಗಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಶ್ವಾಸಗುರು ವಚನಾನಂದ ಸ್ವಾಮೀಜಿ ಜೊತೆ ಸಿದ್ದರಾಮಯ್ಯ ಯೋಗ ಮಾಡಿದರು. [ಶಾಲಾ ಪಠ್ಯದಲ್ಲಿ ಯೋಗ ಅಳವಡಿಕೆ: ಸಿದ್ದರಾಮಯ್ಯ]
ಉಳಿದಂತೆ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಎಂ.ಪಿ.ರೇಣುಕಾಚಾರ್ಯ ಅವರು ಯೋಗ ಮಾಡಿದರು. ಕರ್ನಾಟಕದ ನಾಯಕರು ಯೋಗದ ಚಿತ್ರಗಳು ಇಲ್ಲಿವೆ.

ವಿಧಾನಸೌಧದ ಆವರಣ ಬೆಂಗಳೂರು
ಆಯುಷ್ ಇಲಾಖೆ ವಿಧಾನಸೌಧದ ಮುಂಭಾಗ ವಿಶ್ವ ಯೋಗದಿನ ಕಾರ್ಯಕ್ರಮ ಆಯೋಜಿಸಿತ್ತು. ಎನ್‌ಸಿಸಿ ಕೆಡೆಟ್‌ಗಳು ಯೋಗ ಪ್ರದರ್ಶನ ಮಾಡಿದರು. ವೇದಿಕೆ ಮೇಳಿದ್ದ ಕೇಂದ್ರ ಸಚಿವ ಆನಂತಕುಮಾರ್, ಸಚಿವ ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯೆ ತಾರಾ, ಕುರ್ಚಿಗಳ ಮೇಲೆಯೇ ಯೋಗ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಯು.ಟಿ.ಖಾದರ್, ಶರಣಪ್ರಕಾಶ್ ಪಾಟೀಲ್ ಯೋಗ ವೀಕ್ಷಿಸಿದರು.

ಕಂಠೀರವ ಕ್ರೀಡಾಂಗಣ, ಬೆಂಗಳೂರು
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ನಟಿ ಶಿಲ್ಪಾ ಶೆಟ್ಟಿ, ಶ್ವಾಸಗುರು ವಚನಾನಂದ ಸ್ವಾಮೀಜಿ ಜೊತೆ ಸಿದ್ದರಾಮಯ್ಯ ಯೋಗ ಮಾಡಿದರು.

ಆರ್.ವಿ.ದೇಶಪಾಂಡೆ ಯೋಗ
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಗಳ ಜೊತೆ ಅವರು ಯೋಗ ಮಾಡಿದರು.

ಕೇರಳದಲ್ಲಿ ಯೋಗ ಮಾಡಿದ ಡಿವಿ ಸದಾನಂದ ಗೌಡರು
ಅಂತರಾಷ್ಟ್ರೀಯ ಯೋಗದ ಅಂಗವಾಗಿ ಕೇರಳದ ತಿರುವನಂತಪುರದಲ್ಲಿ ವಿವಿಧ ಕಡೆಗಳಲ್ಲಿ ನಡೆದ ಯೋಗ ದಿನದಲ್ಲಿ ಭಾಗವಹಿಸಿದೆ ಎಂದು ಕೇಂದ್ರ ಕಾನೂನು ಸಚಿವ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಯೋಗ ಮಾಡಿದ ಪ್ರಹ್ಲಾದ್ ಜೋಶಿ
ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಧಾರವಾಡದ ಸತ್ಯಸಾಯಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಮಾಡಿದರು.

ರೇಣುಕಾಚಾರ್ಯ ಯೋಗ ಪ್ರದರ್ಶನ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಯೋಗ ಪ್ರದರ್ಶನ ನೀಡಿದರು.

ಮೈಸೂರಿನಲ್ಲಿ ಯೋಗ ಮಾಡಿದ ಎಸ್.ಎ.ರಾಮದಾಸ್
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಎಸ್. .ಎ.ರಾಮದಾಸ್ ಯೋಗ ಪ್ರದರ್ಶನ ನೀಡಿದರು.

ಕಟೀಲ್ ಯೋಗ ಪ್ರದರ್ಶನ
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಯೋಗ ಮಾಡಿದರು.

ಯೋಗ ಕಾರ್ಯಕ್ರಮ ಉದ್ಗಾಟಿಸಿದ ಬಿಎಸ್‌ವೈ
ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದರು.












Click it and Unblock the Notifications