ಜು.13ರವರೆಗೆ ಕರಾವಳಿ, ಮಲೆನಾಡಿಗೆ ಬಾರಿ ಮಳೆ ನಿರೀಕ್ಷೆ
ಬೆಂಗಳೂರು ಜು.8: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜು.13ರವರೆಗೆ ಗುಡುಗು, ಗಾಳಿ ಸಹಿತ ಅತೀ ಭಾರಿ ಹಾಗೂ ಭಾರಿ ಮಳೆ ನಿರೀಕ್ಷೆ ಇದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಮೂರು ದಿನ 'ರೆಡ್ ಅಲರ್ಟ್' ಕೊಡಲಾಗಿದೆ.
ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆ, ವೈಪರಿತ್ಯಗಳ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳು ಅಕ್ಷರಶಃ ತತ್ತರಿಸಿವೆ. ಕಳೆದೊಂದು ವಾರದಿಂದ ಈ ಭಾಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದೀಗ ಪುನಃ ಮತ್ತದೇ ಭಾಗಗಳಲ್ಲಿ ಮುಂದಿನ ಐದು ದಿನ ಮಳೆ ಮುಂದುವರಿಯಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಕಂಡು ಕರಾವಳಿಗರು ಆತಂಕಕ್ಕೀಡಾಗಿದ್ದಾರೆ.
ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರ ಸಹಿತ ಜು.10ರವರೆಗೆ ಗುಡುಗು ಸಹಿತ ಅತ್ಯಧಿಕ ಭಾರಿ ಮಳೆ ಬರಲಿರುವುದರಿಂದ 'ರೆಡ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಅಂದರೆ ಈ ಮೂರು ದಿನ ಈ ಜಿಲ್ಲೆಗಳ ಹಲವೆಡೆ 20ಸೆಂ.ಮೀ.ಗಿಂತಲೂ ಅಧಿಕ ಮಳೆ ಸುರಿಯಬಹುದು ಎಂದು ನಿರೀಕ್ಷಿಸಲಾಗಿದೆ. ನಂತರ ಜು.13ರವರೆಗೆ ಭಾರಿ ಮಳೆಯ ಕಾರಣಕ್ಕೆ ಅದೇ ಮೂರು 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಲೆನಾಡಿನ 4ಜಿಲ್ಲೆಗೆ ಅಲರ್ಟ್
ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಒಳಪಡುವ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಜು.9 ಮತ್ತು 10ರಂದು ಧಾರಾಕಾರ ಮಳೆ ಬೀಳಲಿದ್ದು, 'ಆರೆಂಜ್ ಅಲರ್ಟ್' ನೀಡಲಾಗಿದೆ. ಅಂದರೆ ಈ ಅವಧಿಯಲ್ಲಿ ಸುಮಾರು 11ರಿಂದ 20ಸೆಂ.ಮೀ.ನಷ್ಟು ಮಳೆ ದಾಖಲಾಗುವ ಸಂಭವವಿದೆ. ನಂತರ ಜು.13ರವರೆಗೆ ಹಾಸನ ಸೇರಿದಂತೆ ಮಲೆನಾಡಿನ ಈ ನಾಲ್ಕು ಜಿಲ್ಲೆಗಳು 'ಯೆಲ್ಲೋ ಅಲರ್ಟ್' ಪಡೆದಿವೆ.

ಮಳೆ ಕಂಡ ಉತ್ತರ ಒಳನಾಡು
ಮುಂಗಾರು ಆರಂಭವಾದಾಗಿನಿಂದ ಮಳೆ ಕಾಣದ ಉತ್ತರ ಒಳನಾಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮುಂಗಾರು ಚುರುಕಾಗಿದೆ. ಈ ಭಾಗದ ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿಗೆ ಭಾರಿ ಮಳೆ ಆಗಲಿದ್ದು, ಮುಂದಿನ ಐದು ದಿನವು 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಭಾನುವಾರ ಮಾತ್ರ ಬೀದರ್ ಜಿಲ್ಲೆ ಕೆಲವೆಡೆ ಭಾರಿ ಮಳೆ ಬರಲಿರುವ ಹಿನ್ನೆಲೆ ಅಂದು ಆ ಜಿಲ್ಲೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ವರದಿ ವರದಿ ತಿಳಿಸಿದೆ.

ಜು.19ರವರೆಗೂ ಸ್ಟ್ರಫ್, ವಾಯುಭಾರ ಕುಸಿತ
ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಮೇಲ್ಮೈ ಸುಳಿಗಾಳಿ ಇನ್ನಷ್ಟು ತೀವ್ರಗೊಂಡಿದೆ. ಅದು ರಾಜ್ಯದ ಪಶ್ಚಿಮ ಘಟ್ಟಗಳತ್ತ ಗಂಟೆಗೆ ಸುಮಾರು 50 ಕಿ.ಮೀ.ವೇಗದಲ್ಲಿ ಚಲಿಸುತ್ತಿದೆ. ಈ ತೇವ ಸಹಿತ ಗಾಳಿಯು ಅರಬ್ಬಿ ಸಮುದ್ರ ಮಟ್ಟಕ್ಕಿಂತ ಸುಮಾರು 5-6ಕಿ.ಮೀ.ವರೆಗೆ ಎತ್ತರದಲ್ಲಿದೆ.
ಅಲ್ಲದೇ ಮಹಾರಾಷ್ಟ್ರ ಕರಾವಳಿಯಲ್ಲೂ ಉಂಟಾಗಿರುವ ವಾಯುಭಾರ ಕುಸಿತ ಕೇರಳ ಕರಾವಳಿ ಕಡೆಗೆ ಸಾಗಿದೆ. ಇದು ತೀವ್ರಗೊಂಡರೆ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಓಡಿಶಾದ ದಕ್ಷಿಣ ಕರಾವಳಿಯಿಂದ ಆಂಧ್ರ ಕರಾವಳಿಯ ಬಂಗಾಳಕೊಲ್ಲಿವರೆಗೂ ಸಮುದ್ರ ಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ಸಾಲದೆಂಬಂತೆ ಉತ್ತರ ಭಾರತದಲ್ಲಿ ಭೂಮಿ ಮೇಲ್ಮೈನಲ್ಲಿ ಗಾಳಿಯ ಒತ್ತಡ ಹೆಚ್ಚಾಗಿದೆ. ಇವುಗಳ ಕಾರಣದಿಂದ ಕರ್ನಾಟದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಹಾಗೂ ಚಳಿಯ ವಾತಾವರಣ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಕಾರವಾರದಲ್ಲಿ200ಮಿ.ಮೀ.ಗೂ ಅಧಿಕ ಮಳೆ
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಕರಾವಳಿಯ ಕಾರವಾರದಲ್ಲಿ ಅತ್ಯಧಿಕ ಮಳೆ 205.2ಮಿ.ಮೀ ಮಳೆ ದಾಖಲಾಗಿದೆ. ಇದನ್ನು ರಾಜ್ಯದಲ್ಲೇ ಅಧಿಕ ಮಳೆ ಎನ್ನಬಹುದು. ಎರಡನೇ ಸ್ಥಾನದಲ್ಲಿ198.7ಮಿ.ಮೀ. ಮಳೆ ಕಂಡ ಹೊನ್ನಾವರ ಇದೆ. ಉಳಿದಂತೆ ಮಂಗಳೂರಿನಲ್ಲಿ 106.6ಮಿ.ಮೀ., ಗೋಕರ್ಣದಲ್ಲಿ 55.6ಮಿ.ಮೀ. ಮಳೆ ಬಿದ್ದಿದೆ. ಇದರೊಂದಿಗೆ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಮಳೆ ದಾಖಲಾಗಿದೆ. ರಾಜ್ಯದ ಗರಿಷ್ಠ ತಾಪಮಾನ ಬಳ್ಳಾರಿ, ರಾಯಚೂರು ಮತ್ತು ಕಲಬುರಗಿಯಲ್ಲಿ (ತಲಾ 30ಡಿ.ಸೆ.) ದಾಖಲಾಗಿದೆ. ರಾಜ್ಯದ ಕನಿಷ್ಠ ತಾಪಮಾನ ಬೆಂಗಳೂರಿನ ಜಿಕೆವಿಕೆ ಮತ್ತು ಮಡಿಕೇರಿಯಲ್ಲಿ (18.5ಡಿ.ಸೆ.) ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಜು.12ರವರಗೆ ಬೆಂಗಳೂರಲ್ಲಿ ತುಂತುರು ಮಳೆ
ಬೆಂಗಳೂರಿನಲ್ಲಿ ಕೆಳದ ಕೆಲವು ದಿನಗಳಿಂದ ಅಷ್ಟಾಗಿ ಮಳೆ ಆಗಿಲ್ಲ. ಆದರೆ ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ತೀವ್ರ ಚಳಿ ವಾತಾವರಣ ಕಂಡು ಬಂದಿದೆ. ಇದೇ ವಾತಾವರಣ ಜು.12ರವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಅಲ್ಲಿಯವರೆ ನಗರದ ವಿವಿಧೆಡೆ ಸಂಜೆ ನಂತರ ಕೆಲವೊಮ್ಮೆ ಆಗಾಗ ತುಂತುರು ಮಳೆ ಆಗಲಿದೆ. ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಬಹುದು. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 26ಡಿ.ಸೆ. ಹಾಗೂ ಕನಿಷ್ಠ ತಾಪಮಾನ 20ಡಿ.ಸೆ. ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ










Click it and Unblock the Notifications